
ಮಂಗಳೂರು : ಸದಾಚಾರ ಹಾಗೂ ನಿಸ್ವಾರ್ಥವಾಗಿ ಮಾಡುವ ಸಾಮಾಜಿಕ ಕಳಕಳಿಯ ಸೇವೆಗೆ ಭಗವಂತನ ಅನುಗ್ರಹ ಪ್ರಾಪ್ತಿಯಾಗುವುದು ಖಚಿತ. ನಮ್ಮ ಗಳಿಕೆಯ ಸಂಪನ್ಮೂಲ ಸದ್ವಿನಿಯೋಗವಾಗಬೇಕು ಎಂದು ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇವಾಲಯದ ಅನುವಂಶಿಕ ಅರ್ಚಕ ವೇದಮೂರ್ತಿ ಅನಂತ ಪದ್ಮನಾಭ ಅಸ್ರಣ್ಣ ಅವರು ಹೇಳಿದರು.
ಅವರು ಪೆರ್ಮುದೆ-ಸೋಮನಾಥಧಾಮ- ಶ್ರೀ ಶಾರದಾ ಯಕ್ಷಗಾನ ಮಂಡಳಿಯ ನೂತನ ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಚಿತ್ರನಟ, ಉದ್ಯಮಿ ಗಿರೀಶ್ ಎಂ. ಶೆಟ್ಟಿ ಕಲ್ಪವೃಕ್ಷ ಅವರು ಸೇವಾ ರೂಪದಲ್ಲಿ ಸಮರ್ಪಿಸಿದ ನೂತನ ಸಭಾಂಗಣವನ್ನು ಅವರ ತಾಯಿ ವಸಂತಿ ಎಂ ಶೆಟ್ಟಿ ಕಲ್ಪವೃಕ್ಷ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಟೈಮ್ ಆಫ್ ಇಂಡಿಯಾ ಚೀಫ್ ಮ್ಯಾನೇಜರ್ ಕದ್ರಿ ನವನೀತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಶಾರದಾ ಯಕ್ಷಗಾನ ಮಂಡಳಿಯ ಅಧ್ಯಕ್ಷ ಶೇಖರ ಶೆಟ್ಟಿ ಕಲ್ಪವೃಕ್ಷ ಅವರು ಮಾತನಾಡಿದರು. ಮನುಷ್ಯನ ಹುಟ್ಟು ಸಹಜ, ಸಾವು ನಿಶ್ಚಿತ, ನಾವು ಜೀವನದಲ್ಲಿ ಸಾಧಿಸದ ಸಂಪಾದನೆಗಿಂತ ಸಮಾಜಕ್ಕೆ ನೀಡಿದ ಕೊಡುಗೆಗಳು ಜೀವಂತವಾಗಿರುತ್ತದೆ. ನಾವು ಮಾಡಿದ ಒಳ್ಳೆಯ ಸತ್ಕರ್ಮಗಳು ಮಾತ್ರ ನೆನಪಾಗಿ ಉಳಿಯುತ್ತದೆ ಎಂದು ಗಿರೀಶ್ ಎಂ. ಶೆಟ್ಟಿ ಕಟೀಲು ತಿಳಿಸಿದರು.
ಭುಜಂಗ ಶೆಟ್ಟಿ ಪಾರಾಳೆಗುತ್ತು, ಗುರುರಾಜ ಮಾಡ, ಜಿ.ಪಂ ಸದಸ್ಯೆ ವಸಂತಿ ಕಿಶೋರ್, ಪೆರ್ಮುದೆ ಗ್ರಾ.ಪಂ ಅಧ್ಯಕ್ಷೆ ಸರೋಜ ಅಶೋಕ್ ಆರ್ ಶೆಟ್ಟಿ ಕಲ್ಪವೃಕ್ಷ, ಪ್ರೇಮನಾಥ ಎಂ. ಶೆಟ್ಟಿ ಕಲ್ಪವೃಕ್ಷ ಪ್ರಿಯಾ ಜಿ. ಶೆಟ್ಟಿ ಉಪಸ್ಥಿತರಿದ್ದರು.
ಸುಗಂಧಿ ಶಿವರಾಮ ಭಂಡಾರಿ ಪ್ರಾರ್ಥಿಸಿದರು. ಗಿರೀಶ್ ಎಂ. ಶೆಟ್ಟಿ ಸ್ವಾಗತಿಸಿದರು. ಉಲ್ಲಾಸ್ ಆರ್. ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ದೀಪಕ್ ಪೆರ್ಮುದೆ ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು.
ಇದೇ ಸಂದರ್ಭ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಕಂಸ ವಿವಾಹ ಯಕ್ಷಗಾನ ಬಯಲಾಟ ಹಾಗೂ ಕಾರ್ನಿಕದ ಶಿವಮಂತ್ರ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.
Comments are closed.