ರಾಷ್ಟ್ರೀಯ

ಮದುವೆಯ ಮುನ್ನಾ ದಿನ ಮಗಳನ್ನೇ ಇರಿದು ಹತ್ಯೆ ಮಾಡಿದ ತಂದೆ!

Pinterest LinkedIn Tumblr

ಮಲ್ಲಾಪ್ಪುರಂ: ಮದುವೆಗೆ ಕೆಲವೇ ಕೆಲವು ಗಂಟೆಗಳು ಬಾಕಿಯಿರುವಾಗ 22 ವರ್ಷದ ಮಗಳನ್ನು ತಂದೆಯೇ ಹತ್ಯೆ ಮಾಡಿದ ಘಟನೆ ಗುರುವಾರ ಕೇರಳದ ಅರೆಕೋಡ್ ಜಿಲ್ಲೆಯಲ್ಲಿ ನಡೆದಿದೆ.

ಅತಿರಾ(22) ಕೊಲೆಯಾದ ದುರ್ದೈವಿ. ಈಕೆ ಪಾತನಾಪುರಂನ ಪೋವತಿಂಗಲ್ ನಿವಾಸಿಯಾಗಿದ್ದು, ಆರೋಪಿ ತಂದೆ ರಜನ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಯುವತಿಯ ವಿವಾಹ ಆರ್ಮಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತನ್ನ ಪ್ರಿಯಕರನ ಜೊತೆ ಮದುವೆ ಆಗಬೇಕಿತ್ತು. ಆದರೆ ಮದುವೆಯ ಹಿಂದಿನ ದಿನವೇ ತಂದೆ ತನ್ನ ಮಗಳನ್ನು ಕೊಲೆ ಮಾಡಿದ್ದಾನೆ.

ಪೊಲೀಸರ ಪ್ರಕಾರ ಅತಿರಾ ಕೋಯಿಲಂದಿ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು. ಆತ ಬೇರೆ ಜಾತಿಯವನಾಗಿದ್ದ. ಆದರೆ ಆಕೆಯ ತಂದೆ ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ನಂತರ ಅತಿರಾ ಒತ್ತಡ ಹೇರುತ್ತಿದ್ದರಿಂದ ತಂದೆ ಮದುವೆಗೆ ಒಪ್ಪಿಕೊಂಡಿದ್ದರು. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಶುಕ್ರವಾರದಂದು ಮದುವೆ ನಿಗದಿಯಾಗಿತ್ತು.

ಆದ್ರೆ ಗುರುವಾರ ಮಧ್ಯಾಹ್ನ ಅತಿರಾ ಹಾಗೂ ತಂದೆ ರಜನ್ ನಡುವೆ ಮದುವೆ ವಿಚಾರವಾಗಿ ಜಗಳವಾಗಿ ವಾಗ್ವಾದ ನಡೆಸಿದ್ದರು. ವಾದ ವಿವಾದ ತಾರಕಕ್ಕೇರಿ ತಂದೆ ಮಗಳಿಗೆ ಹಲವು ಬಾರಿ ಚಾಕಪುವಿನಿಂದ ಇರಿದಿದ್ದಾನೆ. ಅತಿರಾಳನ್ನು ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು ಎಂದು ವರದಿಯಾಗಿದೆ. ರಜನ್ ಡ್ರೈವರ್ ಕೆಲಸ ಮಾಡುತ್ತಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Comments are closed.