
ಉಡುಪಿ: ಗೌರಿ ಲಂಕೇಶ್ ಹತ್ಯೆಯಲ್ಲಿ ಹಿಂದೂ ಕಾರ್ಯಕರ್ತನ ಪಾತ್ರ ವಿಚಾರಕ್ಕೆ ಸಂಬಂದಪಟ್ಟ ಹಾಗೆ ಉಡುಪಿಯಲ್ಲಿ ವಿಪಕ್ಷ ನಾಯಕ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಕೊಲೆ ಮಾಡಿದವನು ಕೊಲೆಗಾರ, ಅವನು ಹಿಂದೂ, ಕ್ರೈಸ್ತ, ಮುಸ್ಲಿಂ ಅನ್ನೋದಿಲ್ಲ ಹಾಗೂ ಕೊಲೆಗಾರನಿಗೆ ಧರ್ಮದ ಲೇಬಲ್ ಯಾಕೆ ಹಚ್ಚಬೇಕು? ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಕೊಲೆಗಾರರಿಗೆ ಭಯವಿಲ್ಲದಾಗಿದೆ, ಯಾರನ್ನೂ ಕೊಲೆ ಮಾಡಬಹುದು ಅನ್ನೋ ಭಾವನೆ ಬಂದು ಬಿಟ್ಟಿದೆ. ಕೊಲೆಗಾರರಿಗೆ ಭಯ ಹುಟ್ಟಿಸುವ ಕೆಲಸ ಸರಕಾರ ಮಾಡಿಲ್ಲ ಆ ಬಗ್ಗೆ ಬೇಜಾರಿದೆ. ಬಂಧಿತ ಅಮಾಯಕನೋ ಅಲ್ಲವೋ ಅನ್ನೋದು ನನಗೆ ಗೊತ್ತಿಲ್ಲ ಹಾಗಾಗಿ ಈ ಬಗ್ಗೆ ನಾನು ಸುಮ್ಮನೆ ಮಾತಾಡಲಾರೆ ಎಂದರು.
ಉಪೇಂದ್ರ ಬಿಜೆಪಿ ವಿಚಾರದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಮಾಧ್ಯಮಗಳಲ್ಲಿ ಸೇರುತ್ತಾರೆ ಅನ್ನೋದಾಗಿ ನೋಡಿದ್ದು ಎಲ್ಲವೂ ಅಂತೆ ಕಂತೆ ವಿಚಾರವಾಗಿದೆ ಎಂದಿದ್ದಾರೆ. ಬಿಜೆಪಿ ಪಕ್ಷ ಗಂಗಾ ಇದ್ದಂಗೆ, ಯಾರೂ ಬರಬಹುದು. ಸೋನಿಯಾ ಗಾಂಧಿ ಬಂದ್ರೂ ಕರೆದುಕೊಳ್ಳುತೀವಿ. ಈ ಹಿಂದೆ ಸಿದ್ರಾಮಯ್ಯನವರೇ ಬಿಜೆಪಿ ಬರೋದಕ್ಕೆ ಪ್ರಯತ್ನಿಸಿದ್ದರು. ಸಿಎಂ ಪಟ್ಟ ಸಿಗ್ಬೇಕು ಅನ್ನೋ ಅಪೇಕ್ಷೆ ಅವರದ್ದಾಗಿತ್ತು. ಅದಾಗಿಲ್ಲ ಅಂತ ಜೆಡಿಎಸ್ ಗೆ ಟೋಪಿ ಹಾಕಿ ಕಾಂಗ್ರೆಸ್ ಸೇರಿ ಸಿಎಂ ಆಗಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೂ ಮಡಿಯಿಲ್ಲ. ಬಿಜೆಪಿ ಪಕ್ಷ ತತ್ವ ಸಿದ್ಧಾಂತ ಒಪ್ಪಿಕೊಂಡು ಬಂದಲ್ಲಿ ಸ್ವಾಗತಿಸುವೆವು ಎಂದಿದ್ದಾರೆ.
Comments are closed.