ಕ್ರೀಡೆ

ದೇಶಕ್ಕಾಗಿ ಸಾಯುತ್ತೇನೆ ಹೊರತು, ದೇಶದ್ರೋಹದ ಕೆಲಸ ಎಂದಿಗೂ ಮಾಡುವುದಿಲ್ಲ: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ

Pinterest LinkedIn Tumblr

ಕೋಲ್ಕತ್ತಾ: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನ್ ಜಹಾನ್ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದು ಇದಕ್ಕೆ ಪ್ರತಿಕ್ರಿಯಿಸಿರುವ ಶಮಿ ಒಂದೊಮ್ಮೆ ಬೇಕಾದರೆ ಸಾಯುತ್ತೇನೆಯೇ ಹೊರತು ದೇಶದ್ರೋಹದ ಕೆಲಸ ಎಂದಿಗೂ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಹಸೀನಾ ಜಹಾನ್ ನಿನ್ನೆ ಶಮಿ ಪಾಕಿಸ್ತಾನಿ ಯುವತಿ ಅಲಿಶ್ಬಾ ಎಂಬುವಳಿಂದ ಹಣ ಪಡೆದಿದ್ದಾರೆ. ಶಮಿ ಮ್ಯಾಚ್ ಫಿಕ್ಸಿಂಗ್ ನಲ್ಲಿ ತೊಡಗಿರಬಹುದು. ಆಕೆಯಿಂದ ಯಾತಕ್ಕಾಗಿ ಹಣ ಪಡೆದಿದ್ದೇನೆ ಎಂದು ಶಮಿ ನನಗೆ ಹೇಳಿಲ್ಲ. ಆತ ನನಗೆ ಮೋಸ ಮಾಡಬಹುದು ಎಂದಾದಲ್ಲಿ ದೇಶಕ್ಕೆ ಮೋಸ ಮಾಡಿದ್ದರೂ ಯಾವುದೇ ಆಶ್ಚರ್ಯವಿಲ್ಲ ಎಂದು ಆರೋಪಿಸಿದ್ದರು.

ಮೊಹಮ್ಮದ್ ಶಮಿ ಹಾಗೂ ಹಸೀನ್ ಜಹಾನ್ ನಡುವಿನ ಕೌಟುಂಬಿಕ ಕಲಹ ತಾರಕಕ್ಕೇರಿದ್ದು ಜಹಾನ್ ಪತಿ ಶಮಿ ಮೇಲೆ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

ಕೋಲ್ಕತ್ತಾ ಮೂಲದ ಹಸಿನ್ ಜಹಾನ್ ಮಾಡೆಲ್ ಆಗಿ ತಮ್ಮ ವೃತ್ತಿ ಜೀವನಕ್ಕೆ ಕಾಲಿಟ್ಟರು. ಆರಂಭದಲ್ಲಿ ಕೊಲ್ಕತ್ತಾದ ಪರ ಚಿಯರ್ ಗರ್ಲ್ ಆಗಿದ್ದರು. 2012ರ ಐಪಿಎಲ್ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಈ ಜೋಡಿ ಎರಡು ವರ್ಷಗಳ ಕಾಲ ಡೇಟಿಂಗ್ ನಡೆಸಿ ನಂತರ 2014ರಲ್ಲಿ ಮದುವೆಯಾಗಿದ್ದರು. ಶಮಿ ಮತ್ತು ಜಹಾನ್ ದಂಪತಿಗೆ ಗಂಡು ಮತ್ತು ಹೆಣ್ಣು ಮಗುವಿದೆ.

Comments are closed.