ಕರಾವಳಿ

ಕೆ.ಎಸ್.ಆರ್.ಟಿ.ಸಿ ಬಸ್ಸು ಡಿಕ್ಕಿಯಾಗಿ ಸ್ಕೂಟರ್ ಸವಾರ ದಾರುಣ ಸಾವು: ಮಗು ಸಹಿತ ಇನ್ನೋರ್ವ ಗಂಭೀರ

Pinterest LinkedIn Tumblr

ಉಡುಪಿ: ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ಸ್ಕೂಟರ್ ಸವಾರ ಸಾವನ್ನಪ್ಪಿ ಇಬ್ಬರು ಗಾಯಗೊಂಡ ಘಟನೆ ಜಿಲ್ಲೆಯ ಹಿರಿಯಡಕದ ಬೊಮ್ಮಾರಬೆಟ್ಟು ಎಂಬಲ್ಲಿ ನಡೆದಿದೆ. ಸುಜೀತ್ ಆಚಾರ್ಯ (33) ಮೃತ ದುರ್ದೈವಿ.

ಸ್ಕೂಟರಿನಲ್ಲಿ ದಯಾನಂದ ಪೂಜಾರಿ ಹಾಗೂ ಅವರ ಹೆಂಡತಿ ತಂಗಿಯ ಮೂರೂವರೆ ವರ್ಷ ಪ್ರಾಯದ ಮಗು ಹಾಗೂ ಸುಜೀತ್ ಆಚಾರ್ಯ ತೆರಳುತ್ತಿದ್ದು ಸ್ಕೂಟಿಗೆ ಎದುರಿನಿಂದ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸಮೇತ ಮೂವರೂ ರಸ್ತೆಗೆ ಬಿದ್ದು, ಸುಜಿತ್ ಆಚಾರ್ಯನು ಬಸ್ಸಿನ ಹಿಂಭಾಗದ ಬಲಭಾಗದ ಚಕ್ರಕ್ಕೆ ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ದಯಾನಂದ ಪೂಜಾರಿ ಯವರಿಗೆ ಎಡ ಕಣ್ಣು,ಹಣೆ,ಬಲಕೈ ಬಲಕಾಲಿನ ಪಾದದ ಬೆರಳು ಬಳಿ ರಕ್ತ ಗಾಯ ಮತ್ತು ಬೆನ್ನು ಸೊಂಟಕ್ಕೆ ನೋವಾಗಿದ್ದು, ಮಗು ವೈಷ್ಣವಿಗೂ ಮೂಗು,ಬಲಕೈ ತಟ್ಟಿನ ಬಳಿ ತರಚಿದ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದೆ.

ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.