ರಾಷ್ಟ್ರೀಯ

925 ಕೋಟಿ ರೂ.ಗಳ ಬೃಹತ್‌ ದರೋಡೆ ಯತ್ನ ತಪ್ಪಿಸಿದ ಪೊಲೀಸ್‌ ಪೇದೆ

Pinterest LinkedIn Tumblr

ಜೈಪುರ: ಯುವ ಪೊಲೀಸ್‌ ಕಾನ್‌ಸ್ಟೇಬಲ್‌ ಒಬ್ಬರ ಸಕಾಲಿಕ ಪ್ರಯತ್ನದಿಂದ 925 ಕೋಟಿ ರೂ.ಗಳ ಬೃಹತ್‌ ಬ್ಯಾಂಕ್‌ ದರೋಡೆ ನಡೆಯುವುದು ತಪ್ಪಿದೆ.

13 ಮಂದಿ ಮುಸುಕುಧಾರಿ ಸಶಸ್ತ್ರ ಡಕಾಯಿತರು ಜೈಪುರದ ಬ್ಯಾಂಕ್‌ ಒಂದಕ್ಕೆ ಮಧ್ಯರಾತ್ರಿ 2:30ರ ವೇಳೆಗೆ ದಾಳಿಯಿಟ್ಟಿದ್ದಾರೆ. ಬ್ಯಾಂಕಿನ ಕಾವಲುಗಾರನನ್ನು ಥಳಿಸಿ ಶಟರ್‌ ತೆರೆಯಲು ಗುಂಡು ಹಾರಿಸಿದ್ದಾರೆ.

ಈ ಗದ್ದಲ ಕೇಳಿ ತಕ್ಷಣ ಜಾಗೃತರಾದ ಕಾನ್‌ಸ್ಟೇಬಲ್‌ ಸೀತಾರಾಂ ಡಕಾಯಿತರತ್ತ ಗುಂಡು ಹಾರಿಸಿದರು. ಇದರಿಂದ ಬೆದರಿದ ದರೋಡೆಕೋರರು ಕತ್ತಲಲ್ಲಿ ಪರಾರಿಯಾದರು.

‘ದರೋಡೆಕೋರರ ತಂಡ ಶಟರ್‌ ಮುರಿಯಲು ಯತ್ನಿಸುತ್ತಿದ್ದಾಗ ಸೀತಾರಾಂ ಒಳಗಿನಿಂದ ಈ ಕೃತ್ಯವನ್ನು ಗಮನಿಸಿದರು. ತಕ್ಷಣ ಗುಂಡು ಹಾರಿಸಿ ಡಕಾಯಿತರನ್ನು ಬೆದರಿಸಿದರು’ ಎಂದು ಕ್ರೈಂ ವಿಭಾಗದ ಎಸಿಪಿ ಪ್ರಫುಲ್‌ ಕುಮಾರ್‌ ತಿಳಿಸಿದರು.

ಇಷ್ಟೆಲ್ಲ ಮಾಹಿತಿ ಕೊಡುವವರಿಗೆ ಆ ಬ್ಯಾಂಕಿನ ಹೆಸರು ಹೇಳಲು ಯಾಕೆ ಹೆದರಿಕೆ? ಆ ನಾಲಾಯಕ್ ಗಳು ಯಾರು ಎಂಬುದು ಸಾರ್ವಜನಿಕರಿಗೆ ತಿಳಿಯಲಿ.

ಬಳಿಕ ಅಲಾರಾಂ ಮೊಳಗಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಪೊಲೀಸರ ತಂಡ ಧಾವಿಸಿತು. ಪೊಲೀಸ್‌ ನಿಯಂತ್ರಣ ಕೊಠಡಿ ಮತ್ತು ವೈರ್‌ಲೆಸ್‌ ಕಚೇರಿಗೆ ಮಾಹಿತಿ ನೀಡಲಾಯಿತು. ಅನಂತರ ಇಡೀ ನಗರದಲ್ಲಿ ನಾಕಾಬಂದಿ ಹಾಕಲಾಯಿತು. ದರೋಡೆಕೋರರನ್ನು ಗುರುತಿಸಲು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಯಿತು ಎಂದು ಎಸಿಪಿ ಮಾಹಿತಿ ನೀಡಿದರು.

‘ಇದು ಬ್ಯಾಂಕಿನ ಕೇಂದ್ರೀಕೃತ ಖಜಾನೆಯಾಗಿದ್ದು,ರಾಜ್ಯದ ಇತರ ಶಾಖೆಗಳಿಗೆ ಇಲ್ಲಿಂದಲೇ ಹಣ ಪೂರೈಸಲಾಗುತ್ತದೆ. ವಾರದ ಮೊದಲ ದಿನ (ಸೋಮವಾರ) ಈ ಬ್ಯಾಂಕ್‌ನಲ್ಲಿ ಲಭ್ಯವಿರುವ ಹಣದ ಮೊತ್ತದ ಬಗ್ಗೆ ಸ್ಪಷ್ಟ ಮಾಹಿತಿ ಇದ್ದ ಡಕಾಯಿತರು ಪೂರ್ವನಿಯೋಜಿತವಾಗಿಯೇ ಈ ಕೃತ್ಯಕ್ಕೆ ಕೈಹಾಕಿದ್ದಾರೆ’ ಎಂದು ಕುಮಾರ್ ತಿಳಿಸಿದರು.

‘ಈ ಬ್ಯಾಂಕ್ ಶಾಖೆ ರಿಸರ್ವ್‌ ಬ್ಯಾಂಕ್‌ ನಿಗದಿಪಡಿಸಿದ ಭದ್ರತಾ ನಿಯಮಗಳನ್ನು ಸಮರ್ಪಕವಾಗಿ ಪಾಲಿಸುತ್ತಿರಲಿಲ್ಲ. ಪ್ರಾಥಮಿಕ ತನಿಖೆಗಳ ಪ್ರಕಾರ, ಬ್ಯಾಂಕ್‌ನಲ್ಲಿ ‘ಟೈಮ್‌ ಲಾಕ್‌’ ಇರಲಿಲ್ಲ. ಕರೆನ್ಸಿ ಚೆಸ್ಟ್‌ ಇರುವ ಶಾಖೆಗಳಲ್ಲಿ ಟೈಮ್‌ ಲಾಕ್‌ ಇರುವುದು ಕಡ್ಡಾಯ. ಶಟರನ್ನೂ ಸರಿಯಾಗಿ ಮುಚ್ಚಿರಲಿಲ್ಲ. ಸ್ಟ್ರಾಂಗ್‌ರೂಂ ಒಳಗೆ ಇಡಬೇಕಾದ ಹಣವನ್ನು ಹೊರಗೆ ಇಡಲಾಗಿತ್ತು’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ವಿವರಿಸಿದರು. ಕಳೆದ ಸೋಮವಾರ ಈ ಘಟನೆ ನಡೆದಿದೆ.

Comments are closed.