ಉಡುಪಿ: ವಿಐಪಿ ಹಾಗೂ ಅಂಬ್ಯಲ್ಯಾನ್ಸ್ ಟೋಲ್ ಫ್ರೀ ಟ್ರಾಕ್ ನಲ್ಲಿ ಕಾರು ಚಲಾಯಿಸಲು ಯತ್ನಿಸಿದ ಬಿಜಪಿ ಮುಖಂಡನೋರ್ವನ ಕಾರನ್ನು ತಡೆದು ನಿಲ್ಲಿಸಿದ ಟೋಲ್ ಸಿಬಂದಿ ಮೇಲೆ ಬಿಜೆಪಿ ಮುಖಂಡ ಹಾಗೂ ಆತನ ನಾಲ್ಕು ಮಂದಿ ಸಹಚರರು ಹಲ್ಲೆ ನಡೆಸಿ ದಾಂಧಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಸಾಸ್ತನದ ನವಯುಗ ಟೋಲ್ ಗೇಟಿನಲ್ಲಿ ನಡೆದಿದೆ.
ನಿನ್ನೆ ಸಂಜೆ ಹೊತ್ತಲ್ಲಿ ಸ್ವಿಪ್ಟ್ ಡಿಸೈರ್ ಕಾರಿನಲ್ಲಿ ಬಂದ ಬಿಜೆಪಿ ಮುಖಂಡ ವಿಠಲ್ ಪೂಜಾರಿ ಎನ್ನುವವರು, ಟೋಲ್ ನಲ್ಲಿರುವ ವಿಐಪಿ ಫ್ರೀ ಟ್ರ್ಯಾಕ್ ನಲ್ಲಿ ಹೋಗಲು ಮುಂದಾಗಿದ್ದು ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಟೋಲ್ ಸಿಬಂದಿ ಅವರನ್ನ ತಡೆದಿದ್ದು,ವಿಐಪಿ ರೋಡ್ ನಲ್ಲಿ ವಿ ಐ ಪಿ ಗಳ ವಾಹನ ಸೇರಿದಂತೆ ಪೊಲೀಸ್ ,ಅಂಬುಲ್ಯಾನ್ಸ್ ಗಳಿಗೆ ಮಾತ್ರ ಅವಕಾಶವಿದ್ದು ,ಸಾಮಾನ್ಯ ರಸ್ತೆಯಲ್ಲಿ ಹೋಗುವಂತೆ ಸೂಚಿಸಿದ್ದಾರೆ.ಇದಕ್ಕೆ ಕೋಪಗೊಂಡ ವಿಠಲ್ ಪೂಜಾರಿ ನಾನು ಕೂಡ ವಿಐಪಿ ಎಂದು ಕಾರಿನಿಂದ ಇಳಿದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಆತನ ಸ್ನೇಹಿತರು ಕೂಡ ವಯಸ್ಸಾದ ಟೋಲ್ ಸಿಂಬಂದಿ ಅಬ್ದುಲ್ ರೆಹಮಾನ್ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಅಬ್ದುಲ್ ರೆಹಮಾನ್)
ಅಷ್ಟು ಮಾತ್ರವಲ್ಲದೇ.. ಅದೇ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸಾವಾರನೊಬ್ಬನ ಹೆಲ್ಮೆಟ್ಟನ್ನು ಕಿತ್ತು, ಅದೇ..ಹೆಲ್ಮೆಟ್ ನಿಂದ ಟೋಲ್ ಸಿಬಂದಿಯ ತಲೆ ಹಾಗೂ ಹೊಟ್ಟೆ ಭಾಗಕ್ಕೆ ಹೊಡೆದಿದ್ದಾರೆಂದು ಆರೋಪಿಸಲಾಗಿದೆ.
ಈ ಘಟನೆ ಸಿ ಸಿ ಕ್ಯಾಮೆರದಲ್ಲಿ ಸೆರೆಯಾಗಿದ್ದು ,ಸ್ಥಳಿಯ ಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹಲ್ಲೆಗೊಳಗಾದ ಟೋಲ್ ಸಿಬಂದಿಯನ್ನು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿದ್ದು,ಚಿಕಿತ್ಸೆ ಪಡೆಯುತ್ತಿದ್ದಾರೆ.ಬಿಜಪಿ ಮುಖಂಡನ ಈ ಕೃತ್ಯಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಷ ವ್ಯಕ್ತವಾಗಿದೆ.