ಕರಾವಳಿ

ಹೆಣ್ಣಿನ ಒರ್ಗ್ಯಾಸಮ್ ಕ್ಷಣದಲ್ಲಿ ಅಕೆಯ ಮೆದುಳಿನಲ್ಲಿ ಉಂಟಾಗುವ ಅತ್ಯಾಕರ್ಷಕ ವಿಷಯಗಳು ಏನು?

Pinterest LinkedIn Tumblr

ಲೈಂಗಿಕ ಪರಾಕಾಷ್ಠೆ ಅಥವಾ ಒರ್ಗ್ಯಾಸಮ್ ಹೊಂದುವಾಗ ಬೇರೇನೂ ವಿಷಯವನ್ನ ಹೆಚ್ಚಾಗಿ ಯೋಚಿಸುತ್ತಿಲ್ಲ ಎಂದ ಮಾತ್ರಕ್ಕೆ, ನಿಮ್ಮ ಮೆದುಳು ಆ ಸಮಯದಲ್ಲಿ ಏನೂ ಕೆಲಸ ಮಾಡುತ್ತಿಲ್ಲ ಎಂದರ್ಥವಲ್ಲ. ನೀವು ಆ ಕ್ಷಣದಲ್ಲಿ ಕೇವಲ ಒಂದು ಭಾಗಕ್ಕೆ ಆಗುತ್ತಿರುವ ಅನುಭವದ ಮೇಲೆಯೇ ಬಹಳ ಗಮನ ವಹಿಸುತ್ತಿದ್ದರೂ, ನಿಮ್ಮ ಮೆದುಳಿನ ಹಲವಾರು ಭಾಗಗಳು ಸಕ್ರಿಯಗೊಳ್ಳುತ್ತವೆ. ಹಾಗಿದ್ದರೆ ಆ ಕ್ಷಣದಲ್ಲಿ ನಿಮ್ಮ ಮೆದುಳಿನಲ್ಲಿ ಉಂಟಾಗುವ ಅತ್ಯಾಕರ್ಷಕ ವಿಷಯಗಳು ಏನು? ಇಲ್ಲಿವೆ ನೋಡಿ :

೧. ಮೆದುಳು ಎಮೋಷನಲ್, ಅಂದರೆ ಭಾವುಕರನ್ನಾಗಿ ಮಾಡುತ್ತದೆ
ಜನನಾಂಗದ ಲೈಂಗಿಕ ಕೆರಳಿಕೆಯು ಮೆದುಳಿನ ಲಿಂಬಿಕ್ ವ್ಯವಸ್ಥೆಗೆ ಸಿಗ್ನಲ್ ಅನ್ನು ಕಳಿಸುತ್ತದೆ. ಇದು ಮೆದುಳಿನಲ್ಲಿ ಭಾವನೆಗಳನ್ನ ನಿಯಂತ್ರಿಸುವ ಕೇಂದ್ರವಾಗಿರುತ್ತದೆ ಮತ್ತು ಇದು ಮಾನವನ ಆಸೆ, ಆಶಯಗಳನ್ನ ನಿಯಂತ್ರಿಸುವ ಹಿಪೋಕ್ಯಾಂಪಸ್ ಅನ್ನು ಮತ್ತು ಮಾನವನ ಕೋಪ, ಉದ್ರಿಕ್ತತೆ, ಭಯಗಳನ್ನ ನಿಯಂತ್ರಿಸುವ ಕೇಂದ್ರವಾದ ಅಮಿಗ್ಡಾಳ ಅನ್ನೂ ಸಹ ಒಳಗೊಂಡಿರುತ್ತದೆ. ಹೀಗಾಗಿ ಒಂದು ವೇಳೆ ನೀವೇನಾದರೂ ಸೆಕ್ಸ್ ಅಲ್ಲಿ ತೊಡಗಿಸಿಕೊಂಡಾಗ ಏನೇನೋ ಮಿಶ್ರ ಭಾವನೆಗಳು, ಮಿಶ್ರ ಅನುಭವಗಳು ಉಂಟಾದರೆ, ನೀವು ದೂಷಿಸಬೇಕಿರುವುದು ನಿಮ್ಮ ಮೆದುಳನ್ನ.

