ಕರಾವಳಿ

ಬಿಜೆಪಿ ಸೇರುವುದಕ್ಕೆ ಇಬ್ಬರು ಬಿಜೆಪಿಯ ನಾಯಕರೇ ಅಡ್ಡಗಾಲು: ಸಚಿವ ಪ್ರಮೋದ್ ಮಧ್ವರಾಜ್

Pinterest LinkedIn Tumblr

ಉಡುಪಿ: ಹಲವು ದಿನಗಳಿಂದ ಕಾಂಗ್ರೆಸ್ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರೋ ಬಗ್ಗೆ ಭಾರೀ ಸುದ್ದಿಯಾಗಿತ್ತು. ಇದೀಗ ಸಚಿವ ಪ್ರಮೋದ್ ಮಧ್ವರಾಜ್ ಇದಕ್ಕೆ ಪ್ರತಿಕ್ರಿಯೆಯನ್ನ ಕೊಟ್ಟಿದ್ದಾರೆ. ಬಿಜೆಪಿಯ ಗೇಟ್ ಬಂದಾಗಿದೆ, ಹೀಗಾಗಿ ಬಿಜೆಪಿ ಸೇರೋ ಪ್ರಶ್ನೆನೇ ಬರೋದಿಲ್ಲ ಎಂದಿದ್ದಾರೆ , ಅಷ್ಟೇ ಅಲ್ಲದೇ ನನಗೆ ಬಿಜೆಪಿ ಸೇರುವುದಕ್ಕೆ ಇಬ್ಬರು ಬಿಜೆಪಿಯ ನಾಯಕರೇ ಅಡ್ಡಗಾಲು ಹಾಕಿದ್ದಾರೆ .ಒಬ್ಬರು ಮಾಜಿ ಶಾಸಕರು ಹಾಗೂ ಇನ್ನೊಬ್ಬರು ಕಾಂಗ್ರೆಸ್ಸಿನಿಂದ ಬಿಜೆಪಿಗೆ ಹೋಗಿರುವ ನಾಯಕರು ಅಡ್ಡಗಾಲು ಹಾಕಿದ್ದಾರೆ.ನಾನು ರಾಜ್ಯದ ನಂಬರ್ ವನ್ ಶಾಸಕ ಹೀಗಾಗಿ ನನಗೆ ಡಿಮ್ಯಾಂಡ್ ಇದ್ದೇ ಇರುತ್ತೆ. ಆದ್ರೆ ಬಿಜಪಿಯ ಈ ಇಬ್ಬರು ನಾಯಕರು ಇದಕ್ಕೆ ಅಡ್ಡಗಾಲು ಹಾಕಿದ್ದಾರೆ ಎಂದಿದ್ದಾರೆ.

ಟಿ.ಜೆ. ಅಬ್ರಹಂ ಮೂಲಕ ನನ್ನ ಮೇಲೆ ಬ್ಯಾಂಕ್ ವಂಚನೆ ಆರೋಪವನ್ನು ಹೋರಿಸುವ ಕೆಲಸವನ್ನು ಕೂಡ ಮಾಡಿದ್ದಾರೆ.. ಸದ್ಯಕ್ಕೆ ನನಗೆ ಬಿಜೆಪಿಯ ಗೇಟ್ ಈಗ ಬಂದಾಗಿದೆ. ಹೀಗಾಗಿ ಬಿಜೆಪಿಗೆ ಹೋಗೋ ಪ್ರಶ್ನೆ ಇಲ್ಲ.ನಾನು ಸದ್ಯಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ್ಥಾನಕ್ಕೆ 1 ಲಕ್ಷ ರೂಪಾಯಿ ಕಟ್ಟಿ ಅರ್ಜಿ ಸಲ್ಲಿಸಿದ್ದೇನೆ. ನನ್ನ ದುಡಿಮೆ ಹಣ ನಷ್ಟ ಅಗೋದಕ್ಕೆ ಬಿಡೋದಿಲ್ಲ ಅಂದಿದ್ದಾರೆ.

 

Comments are closed.