ಕರಾವಳಿ

‘ಮಠಾಧೀಶರಿಗೆ ಮಕ್ಕಳಿದ್ದಾರೆ’ ಹೇಳಿಕೆ: ಶಿರೂರು ಶ್ರೀಗಳ ವಿರುದ್ದ ಉಡುಪಿ ಮಠಾಧೀಶರು ಗರಂ!

Pinterest LinkedIn Tumblr

ಉಡುಪಿ: ಶಿರೂರು ಶ್ರೀಗಳಿಂದ ಪೇಜಾವರ ಶ್ರೀಗಳು ಹಾಗೂ ಇತರ ಮಠಾಧೀಶರ ಮೇಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರೂರು ಶ್ರೀಗಳ ವಿರುದ್ದ ಉಡುಪಿಯ ಮಠಾಧೀಶರುಗಳ ಅಸಮಾಧಾನ ವ್ಯಕ್ತಪಡಿಸಿದ್ದು ಗುರುವಾರ ರಾತ್ರಿ ಗುಪ್ತ ಸಭೆ ನಡೆಸಿದ್ದಾರೆ.

ಪೇಜಾವರ ಶ್ರೀಗಳ ನೆತೃತ್ವದಲ್ಲಿ ಕೃಷ್ಣ ಮಠದ ರಾಜಾಂಗಣದ ಮೇಲ್ಮಹಡಿಯಲ್ಲಿ ಸಭೆ ನಡೆಸಿದ್ದು ಸಭೆಯಲ್ಲಿ 6 ಮಠಗಳ 8 ಯತಿಗಳು ಭಾಗಿಯಾಗಿದ್ದರು. ಪಲಿಮಾರು ಶ್ರೀ,ಕಾಣಿಯೂರು ಶ್ರೀ,ಕೃಷ್ಣಪುರ ಶ್ರೀ,ಅದಮಾರು ಹಿರಿಯ ಹಾಗೂ‌ ಕಿರಿಯ ಶ್ರೀ,ಸೋದೆ ಶ್ರೀ ,ಪೇಜಾವರ ಕಿರಿಯ ಶ್ರೀಗಳು ಸಭೆಯಲ್ಲಿ ಭಾಗಿಯಾಗಿದ್ದು ತಡ ರಾತ್ರಿ 12.30 ರವರೆಗೂ ಸಭೆ ನಡೆದಿತ್ತು. ಶಿರೂರು ಶ್ರೀಗಳು ಮಾಡಿರುವ ಆರೋಪಗಳ‌ ಬಗ್ಗೆ ಗಂಭೀರ ಚರ್ಚೆಯಾಗಿದ್ದು ಶಿರೂರು ಶ್ರೀಗಳ ವಿರುದ್ದ ಕ್ರಮ‌ ಸೂಕ್ತ ಕ್ರಮ ಕೈಗೊಳ್ಳಲು ಅಷ್ಟ ಮಠಾಧೀಶರುಗಳು ನಿರ್ಧರಿಸಿದ್ದಾರೆನ್ನಲಾಗಿದೆ.

‘ನಮ್ಮ ಬಗ್ಗೆ ಆರೋಪಗಳನ್ನ‌ ಮಾಡಿದ್ದಾರೆ, ಈ ಬಗ್ಗೆ ಅಷ್ಟಮಠಾಧೀಶರುಗಳು ಒಟ್ಟು ಸೇರಿ ಚರ್ಚೆ ನಡೆಸಿದ್ದೇವೆ. ಎಲ್ಲಾ 6 ಮಠಾಧಿ ಪತಿಗಳು 8 ಯತಿಗಳು ವಿಚಾರ ಮಾಡಿ ಒಂದು ನಿರ್ಣಯಕ್ಕೆ ಬಂದಿದ್ದೆವೆ. ಶಿರೂರು ಶ್ರೀಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಅವರ ಹೇಳಿಕೆ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳುತ್ತೆವೆ. ಸಭೆಯಲ್ಲಿ ಚುನಾವಣೆಗೆ ನಿಲ್ಲುವ‌ ಬಗ್ಗೆ ಚರ್ಚೆ ನಡೆದಿಲ್ಲ ಎಂದಿದ್ದಾರೆ.

Comments are closed.