೨. ಒಬ್ಬರೇ ಇದ್ದಾಗಿನ ಒರ್ಗ್ಯಾಸಮ್ ಮತ್ತು ನೀವು ನಿಮ್ಮ ಸಂಗಾತಿಯೊಡನೆ ಹೊಂದುವ ಒರ್ಗ್ಯಾಸಮ್ ನಡುವೆ ವ್ಯತ್ಯಾಸ ಇರುತ್ತದೆ
ಮೊದಲಿಗೆ ನಾವು ಹಸ್ತಮೈಥುನದಿಂದ ಉಂಟಾಗುವ ಲೈಂಗಿಕ ಪರಾಕಾಷ್ಠೆ ಮತ್ತು ಸಂಗಾತಿ ಜೊತೆ ಸಂಭೋಗದಲ್ಲಿ ತೊಡಗಿಕೊಂಡಾಗ ಉಂಟಾಗುವ ಲೈಂಗಿಕ ಪರಾಕಾಷ್ಠೆಗೂ ಏನು ವ್ಯತ್ಯಾಸವಿಲ್ಲ ಎಂದುಕೊಂಡಿದ್ದೆವು. ಆದರೆ ನಮ್ಮ ಮೆದುಳು ಅದಕ್ಕಿಂತ ಬುದ್ದಿವಂತಿಕೆ ಉಳ್ಳದ್ದು ಎಂಬುದು ಇತ್ತೀಚಿನ ಅಧ್ಯಯನಗಳಲ್ಲಿ ತಿಳಿದು ಬಂದಿದೆ. ಹೌದು, ನಿಮ್ಮ ಮೆದುಳು ನೀವು ಹಸ್ತಮೈಥುನ ಮಾಡುವಾಗ ಹೊಂದುವ ಲೈಂಗಿಕ ಪರಾಕಾಷ್ಠೆ ಮತ್ತು ಸಂಭೋಗದಿಂದ ಹೊಂದುವ ಲೈಂಗಿಕ ಪರಾಕಾಷ್ಠೆ ಬೇರೆ ಬೇರೆಯದ್ದಾಗಿರುತ್ತದೆ.

೩. ಮೆದುಳು ನೋವಿಗಿಂತ ಸುಖದ ಮೇಲೆ ಹೆಚ್ಚು ಗಮನ ಹರಿಸುತ್ತದೆ
ಸಂಶೋಧನೆಗಳು ನೀವು ಲೈಂಗಿಕ ಪರಾಕಾಷ್ಠೆ ಹೊಂದುವಾಗ ಸಂಭೋಗದ ನೋವಿಗಿಂತ, ಅದರಿಂದ ಸಿಗುವ ಸುಖದ ಮೇಲೆ ಗಮನ ಹರಿಸುತ್ತದೆ ಎಂಬುದು ತಿಳಿದು ಬಂದಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಡಾರ್ಸಲ್ ರಾಫೆ ನ್ಯೂಕ್ಲಿಯಸ್ ಹೆಚ್ಚು ಸಕ್ರಿಯವಾಗಿರುತ್ತದೆ.

೪. ಮೆದುಳು ನೀವು ಬಾಂಧವ್ಯವನ್ನ ಬಯಸುವಂತೆ ಮಾಡುತ್ತದೆ
ನೀವು ಲೈಂಗಿಕ ಪರಾಕಾಷ್ಠೆ ಹೊಂದುವಾಗ ನಿಮ್ಮ ದೇಹದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆ ಹೊಂದುತ್ತದೆ. ನಾವು ಸೆಕ್ಸ್ ಅಲ್ಲಿ ತೊಡಗಿದ್ದಾಗ ನಿಮ್ಮ ದೇಹದಲ್ಲಿ ಇದು ಬಿಡುಗಡೆ ಹೊಂದುತ್ತದೆ ಮತ್ತು ಇದರಿಂದ ನಿಮ್ಮ ಡಿಫೆನ್ಸ್ ಮನೋಭಾವ ಕಡಿಮೆ ಆಗಿ ನೀವು ಜನರನ್ನ ಹೆಚ್ಚಾಗಿ ನಂಬುವಂತೆ ಆಗುತ್ತದೆ. ಈ ಕಾರಣದಿಂದಲೇ ನೀವು ಸೆಕ್ಸ್ ಅಲ್ಲಿ ತೊಡಗಿಕೊಂಡು, ಪರಾಕಾಷ್ಠೆ ಹೊಂದಿದ ನಂತರ, ಅಪ್ಪಿಕೊಂಡು, ಮುದ್ದಾಡಿಕೊಂಡು ಮಲಗುವಂತೆ ಅನಿಸುವುದು.

೫. ಸೆಕ್ಸ್ ವೇಳೆ ಮೆದುಳು ಮಾದಕ ವಸ್ತು ಸೇವಿಸಿದಂತೆ ಕೆಲಸ ಮಾಡುತ್ತದೆ
ಸೆಕ್ಸ್ ಒಂದು ಚಟವಾಗಲು ಒಂದು ಕಾರಣವಿದೆ. ನೀವು ಪರಾಕಾಷ್ಠೆ ಹೊಂದುವಾಗ ನಿಮ್ಮ ಮೆದುಳು ನಿಮ್ಮ ದೇಹದಲ್ಲಿ ಅತ್ಯಧಿಕ ಉಲ್ಲಾಸ ಉಂಟು ಮಾಡುವ ಹಾರ್ಮೋನ್ ಆದ ಡೋಪಮೈನ್ ಅನ್ನು ಬಿಡುಗಡೆ ಮಾಡುತ್ತದೆ. ಈ ಉಲ್ಲಾಸವೇ ನಿಮಗೆ ಸೆಕ್ಸ್ ಮತ್ತಷ್ಟು ಬೇಕು ಬೇಕು ಎನಿಸುವುದು.

Comments are closed.