ಕರಾವಳಿ

ರಾಜ್ಯಾದ್ಯಂತ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭ : ಜಿಲ್ಲೆಯಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ನೋಂದಣಿ

Pinterest LinkedIn Tumblr

ಮಂಗಳೂರು ಮಾರ್ಚ್ 23 : ಪ್ರಸಕ್ತ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಶುಕ್ರವಾರ ರಾಜ್ಯಾದ್ಯಂತ ಆರಂಭಗೊಂಡಿದ್ದು, ಏಪ್ರಿಲ್ 6ರವರೆಗೆ ನಡೆಯಲಿದೆ.

ಜಿಲ್ಲೆಯಲ್ಲಿ ಈ ವರ್ಷ ಪರೀಕ್ಷೆಗೆ ಒಟ್ಟು 32786 ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಅದರಲ್ಲಿ 17364 ವಿದ್ಯಾರ್ಥಿಗಳು ಹಾಗೂ 15422 ವಿದ್ಯಾರ್ಥಿನಿಯರು ಸೇರಿದ್ದಾರೆ. ಈ ಪೈಕಿ 28966 ಶಾಲಾ ವಿದ್ಯಾರ್ಥಿಗಳು, 2263 ಶಾಲಾ ಪುನರಾವರ್ತಿತ ಅಭ್ಯರ್ಥಿಗಳು, 1215 ಖಾಸಗಿ ಅಭ್ಯರ್ಥಿಗಳು ಹಾಗೂ 342 ಖಾಸಗಿ ಪುನಾರವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 94 ಪರೀಕ್ಷಾ ಕೇಂದ್ರಗಳಿದ್ದು ಅವುಗಳ ತಾಲೂಕುವಾರು ಬಂಟ್ವಾಳ 17, ಬೆಳ್ತಂಗಡಿ 13 , ಮಂಗಳೂರು ಉತ್ತರ 21, ಮಂಗಳೂರು ದಕ್ಷಿಣ 20, ಮೂಡಬಿದ್ರೆ 4, ಪುತ್ತೂರು 12, ಸುಳ್ಯ 7 ಕೇಂದ್ರಗಳಿವೆ. ಖಾಸಗಿ ಅಭ್ಯರ್ಥಿಗಳಿಗೆ 4 ಪರೀಕ್ಷಾ ಕೇಂದ್ರಗಳು ಮಂಗಳೂರು ಉತ್ತರ ವ್ಯಾಪ್ತಿಯಲ್ಲಿದೆ.

2018ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಶಾಲಾ ಮತ್ತು ಖಾಸಗಿ ಅಭ್ಯರ್ಥಿಗಳು ಹಾಜರಾಗಲಿದ್ದು ಇದಕ್ಕಾಗಿ ಎಲ್ಲಾ 7 ವಲಯಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಹಾಗೂ ಆಸನಗಳ ಲಭ್ಯತೆಯಿರುವ 94 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದ್ದು ಒಟ್ಟು 1448 ಪರೀಕ್ಷಾ ಕೊಠಡಿಗಳು ಲಭ್ಯವಿರುತ್ತದೆ.

ವಿಚಕ್ಷಣ ಜಾಗೃತ ದಳ :

ಜಿಲ್ಲೆಯ 7 ವಲಯಗಳ 94 ಪರೀಕ್ಷಾ ಕೇಂದ್ರಗಳ ಪರೀಕ್ಷಾ ಪ್ರಕ್ರಿಯೆ ವೀಕ್ಷಣೆಗೆ ಅಗತ್ಯವಿರುವಷ್ಟು ಜಿಲ್ಲಾ ಹಂತದ ವಿಚಕ್ಷಣಾ ದಳವನ್ನು ನೇಮಿಸಲಾಗಿದೆ. ಅಲ್ಲದೇ 94 ಮುಖ್ಯ ಅಧೀಕ್ಷಕರು, 31 ಉಪ ಮುಖ್ಯ ಅಧೀಕ್ಷಕರು ಹಾಗೂ 94 ಕಸ್ಟೋಡಿಯನ್‍ಗಳನ್ನು ನೇಮಿಸಲಾಗಿದೆ

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಪ್ರಮುಖ ವಿಷಯಗಳ ವೇಳಾಪಟ್ಟಿ:

ಮಾರ್ಚ್ 23 ಪ್ರಥಮ ಭಾಷೆ, ಮಾರ್ಚ್ 26 ಗಣಿತ, ಮಾರ್ಚ್ 28 ಇಂಗ್ಲೀಷ್, ಏಪ್ರಿಲ್ 2 ವಿಜ್ಞಾನ, ಏಪ್ರಿಲ್ 4 ತೃತೀಯ ಭಾಷೆ , ಏಪ್ರಿಲ್ 6 ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಒಟ್ಟು 2 ಗಂಟೆ 45 ನಿಮಿಷ ಇರಲಿದೆ. ಇದಲ್ಲದೇ, ಪ್ರತೀ ಪರೀಕ್ಷೆಯ ಆರಂಭದಲ್ಲಿ 15 ನಿಮಿಷ ಪ್ರಶ್ನೆ ಪತ್ರಿಕೆಗಳನ್ನು ಓದಲು ಮೀಸಲಿರಿಸಲಾಗಿದೆ.

Comments are closed.