ಕರ್ನಾಟಕ

ಮರ ಬಿದ್ದರೂ ಜೀವ ಉಳಿಸಿತು ಹೆಲ್ಮೆಟ್‌: ಪೊಲೀಸರ ಪೋಸ್ಟ್‌ ವೈರಲ್‌

Pinterest LinkedIn Tumblr

ಬೆಂಗಳೂರು: ಇಂದಿರಾನಗರ 100 ಅಡಿ ರಸ್ತೆಯಲ್ಲಿಬುಡಸಮೇತ ರಸ್ತೆಗೆ ಉರುಳಿದ ಮರದ ಕೊಂಬೆ ಚಲಿಸುತ್ತಿದ್ದ ಸ್ಕೂಟರ್‌ ಸವಾರನ ಮೇಲೆ ಬಿದ್ದಿದ್ದು , ಆತ ಹೆಲ್ಮೆಟ್‌ ಧರಿಸಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನೆ ನಡೆದ ಸ್ಥಳದಲ್ಲಿ ಬಿದ್ದ ಮರ, ವಾಹನ ಹಾಗೂ ಹೆಲ್ಮೆಟ್‌ನ ಫೋಟೋಗಳನ್ನು ಹಲಸೂರು ಸಂಚಾರ ಪೊಲೀಸರು ಟ್ವಿಟರ್‌ನಲ್ಲಿ ಶೇರ್‌ ಮಾಡಿ ‘ಹೆಲ್ಮೆಟ್‌ ಧರಿಸಿ ಸುರಕ್ಷಿತವಾಗಿರಿ’ ಎಂದು ಸಂದೇಶ ನೀಡಿದ್ದಾರೆ.

ಬನ್ನೇರುಘಟ್ಟ ನಿವಾಸಿ ರಾಜಸ್ಥಾನ ಮೂಲದ ವಿಕಾಸ್‌ ಕುಮಾರ್‌ (28) ಪ್ರಾಣಾಪಾಯದಿಂದ ಪಾರಾದವರು. ಈತನ ಜತೆ ಬೈಕ್‌ನಲ್ಲಿತೆರಳುತ್ತಿದ್ದ ಸ್ನೇಹಿತೆ ಟಿನೂ ಎಂಬುವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ನಗರದ ಖಾಸಗಿ ಕಾಲೇಜೊಂದರಲ್ಲಿಕಾನೂನು ವಿದ್ಯಾರ್ಥಿಗಳಾಗಿರುವ ಇವರು, ಬುಧವಾರ ಬೆಳಗ್ಗೆ ಸ್ಕೂಟರ್‌ನಲ್ಲಿಕಾಲೇಜಿಗೆ ಹೊರಟಿದ್ದರು. 8 ಗಂಟೆ ಸುಮಾರಿಗೆ ಇಂದಿರಾನಗರ 100 ಅಡಿ ರಸ್ತೆಯಲ್ಲಿಕೋರಮಂಗಲ ಕಡೆಯಿಂದ 17ನೇ ಮುಖ್ಯರಸ್ತೆ ಜಂಕ್ಷನ್‌ ದಾಟಿ ಧೂಪನಹಳ್ಳಿ ಕಡೆಗೆ ಹೋಗುವಾಗ ಬೈಕ್‌ ಮೇಲೆಯೇ ಏಕಾಏಕಿ ಮರ ಬುಡ ಸಮೇತ ಬಿದ್ದಿದೆ. ಅದರ ಒಂದು ಕೊಂಬೆ ನೇರವಾಗಿ ವಿಕಾಸ್‌ ಕುಮಾರ್‌ ತಲೆ ಮೇಲೆಯೆ ಬಿದ್ದಿದೆ. ಪರಿಣಾಮ ಹೆಲ್ಮೆಟ್‌ ಮುರಿದು ಹೋಗಿ, ಮುಖದ ಮೇಲೆ ತರಚಿದ ಗಾಯಗಳಾಗಿವೆ. ಜತೆಗೆ ಭುಜದ ಮೂಳೆ ಮುರಿದಿದೆ. ಕೂಡಲೇ ಸ್ಥಳೀಯರು ಕೊಂಬೆಗಳ ನಡುವೆ ಸಿಲುಕಿದವರನ್ನು ರಕ್ಷಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಯುವತಿಗೆ ತರಚಿದ ಗಾಯಗಳಾಗಿದ್ದು , ಅಪಾಯದಿಂದ ಪಾರಾಗಿದ್ದಾಳೆ. ಬೈಕ್‌ ಕೂಡಾ ಜಖಂಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದಾಗ ಮುರಿದು ಹೋದ ಹೆಲ್ಮೆಟ್‌ ಸ್ಥಳದಲ್ಲಿಸಿಕ್ಕಿದೆ. ಒಂದು ವೇಳೆ ವಿಕಾಸ್‌ ಹೆಲ್ಮೆಟ್‌ ಧರಿಸದೆ ಇದ್ದಿದ್ದಲ್ಲಿಸಾವು ಸಂಭವಿಸುವ ಸಾಧ್ಯತೆ ಇತ್ತು ಎಂದು ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ದೊಡ್ಡ ಕೊಂಬೆ ಬಿದ್ದ ಕಾರಣ ಭುಜದ ಮೂಳೆ ಮುರಿದಿದೆ. ಆತನಿಗೆ ತೀವ್ರ ನಿಗಾ ಘಟಕದಲ್ಲಿಚಿಕಿತ್ಸೆ ಕೊಡಲಾಗುತ್ತಿದೆ. ಆರೋಗ್ಯ ಸ್ಥಿತಿಯ ವೈದ್ಯರು ಹೆಚ್ಚಿನ ಮಾಹಿತಿ ನೀಡಲಿದ್ದಾರೆ,’ಎಂದು ಪೊಲೀಸರು ತಿಳಿಸಿದರು.

ಟ್ವಿಟರ್‌ನಲ್ಲಿ ಶೇರ್‌

ಘಟನೆ ನಡೆದ ಸ್ಥಳದಲ್ಲಿ ಬಿದ್ದ ಮರ, ವಾಹನ ಹಾಗೂ ಹೆಲ್ಮೆಟ್‌ನ ಫೋಟೋಗಳನ್ನು ಹಲಸೂರು ಸಂಚಾರ ಪೊಲೀಸರು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಅವಘಡ ಸಂದರ್ಭಗಳಲ್ಲಿಹೆಲ್ಮೆಟ್‌ ಧರಿಸುವುದರಿಂದ ಅಪಾಯದ ಸಾಧ್ಯತೆ ಹೇಗೆ ಕಡಿಮೆ ಆಗುತ್ತದೆ ಎಂಬುದನ್ನು ಈ ಫೋಟೋಗಳು ಹೇಳುತ್ತವೆ. ಜತೆಗೆ ‘ಹೆಲ್ಮೆಟ್‌ ಧರಿಸಿ ಸುರಕ್ಷಿತವಾಗಿರಿ’ ಎಂದು ಸಂದೇಶ ತಿಳಿಸಿದ್ದಾರೆ. ಹೆಲ್ಮೆಟ್‌ನ ಮಹತ್ವದ ಕುರಿತು ತಿಳಿಸುವ ಸಂಚಾರ ಪೊಲೀಸರ ಈ ಪೋಸ್ಟ್‌ , ವೈರಲ್‌ ಆಗಿದೆ.

Comments are closed.