ಕರಾವಳಿ

ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಉಡುಪಿಯ ಶಿರೂರು ಮಠದ ಸ್ವಾಮೀಜಿ!

Pinterest LinkedIn Tumblr

ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಶಿರೂರು ಶ್ರೀಗಳು ಕಣಕ್ಕಿಳಿಯಲಿದ್ದಾರೆ. ಉಡುಪಿ ಶಿರೂರು ಮಠಾಧೀಶರಾದ ಲಕ್ಷ್ಮೀವರ ತೀರ್ಥ ಸ್ವಾಮಿಜಿಯವರು ಶಿರೂರಿನಲ್ಲಿರುವ ಮೂಲ ಮಠದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ಮೇಲೆ ಅಸಮಾಧಾನವಿದೆ. ಬಿಜೆಪಿ ಅವಧಿಯ ಕಾರ್ಯ ವೈಖರಿ ಅಸಮಧಾನ ತಂದಿದೆ. ಈ ಬಾರಿ ಪಕ್ಷೇತರವಾಗಿ ನಿಲ್ಲುವುದು ಖಚಿತ. ಯಾವುದೇ ಒತ್ತಡಗಳಿಗೆ ಮಣಿಯುವುದಿಲ್ಲ. ಒಂದು ವೇಳೆ ಬಿಜೆಪಿ ಅವಕಾಶ ನೀಡಿದ್ರೆ ಬಿಜೆಪಿ ಪಕ್ಷದಿಂದಲೇ ಸ್ಪರ್ಧೆ ಮಾಡುವೆ. ಬೇರೆ ಯಾವುದೇ ಪಕ್ಷದಿಂದ ಸ್ಪರ್ಧೆ ಇಲ್ಲ. ನನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೇಯೆ ಇಲ್ಲ ಎಂದಿದ್ದಾರೆ.

ಕಾಂಗ್ರೆಸ್ ವಿರುದ್ದ ನನ್ನ ಸ್ಪರ್ಧೆ ಅಲ್ಲ. ಹಾಲಿ ಶಾಸಕ ಮಧ್ವರಾಜ್ ರ ಕಾರ್ಯವೈಖರಿ ಮೆಚ್ಚುಗೆ ತಂದಿದೆ. ರಾಜ್ಯ ಹಾಗೂ ಕೇಂದ್ರ ಬಿಜೆಪಿ ಮೇಲೆ ಯಾವುದೇ ಮುನಿಸಿಲ್ಲ. ಅಲ್ಲದೇ ಯೋಗಿ ಅದಿತ್ಯನಾಥ್ ನನಗೆ ಮಾದರಿಯಾಗಿದ್ದು ಅವರು ಕೂಡ ಪಕ್ಷೇತರವಾಗಿ ನಿಂತು ಗೆಲುವು ಸಾಧಿಸಿದವರು.

ಸ್ವಾಮೀಜಿಗಳು ಚುನಾವಣೆ ನಿಲ್ಲ ಬಾರದೆಂದೆನಿಲ್ಲ. ನಾನು ಚುನಾವಣೆಗೆ ನಿಂತರೆ ಕಾಂಗ್ರೆಸ್ ಗೆ ಲಾಭ ಎಂದು ಅವರು ಹೇಳಿದ್ದಾರೆ.

ಸ್ವಾಮೀಜಿಯೊಬ್ಬರ ರಾಜಕೀಯ ಪ್ರವೇಶ ಅಷ್ಟ ಮಠಗಳ ಇತಿಹಾಸದಲ್ಲೆ ಮೊದಲಾಗಿದ್ದು ಮುಂದೆ ಸ್ವಾಮೀಜಿ ಯಾವ ಪಕ್ಷದ ಕೈಹಿಡಿಯಲಿದ್ದರೆಂಬುದು ಸದ್ಯದ ಕುತೂಹಲ.

Comments are closed.