ಕರಾವಳಿ

ಕುಂದಾಪುರ: ಬಿಸಿಲಿನ ತಾಪಕ್ಕೆ ವ್ಯಕ್ತಿ ಬಲಿ

Pinterest LinkedIn Tumblr

ಕುಂದಾಪುರ: ಬಿಸಿಲಿನ ತಾಪಕ್ಕೆ ಕುಸಿದು ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಕೊರ್ಗಿ ಶಿರಿಯಾರ ರಸ್ತೆಯಲ್ಲಿ ನಡೆದಿದೆ. ಕುಂದಾಪುರದ ಕೆದೂರು ಧರ್ಮದಗೋಳಿ ನಿವಾಸಿ ಸುರೇಶ್ (30) ಬಿಸಿಲಿನ ಝಳಕ್ಕೆ ಸಾವನ್ನಪ್ಪಿದ ದುರ್ದೈವಿ.

ಸುರೇಶ್ ಅವರು ಬೆಳಿಗ್ಗೆ 8:00 ಗಂಟೆಗೆ ಹೆಸ್ಕೊತ್ತೂರು ಬೈಲು ಎಂಬಲ್ಲಿ ಕೆಲಸಕ್ಕೆ ಹೋದವರು ಮಧ್ಯಾಹ್ನದ ಸುಮಾರಿಗೆ ಬಿಸಿಲಿನ ತಾಪಕ್ಕೆ ಕೊರ್ಗಿ ಶಿರಿಯಾರ ರಸ್ತೆಯಲ್ಲಿ  ಬಿದ್ದವರು ಅಲ್ಲಿಯೇ ಮೃತ ಪಟ್ಟಿದ್ದಾರೆಂದು ಅವರ ಪತ್ನಿ ದೂರು ನೀಡಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಸಾಂದರ್ಭಿಕ ಚಿತ್ರ)

Comments are closed.