ಕರ್ನಾಟಕ

ಕಾಂಡೋಮ್ ಕೊಡಲಿಲ್ಲ ಅಂತ ನರ್ಸ್ ಜತೆ ಜಗಳ..!!

Pinterest LinkedIn Tumblr


ಚಿಕ್ಕಬಳ್ಳಾಪುರ: ಸರ್ಕಾರಿ ಆಸ್ಪತ್ರೆಗೆ ಬಂದ ಸರ್ಕಾರಿ ನೌಕರನೊರ್ವ ಆಸ್ಪತ್ರೆಯಲ್ಲಿದ್ದ ಶುಶ್ರೂಷಕಿ ಕಾಂಡೋಮ್ ಕೊಡಲಿಲ್ಲ ಅಂತ ಗಲಾಟೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಪೇರೇಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ಅಂದ ಹಾಗೆ ತಡರಾತ್ರಿ ಕುಡಿದ ಅಮಲಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದ ಕೆಎಸ್ಆರ್ ಟಿಸಿ ಸಂಸ್ಥೆಯ ಸರ್ಕಾರಿ‌ ನೌಕರನೊರ್ವ ಬಳಿ ದಾದಿಯ ಬಳಿ ಕಾಂಡೋನ್ ಕೇಳಿದನಂತೆ. ಆದ್ರೆ ಕಾಂಡೋಮ್ ಬಾಕ್ಸ್ ನಲ್ಲಿದೆ ತೆಗೆದುಕೊಳ್ಳಿ ಅಂತ ಹೇಳಿದ ದಾದಿಯ ಮೇಲೆ ಕ್ಯಾತೆ ತೆಗೆದ ಸರ್ಕಾರಿ ನೌಕರ ಮಂಜುನಾಥ್ ಎಂಬಾತ ಕುಡಿದ ಅಮಲಿನಲ್ಲಿ‌ ಜಗಳ ಮಾಡಿದ್ದಾನೆ. ಈ ವೇಳೆ ದಾದಿ ತನ್ನ ಪತಿಗೆ ಕರೆ ಮಾಡಿ‌ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಬಂದ ಗಂಡ ಸರ್ಕಾರಿ ನೌಕರ ಮಂಜುನಾಥ್ ಗೆ ಥಳಿಸಿ ಪೊಲೀಸರಿಗೆ ಓಪ್ಪಿಸಿದ್ದಾನೆ.

ರಾತ್ರಿಯೇ ಆರೋಪಿತ ಮಂಜುನಾಥ್ ನನ್ನ ವೈದ್ಯಕೀಯ ಪರೀಕ್ಷೆಗೆ ಓಳಪಡಿಸಿದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಆದ್ರೆ ಆರೋಪಿತ ಸರ್ಕಾರಿ‌ ನೌಕರ ಅನ್ನೋ ಕಾರಣಕ್ಕೆ ರಾಜೀ ಪಂಚಾಯತಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ರವಿಶಂಕರ್, ಘಟನೆ ನಡೆದಿರುವುದು ಧೃಡವಾಗಿದ್ದು, ಕಳ್ಳತನ‌ ಮಾಡಲು ಮಂಜುನಾಥ್ ಆಸ್ಪತ್ರೆಗೆ ಬಂದಿದ್ದ ಅಂತ ದೂರು‌ ನೀಡಲಾಗಿದೆ.

ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ ಅಂತ ಮಾಹಿತಿ‌ ನೀಡಿದ್ದಾರೆ..‌ಇನ್ನೂ ಘಟನೆಗೆ ಸಂಬಂಧ ಪಟ್ಟ ವರದಿ‌ ನೀಡಲು ಸ್ಥಳೀಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Comments are closed.