ಕರಾವಳಿ

ನಮ್ಮ ನಡೆ ಸ್ವಚ್ಚತೆಯ ಕಡೆ : ಕಿರು ಕ್ರೈಸ್ತ ಸಮುದಾಯದದಿಂದ ಸ್ವಚ್ ಕೊರ್ಡೆಲ್ ಅಭಿಯಾನ

Pinterest LinkedIn Tumblr

ಮಂಗಳೂರು : ಹೋಲಿ ಕ್ರೊಸ್ ಚರ್ಚ್, ಕುಲಶೇಖರ, ಮಂಗಳೂರು ಇದರ ಆಶಯದಲ್ಲಿ, ಕಿರು ಕ್ರೈಸ್ತ ಸಮುದಾಯದ ಸೇವಾ ಕಾರ್ಯಕ್ರಮಗಳ ಪ್ರಯುಕ್ತ, ನಮ್ಮ ನಡೆ ಸ್ವಚ್ಚತೆಯ ಕಡೆ ಎಂಬ ಧ್ಯೇಯದೊಂದಿಗೆ ‘ಸ್ವಚ್ ಕೊರ್ಡೆಲ್ ಅಭಿಯಾನ – 2018’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕುಲಶೇಖರ ಚರ್ಚ್ ಮಹಾಧ್ವಾರದ ಬಳಿ, ಧರ್ಮಗುರು ಅತೀ ವಂದನೀಯ ಸ್ವಾಮಿ ವಿಕ್ಟರ್ ಮಚಾದೊರವರ ನೇತೃತ್ವದಲ್ಲಿ, ಮುಖ್ಯ ಅಥಿತಿಯಾದ ನಮ್ಮ ನೆಚ್ಚಿನ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ   ಜೆ. ಆರ್. ಲೋಬೊರವರ ಉಪಸ್ಥಿತಿಯಲ್ಲಿ, ಹಾಗೂ ಮಂಗಳೂರು ಮಹಾ ನಗರ ಪಾಲಿಕೆಯ ಸ್ಥಳೀಯ ಕಾರ್ಪೊರೇಟರ್ ಹಾಗೂ ಮಹಾ ಪೌರರೂ ಆದ ಬಾಸ್ಕರ್ ಕೆ. ಇವರಿಂದ ಉದ್ಘಾಟಿಸಲ್ಪಟ್ಟಿತು.

ಈ ಅಭಿಯಾನದ ಕಾರ್ಯ ಕ್ಷೇತ್ರವು ಬಿಕರ್ನಕಟ್ಟೆ ಬಾಲ ಯೇಸುವಿನ ಮಂದಿರದ ಮಹಾದ್ವಾರದಿಂದ ಪ್ರಾರಂಭಗೊಂಡು ಕುಲಶೇಖರ ಚೌಕಿ ವರೆಗಿನ ರಾಜರಸ್ತೆ 169ರ ಎರಡೂ ಬದಿಗಳನ್ನು ಶುಚಿಗೊಳಿಸುವುದು.

ಮುಖ್ಯ ಅಥಿತಿ  ಜೆ. ಆರ್. ಲೋಬೋ ರವರು ಮಾತಾನಾಡಿ, ಸ್ವಚ್ಚತೆಯು ಧೈವ ಭಕ್ತಿಗೆ ಸಮಾನ, ಮಂಗಳೂರು ಸ್ವಚ್ಚವಾದ ಪ್ರದೇಶ, ನಗರವನ್ನು ಸ್ವಚ್ಚವಾಗಿರಿಸುವುದು ನಗರದ ಪ್ರತಿಯೊಂದು ನಾಗರಿಕನ ಆಧ್ಯ ಕರ್ತವ್ಯ, ನಮ್ಮ ಪರಿಸರ ಸ್ವಚ್ಚವಾಗಿರಿಸಲು ಮಂಗಳೂರಿನ ಜನತೆ ಸಹಕರಿಸಿರುವುದರಿಂದ ನಗರದ ಪ್ರಗತಿಗೆ ಪ್ರೇರಣೆ ದೊರೆಯುತ್ತದೆ ಹಾಗೂ ಸ್ವಚ್ಚತೆಯಿಂದ ನಗರವು ಅಭಿವೃಧ್ಧಿಯುತವಾಗಿ ಹೊರಹೊಮ್ಮುತ್ತದೆ. ಇಂತಹ ಸ್ವಚ್ಚತೆ ಆಭಿಯಾನವು ನಿರಂತರವಾಗಿ ಮುನ್ನಡೆಯಲಿ ಎಂದು ಹಾರೈಸಿದರು.

ಈ ಸ್ವಚ್ಚತಾ ಅಭಿಯಾನವನ್ನು ಉದ್ಘಾಟನೆ ಮಾಡಿದ ಮೇಯರ್  ಬಾಸ್ಕರ್ ಕೆ. ರವರು, ಕುಲಶೇಖರ ಚರ್ಚಿನ ಆಶಯದಲ್ಲಿ, ಸ್ವಚ್ಚತೆ ಅಭಿಯಾನ ಹಮ್ಮಿಕೊಂಡ ಕುಲಶೇಖರ ಪರಿಸರದ ನಾಗರಿಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಈ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅಥಿತಿಯಾಗಿ  ಕುಲಶೇಖರ ಚರ್ಚಿನ ಧರ್ಮಗುರು ಅತೀ ವಂದನೀಯ ಸ್ವಾಮಿ ವಿಕ್ಟರ್ ಮಚಾದೊ, ಕುಲಶೇಖರ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಲೋಯ್ ನೊರೊನ್ಹಾ, ಕಾರ್ಯದರ್‍ಶಿ ಶ್ರೀ ಸತುರ್ನಿನ್ ಮೊಂತೇರೊ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚರ್ಚಿನ 41 ವಾಳೆಯ ಮುಖ್ಯಸ್ಥರು, ಪ್ರತಿನಿಧಿಗಳು, ಹಾಗೂ ಚರ್ಚಿನ ಆಡಳಿತ ಮಂಡಳಿಯ ಎಲ್ಲಾ ಸದಸ್ಯರಿಗೂ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಈ ಕಾರ್ಯಕ್ರಮವನ್ನು ಕುಲಶೇಖರ ಚರ್ಚಿನ ಕಿರು ಕ್ರೈಸ್ತ ಸಮುದಾಯದ ಸಂಚಾಲಕರಾದ ಶ್ರೀ ಡೋಲ್ಫಿ ಡಿ’ಸೋಜ ರವರು ನಿರ್ವಹಿಸಿದರು. ಐನೂರಕ್ಕೂ ಮಿಕ್ಕಿ ಮಹಾಜನರು ಈ ಅಭಿಯಾನದಲ್ಲಿ ಭಾಗವಹಿಸಿದರು.

Comments are closed.