ರಾಷ್ಟ್ರೀಯ

ಗೋವು ರಾಷ್ಟ್ರಪ್ರಾಣಿಯಾಗಲಿ: ಜಮಾತ್‌ ಉಲೆಮಾ ಅಧ್ಯಕ್ಷ ಮದನಿ

Pinterest LinkedIn Tumblr

ಸಹರಣ್‌ಪುರ:’ಗೋ ಸಂರಕ್ಷಣೆಯ ಹೆಸರಿನಲ್ಲಿ ಆಗುತ್ತಿರುವ ಹತ್ಯೆಗಳು ಮತ್ತು ದಾಳಿಗಳು ನಿಲ್ಲಿಸಬೇಕು. ಗೋವನ್ನು ರಾಷ್ಟ್ರ ಪ್ರಾಣಿಯನ್ನಾಗಿ ಘೋಷಿಸಬೇಕು’ ಎಂದು ಜಮಾತ್‌ ಉಲೆಮಾ ಇ ಹಿಂದ್‌ನ ಅಧ್ಯಕ್ಷ ಮೌಲಾನಾ ಅರ್ಷದ್‌ ಮದನಿ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮದನಿ ‘ಮನುಷ್ಯನ ಜೀವ ಮತ್ತು ಗೋವುಗಳನ್ನು ರಕ್ಷಿಸುವ ಸಲುವಾಗಿ ಗೋವನ್ನು ರಾಷ್ಟ್ರ ಪ್ರಾಣಿಯನ್ನಾಗಿ ಘೋಷಿಸಬೇಕು. ಇದು ದೇಶದ ಶಾಂತಿಗೂ ನೆರವಾಗಲಿದೆ’ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ದೇಶಾದ್ಯಂತ ಗೋ ಹತ್ಯೆಯ ಕುರಿತಾಗಿ ಪರ ವಿರೋಧದ ವ್ಯಾಪಕ ಚರ್ಚೆ ನಡೆಯುತ್ತಿರುವ ಮದನಿ ನೀಡಿರುವ ಹೇಳಿಕೆ ವಿರುದ್ಧ ಕೆಲವರು ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ.

Comments are closed.