ಕರಾವಳಿ

ವರ್ಲಿ ಅಪ್ಪಾಜಿ ಬೀಡು ಫ಼ೌಂಡೇಶನ್ ಬೆಳ್ಳಿ ಹಬ್ಬ ಸಮಿತಿಯ ಕಾರ್ಯಾಧ್ಯಕ್ಷರಾಗಿ ದಿನೇಶ್ ಕುಲಾಲ್ ನೇಮಕ

Pinterest LinkedIn Tumblr

ಮುಂಬಯಿ : ಕಳೆದ 25ವರ್ಷಗಳಿಂದ ನಗರದ ವರ್ಲಿ ಪರಿಸರದಲ್ಲಿ ಧಾರ್ಮಿಕ ಹಾಗೂ ಸಮಾಜ ಸೇವಾ ನಿರತವಾಗಿರುವ ಅಪ್ಪಾಜಿ ಬೀಡು ಫೌಂಡೇಶನ್ ಈಗಾಗಲೇ 25 ರ ಸಂಭ್ರಮದಲ್ಲಿದ್ದು, ಇತ್ತೀಚಿಗೆ ರಮೇಶ್ ಗುರುಸ್ವಾಮಿಯವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮುಂಬಾಯಿ ನಗರದ ಪತ್ರಕರ್ತ, ಜನಪ್ರಿಯ ಸಂಘಟಕ ಬಿ, ದಿನೇಶ್ ಕುಲಾಲ್ ಇವರನ್ನು ಬೆಳ್ಳಿ ಹಬ್ಬ ಸಮಿತಿಯ ಕಾರ್ಯಾಧ್ಯಕ್ಷರಾಗಿ ನೇಮಿಸಲಾಯಿತು.

ಈ ವೇಳೆ ಅಧ್ಯಕ್ಷತೆ ವಹಿಸಿದ ರಮೇಶ್ ಗುರುಸ್ವಾಮಿಯವರು ಮಾತನಾಡಿ, ಅಪ್ಪಾಜಿ ಬೀಡು ಫ಼ೌಂಡೇಶನ್ ನ 25ನೇ ಯ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಸಲಿದ್ದು ಇದಕ್ಕೆ ಸರ್ವರ ಸಹಕಾರ ಅಗತ್ಯ ಎಂದು ನುಡಿದರು.

ಸಭೆಯಲ್ಲಿ ಅಪ್ಪಾಜಿ ಬೀಡು ಫ಼ೌಂಡೇಶನ್ ನ ಆಡಳಿತ ಟ್ರಸ್ಟಿ ಶಾಂಭವಿ ಶೆಟ್ಟಿ, ಟ್ರಷ್ಟಿಗಳಾದ ರತ್ನಾಕರ್ ಶೆಟ್ಟಿ, ರಘುನಾಥ ಶೆಟ್ಟಿ, ಅಧ್ಯಕ್ಷರಾದ ಕೇದಗೆ ಸುರೇಶ್ ಶೆಟ್ಟಿ, ಉಪಾಧ್ಯಕ್ಷ ಸಂತೋಶ್ ಶೆಟ್ಟಿ, ಕಾರ್ಯದರ್ಶಿ ವಸಂತ್ ಪೂಜಾರಿ ಹಾಗೂ ಇತರ ಸದಸ್ಯರುಗಳು ಉಪಸ್ಥಿತರಿದ್ದರು.

By Ishwar M. Ail

Comments are closed.