ಕರಾವಳಿ

“ಸಂಗೀತದೊಂದಿಗೆ ಸ್ವಚ್ಚತೆ “: ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ದಶಮಾನೋತ್ಸವ ವರುಷದ ವಿನೂತನ ಸರಣಿ ಕಾರ್ಯಕ್ರಮ

Pinterest LinkedIn Tumblr

ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ)ದ ಕ ಮತ್ತು ಉಡುಪಿ ಜಿಲ್ಲೆ ದಶಮಾನೋತ್ಸವ ಸಂಭ್ರಮದಲ್ಲಿದ್ದು, ಇದರ ನಾಲ್ಕನೇ ಸರಣಿ ಕಾರ್ಯಕ್ರಮವಾಗಿ “ಸಂಗೀತದೊಂದಿಗೆ ಸ್ವಚ್ಚತೆ”ಎಂಬ ವಿನೂತನ ಕಾರ್ಯಕ್ರಮ ಮಾರ್ಚ್ 11 ರಂದು ಜರಗಿತು.

ಮಂಗಳೂರು ಮಹಾನಗರ ಪಾಲಿಕೆ ಬಳಿ, ಅದಾನಿ ( ಯು ಪಿ ಸಿ ಎಲ್) ಅಧ್ಯಕ್ಷರು ಕಿಶೋರ್ ಆಳ್ವ ಕಾರ್ಯಕ್ರಮ ಉದ್ಘ್ಹಾಟಿಸಿ , ಸಂಗೀತ ಕಲಾವಿದರು ತಮ್ಮ ಪ್ರತಿಭಾ ಸಾಧನೆಗಳಲ್ಲಿ ಗುರುತಿಸಿ ಕೊಳ್ಳುವುದರ ಮಧ್ಯೆ ಸಾಮಾಜಿಕ ಕಳಕಳಿಯ ಸೇವೆಯಲ್ಲಿ ತೊಡಗಿರುವುದು ನಿಜಕ್ಕೂ ಶ್ಲಾಘ್ಹನೀಯ ಎಂದರು.

ಮುಖ್ಯ ಅಭ್ಯಾಗತರಾಗಿ ಒಕ್ಕೂಟದ ದಶಮಾನೋತ್ಸವದ ಗೌರವ ಅಧ್ಯಕ್ಷ, ಶ್ರೀ ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀ ಎ ಸದಾನಂದ ಶೆಟ್ಟಿ, ಸಂಗೀತ ನಿರ್ದೇಶಕರಾದ ಚರಣ್ ಕುಮಾರ್, ತುಳು ಸಾಹಿತ್ಯ ಅಕಾಡಮಿಯ ಸದಸ್ಯ ಶಿವಾನಂದ ಕರ್ಕೆರ, ವಸಂತ್ ಕದ್ರಿ, ಎಂಸಿಎಫ್ ಅಧಿಕಾರಿ ಸದಾನಂದ ಎಂ, ಸಾನಿಧ್ಯ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿ ಶಾಲೆಯ ಆಡಳಿತ ಅಧಿಕಾರಿ ವಸಂತ್ ಕುಮಾರ್ ಶೆಟ್ಟಿ ಭಾಗವಹಿಸಿ ಶುಭ ಕೋರಿದರು.

150 ಕ್ಕೂ ಹೆಚ್ಚು ಸಂಗೀತ ಕಲಾವಿದರು ನಗರದ ಅವಶ್ಯ ಭಾಗಗಳಲ್ಲಿ ಸ್ವಚ್ಚತೆ ಕಾರ್ಯಕ್ರಮ ಮಾಡುವಾಗಲೇ ಸಂಚಾರಿ ವಾಹನ ವೇದಿಕೆಯಲ್ಲಿ ದೆಶಭಕ್ತಿ ಗೀತೆ ಹಾಡುವ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಇದರೊಂದಿಗೆ ಸಾನಿಧ್ಯ ವಿಶೇಷ ಮಕ್ಕಳ ಸ್ಕೇಟಿಂಗ್ ವಿಶೇಷ ಆಕರ್ಷಣೆಯಾಯಿತು. ಒಕ್ಕೂಟದ ಅಧ್ಯಕ್ಷರು ಜಗದೀಶ್ ಶೆಟ್ಟಿ ಪ್ರಾಸ್ತಾವಿಕ ಭಾಶಣ ನೀಡಿದರು, ಪ್ರಧಾನ ಕಾರ್ಯಧರ್ಶಿ ಮುರಳೀಧರ್ ಕಾಮತ್ ಸ್ವಾಗತಿಸಿ ,ಖಜಾಂಚಿ ರಂಜನ್ ದಾಸ್ ವಂದಿಸಿದರು. ತೋನ್ಸೆ ಪುಷ್ಕಕಲ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಸಂಗೀತ ಕಲಾವಿದರು ಕೂಡ ಪರಸ್ಪರ ಸ್ನೇಹ ಒಗ್ಗಟ್ಟಿನಿಂದ ಸಾರ್ವಜನಿಕವಾಗಿ ಜಾಗ್ರತಿ ಮೂಡಿಸುವ ಕೆಲಸ ಮಾಡಬೇಕೆನ್ನುವ ಚಿಂತನೆಯಲ್ಲಿ “ಸಂಗೀತದೊಂದಿಗೆ ಸ್ವಚ್ಚತೆ” ಎಂಬ ಕಾರ್ಯಕ್ರಮದ ಪರಿಕಲ್ಪನೆ ಮಾಡಲಾಗಿದೆ- ಜಗದೀಶ್ ಶೆಟ್ಟಿ (ಅಧ್ಯಕ್ಷರು ಕ.ಸ.ಕ.ಒಕ್ಕೂಟ.(ರಿ) ದ.ಕ ಉಡುಪಿ)

Comments are closed.