ಕರಾವಳಿ

ಸಚಿವ ಪ್ರಮೋದ್ ಮಧ್ವರಾಜ್ ಪ್ರಚಾರ ವಾಹನಕ್ಕೆ ಕೊನೆಗೂ ಬಂತು ಕಾಂಗ್ರೆಸ್ ಚಿಹ್ನೆ!

Pinterest LinkedIn Tumblr

ಉಡುಪಿ: ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರ್ಪಡೆ ಅಗ್ತಾರೆ ಅಂತಾ ಭಾರೀ ಸುದ್ದಿಯಾಗಿತ್ತು. ಈ‌ ಬಗ್ಗೆ ರಾಜಕೀಯದಲ್ಲಿ ಬಿಸಿಬಿಸಿ ಚರ್ಚೆ ಕೂಡ ನಡೆದಿತ್ತು, ಇದು ಸತ್ಯವೇನೊ ಅನ್ನಿಸುವಂತೆ ಪ್ರಮೋದ್ ಮಧ್ವರಾಜ್ ಪ್ರಚಾರ ವಾಹನ ಕೂಡ ಜನರಲ್ಲಿ ಗೊಂದಲವನ್ನು ಮೂಡಿಸಿತ್ತು.ಆದರೇ ಅದೆಲ್ಲಾ ಗೊಂದಲಕ್ಕೆ ಸದ್ಯ ತೆರೆಬಿದ್ದಿದೆ.

ಪ್ರಮೋದ್ ಮಧ್ವರಾಜ್ ಸಾಧನೆಯ ಬಗ್ಗೆ ಚುನಾವಣೆ ಪ್ರಚಾರಕ್ಕೆ ಬಳಸಿದ್ದ ವಾಹನದಲ್ಲಿ‌ ಕಾಂಗ್ರೆಸ್ ಚಿಹ್ನೆ ಮಾಯಾವಾಗಿತ್ತು. ಅಷ್ಟೇ ಅಲ್ಲ ರಾಜ್ಯ ಹಾಗೂ ರಾಷ್ಟ ಕಾಂಗ್ರೆಸ್ ನಾಯಕರ ಚಿತ್ರಗಳು ಕೂಡ ಈ ವಾಹನದಲ್ಲಿ ಹಾಕಿರಲಿಲ್ಲ. ಇದರಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭಾರೀ ಗೊಂದಲ ಉಂಟಾಗಿತ್ತು.ಈ ಬಗ್ಗೆ ಮಾಧ್ಯಮಗಳಲ್ಲಿ ಭಾರೀ ಚರ್ಚೆ ಕೂಡ ನಡೆದಿತ್ತು.ಇದೀಗ ಪ್ರಮೋದ್ ಮಧ್ವರಾಜರ ಪ್ರಚಾರ ವಾಹನದಲ್ಲಿ ಧಿಡೀರ್ ಪಕ್ಷದ ಚಿಹ್ನೆ ಕಾಣಿಸಿಕೊಂಡಿದೆ.ವಾಹನದ ನಾಲ್ಕು‌ ಕಡೆಗಳಲ್ಲೂ ಚಿಹ್ನೆಯನ್ನ ಹಾಕಲಾಗಿದೆ.

ಇತ್ತೀಚೆಗೆ ಬಿಜೆಪಿ ಸೇರೊ ಬಗ್ಗೆ ಗೊಂದಲಗಳ ಹೇಳಿಕೆ ನೀಡಿ‌ ಸಚಿವರು ಮುಜುಗರಕ್ಕೊಳಗಾಗಿದ್ರು. ಈ ಕಾರಣದಿಂದ ಪ್ರಚಾರ ವಾಹನಕ್ಕೆ ಕಾಂಗ್ರೆಸ್ ಚಿಹ್ನೆ ಹಾಕಿರಬಹುದು ಎಂದು ಹೇಳಲಾಗುತ್ತಿದೆ.

Comments are closed.