ಕರಾವಳಿ

ಅಕ್ರಮ ಮದ್ಯ ಸಂಗ್ರಹ ಕೇಂದ್ರಕ್ಕೆ ಅಬಕಾರಿ ದಾಳಿ : 7,000ಕ್ಕೂ ಹೆಚ್ಚು ಲೀಟರ್ ಸ್ಪೀರಿಟ್ ವಶ – ಓರ್ವನ ಬಂಧನ

Pinterest LinkedIn Tumblr

ಮಂಗಳೂರು, ಫೆಬ್ರವರಿ.20: ಮಂಗಳೂರಿನ ಪಡೀಲ್ ಬಜಾಲ್ ಬಳಿಯ ಶಾಫಿ ಕ್ಲಿನಿಕ್ ಬಳಿ ಅಕ್ರಮವಾಗಿ ಮದ್ಯಸಾರ ಸಂಗ್ರಹಿಸಿ ಇಟ್ಟಿದ್ದ ಸ್ಥಳಕ್ಕೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳ ತಂಡ, ಸುಮಾರು 7805 ಲೀಟರ್ ಮದ್ಯಸಾರ ಹಾಗೂ 2 ವಾಹನಗಳನ್ನು ವಶಪಡಿಸಿದೆ. ಮನೆಯೊಂದರ ಬಳಿಯಲ್ಲಿ ನಿಲ್ಲಿಸಿದ ಲಾರಿಯಲ್ಲಿದ್ದ ಸುಮಾರು 110 ಕ್ಯಾನ್ ಸ್ಪೀರಿಟ್ ತುಂಬಿದ್ದ ಪ್ಲಾಸ್ಟಿಕ್ ಕ್ಯಾನಗಳನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

 

ಅಬಕಾರಿ ಜಂಟಿ ಆಯುಕ್ತರಾದ ಶೈಲಜಾ ಎ. ಕೋಟೆ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮಂಗಳೂರು ನಗರದ ಬಜಾಲ್ ಜೆ.ಎಂ. ರಸ್ತೆಯ ಮನೆಯೊಂದಕ್ಕೆ ದಾಳಿ ನಡೆಸಿದಾಗ 35 ಲೀಟರ್ ಸಾಮಥ್ರ್ಯದ 113 ಪ್ಲಾಸ್ಟಿಕ್ ಕ್ಯಾನ್‍ಗಳಲ್ಲಿ ಸಂಗ್ರಹಿಸಿದ್ದ 3,955 ಲೀಟರ್ ಮದ್ಯಸಾರ, ಅಲ್ಲಿಯೇ ಇದ್ದ ಈಚರ್ ವಾಹನದಲ್ಲಿದ್ದ 35 ಲೀಟರ್ ಸಾಮಥ್ರ್ಯದ 110 ಪ್ಲಾಸ್ಟಿಕ್ ಕ್ಯಾನ್‍ಗಳಲ್ಲಿ 3,850 ಲೀಟರ್ ಮದ್ಯಸಾರ ಸೇರಿದಂತೆ ಒಟ್ಟು 7,805 ಲೀಟರ್ ಮದ್ಯಸಾರ ಮತ್ತು ಸಾಗಾಣಿಕೆ ಬಳಸಿದ ಪಲ್ಸರ್ ಮೋಟಾರು ಬೈಕ್ ಪತ್ತೆಯಾಗಿದ್ದು, ವಶಪಡಿಸಿಕೊಳ್ಳಲಾಯಿತು. ಅಲ್ಲದೇ, ಸ್ಥಳದಲ್ಲಿ ಮೀನು ದಾಸ್ತಾನಿಡಲು ಬಳಸುವ 247 ಖಾಲಿ ಪ್ಲಾಸ್ಟಿಕ್ ಕ್ರೇಟ್‍ಗಳು ಪತ್ತೆಯಾಗಿದ್ದು, ಆರೋಪಿ ಜೋಸ್ ಸೆಬೆಸ್ಟಿನ್ ಎಂಬವರನ್ನು ಸ್ಥಳದಲ್ಲಿಯೇ ದಸ್ತಗಿರಿ ಮಾಡಲಾಗಿದೆ. ವಶಪಡಿಸಿಕೊಂಡ ಮದ್ಯಸಾರ ಹಾಗೂ ಸಾಗಾಟಕ್ಕೆ ಬಳಸಿದ ವಾಹನಗಳ ಅಂದಾಜು ಮೌಲ್ಯ ರೂ.11,00,000/- ಆಗಿರುತ್ತದೆ.

ಅಬಕಾರಿ ಅಧೀಕ್ಷಕರಾದ ವಿನೋದ್‍ರವರ ನಿರ್ದೇಶನದ ಮೇರೆಗೆ ನಡೆದ ಈ ಈ ಕಾರ್ಯಾಚರಣೆಯಲ್ಲಿ ಮಂಗಳೂರು ಉಪ ವಿಭಾಗ-1 ರ ಅಬಕಾರಿ ಉಪ ಅಧೀಕ್ಷಕ ಅಮರನಾಥ.ಎಸ್.ಎಸ್ ಭಂಡಾರಿ ಮತ್ತು ಉಪ ವಿಭಾಗ-2 ರ ಅಬಕಾರಿ ಉಪಅಧೀಕ್ಷಕ ಶಿವ ಪ್ರಸಾದ್ ಇವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ಚೇತನ್ ಕುಮಾರ್, ಸತೀಶ್ ಕುಮಾರ್ ಕುದ್ರೋಳಿ, ಸುನೀತ, ಸೀಮ ಮರಿಯ ಸುವಾರೀಸ್, ಶೋಭಾ, ಅಬಕಾರಿ ಉಪ ನಿರೀಕ್ಷಕರಾದ ಪ್ರತಿಭಾ, ರಾಜ.ಪಿ, ಜಗನ್ನಾಥ ನಾಯ್ಕ್, ಶಿವಾನಂದ, ಕಮಲ, ಅಬಕಾರಿ ರಕ್ಷಕರಾದ ಸಾಯಿಪ್ರಸಾದ್ ಸುವರ್ಣ, ಉಮೇಶ್.ಹೆಚ್, ಹರೀಶ್, ಅರ್ಜುನ್ ಗೊಟಗುನಕಿ, ಜಯಪ್ಪ ಲಮಾಣಿ, ಕೃಷ್ಣ ಆಚಾರಿ, ಸುಪ್ರೀತ್ ಮತ್ತು ವಾಹನ ಚಾಲಕರಾದ ಶಿವಪ್ಪ, ಯೋಗೀಶ್, ಫ್ರಾನ್ಸಿಸ್ ಡಿಸೋಜ, ಸುನೀಲ್, ಹರಿಯಪ್ಪ, ಪ್ರಜ್ವಲ್ ಮತ್ತು ಉಮೇಶ್ ಪಾಲ್ಗೊಂಡಿರುತ್ತಾರೆ.

ವಶಪಡಿಸಿಕೊಂಡ ಮದ್ಯಸಾರವನ್ನು ಕೇರಳ ರಾಜ್ಯಕ್ಕೆ ಸಾಗಿಸುವುದಾಗಿ ಆರೋಪಿಯ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆಯನ್ನು ನಡೆಸಲಾಗುತ್ತಿದೆ.

Comments are closed.