ಕರಾವಳಿ

ಫಿಶ್ ಮಿಲ್ ತ್ಯಾಜ್ಯ ನೀರು: ಕಲುಷಿತಗೊಂಡಿದೆ ಬಾವಿಗಳ ನೀರು!

Pinterest LinkedIn Tumblr

ಉಡುಪಿ: ಆ ಗ್ರಾಮದ ಜನ ಕೃಷಿ ಮಾಡಿಕೊಂಡು‌ ನೆಮ್ಮದಿಯ ಬದುಕು ಸಾಗಿಸ್ತಾ ಇದ್ರು. ಆದರೆ ಈಗ ಆ ಊರು ಅಕ್ಷರಶಃ ಬರಡು ಭೂಮಿಯಾಗಿದೆ ಮಾರ್ಪಟ್ಟಿದೆ. ಅಷ್ಟೇ ಅಲ್ಲ ಕುಡಿಯೋದಿಕ್ಕೆ ಒಂದು ಹನಿ ಜೀವ ಜಲಕ್ಕೂ ಇಲ್ಲಿನ ಜನ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದು ಉಡುಪಿಯ ಜಿಲ್ಲೆಯ‌ ಕುಕ್ಕೆ ಹಳ್ಳಿ ಗ್ರಾಮ. ಅದೆಷ್ಟೋ ವರುಷಗಳಿಂದ ಇಲ್ಲಿನ ಜನ ಕೃಷಿ ಹಾಗೂ‌ ಹೈನುಗಾರಿಕೆಯನ್ನ ನಡೆಸಿಕೊಂಡು ನೆಮ್ಮದಿಯ ಜೀವನ ಸಾಗಿಸ್ತಾ ಇದ್ರು .ಅದ್ರೆ ಈಗ ಮಾತ್ರ ಇಲ್ಲಿನ‌ ಜನ ಕೃಷಿಯನ್ನೆ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ . ಅಷ್ಟೇ ಅಲ್ಲ ಒಂದು ಹನಿ ಕುಡಿಯೋ ನೀರಿಗೂ ಇಲ್ಲಿನ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಗಂತ ಇಲ್ಲಿ ನೀರಿಗೆ ಬರ ಬಂದಿದೆ ಅಂತಾ ತಿಳ್ಕೊಬೇಡಿ. ಇಲ್ಲಿನ ಬಾವಿ ಕೆರೆಗಳಲ್ಲಿ ಬೇಕಾದಷ್ಟು ನೀರಿದೆ. ಅದ್ರೆ ಈ ನೀರನ್ನ ಬಳಸದಷ್ಟು ಹಾಳಾಗಿದೆ. ಎಕೆಂದ್ರೆ ಗ್ರಾಮದಲ್ಲಿ ಕಾರ್ಯಚರಿಸುತ್ತಿರುವ ಫಿಶ್ ಮಿಲ್ ಹೊರ ಚೆಲ್ಲುವ ನೀರಿನಿಂದ ಇಡೀ ಗ್ರಾಮದ ಬಾವಿ‌ ಕೆರೆಗಳ ನೀರು ಸಂಪೂರ್ಣ ಹಾಳಾಗಿದೆ.

ಫಿಶ್ಮಿಲ್ ತ್ಯಾಜ್ಯ ನೀರನ್ನ ನೇರವಾಗಿ ಪೈಪ್ ಮೂಲಕ ಅಕ್ಕಪಕ್ಕದ ಭೂಮಿಗೆ ಹೊರ ಚೆಲ್ಲುವುದರಿಂದ ಇಡೀ ಗ್ರಾಮ ವಾಸನೆಯ ಕುಪ್ಪವಗಿದೆ. ಕುಡಿಯೋಕ್ಕಂತ ಬಾವಿಯಿಂದ ನೀರು ತೆಗೆದ್ರು ಮೀನಿನ ಎಣ್ಣೆ ಬಾವಿ‌ ಸೇರಿದ್ದು‌ ಕುಡಿಯುವ ನೀರಿಗೆ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಸ್ಥಳಿಯರು ಗ್ರಾಮ‌ ಪಂಚಾಯತ್ ಗೆ ಹಲವು ಬರಿ‌ ದೂರು‌ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ.ಪರಿಸರ ಇಲಾಖೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಮುಂದೆ ಜನ ದೂರು ಸಲ್ಲಿಸಿದ್ದಾರೆ.ಫಿಶ್ ಮಿಲ್ ಸ್ಥಗಿತಗೊಳಿಸುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ ಅದ್ರೆ ಜನ ಪ್ರತಿನಿಧಿಗಳು ಇತ್ತ ತಲೆ ಹಾಕುತ್ತಿಲ್ಲ ಅನ್ನೋ ಅಕ್ರೋಶವನ್ನು ಸ್ಥಳೀಯರು ವ್ಯಕ್ತ ಪಡಿಸಿದ್ದಾರೆ.

ತಮ್ಮ‌ಸಮಸ್ಯೆಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು ಸಮಸ್ಯೆ ಬಗೆ ಹರಿಸದಿದ್ರೆ ಚುನಾವಣೆ ಬಹಿಷ್ಕಾರ ಮಾಡುವ ನಿರ್ಧಾರಕ್ಕೆ ಮುಂದಾಗಿದ್ದಾರೆ.

ಕೃಷಿಯನ್ನೇ ನಂಬಿಕೊಂಡಿದ್ದ ಈ ಭಾಗದ ಜನ ಕೃಷಿ ಮಾಡಲಾಗದೇ ಕಂಗಲಾಗಿದ್ದಾರೆ. ಅಧಿಕಾರಿಗಳು ಫಿಶ್ಮಿಲ್ ಮಾಲೀಕರೊಂದಿಗೆ ಸೇರಿ‌‌ ಜನರ ಬದುಕಿಗೆ ಕೊಳ್ಳಿ ಇಟ್ಟಿದ್ದಾರೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಅದಷ್ಟು ಬೇಗ ಸಂಭಂಧಪಟ್ಟ ಅಧಿಕಾರಿಗಳು ಜನರ ಸಂಘಷ್ಟಕ್ಕೆ ಪರಿಹಾರ ಒದಗಿಸಬೇಕೆಂಬುದು ಜನರ ಒತ್ತಾಯವಾಗಿದೆ.

Comments are closed.