ಕರಾವಳಿ

ಪುತ್ತೂರು ಕಂಬಳದಲ್ಲಿ ತಪ್ಪಿದ್ದ ಅವಘಡ : ಕೋಣಗಳ ಮಧ್ಯೆ ಬಂದ ಬಾಲಕ ಕೂದಳೆಲೆಯ ಅಂತರದಲ್ಲಿ ಪಾರು

Pinterest LinkedIn Tumblr

https://www.youtube.com/watch?v=DJgIn6y4Imw

ಮಂಗಳೂರು: ಈಗಾಗಲೇ ನಿಷೇಧದ ತೂಗು ಕತ್ತಿಯ ಗೊಂದಲದಿಂದ ವಿವಾದಕ್ಕೆ ಸಿಲುಕಿರುವ ಮಧ್ಯೆಯೇ ಕೆಲವೊಂದು ಕಡೆಗಳಲ್ಲಿ ತುಳುನಾಡಿನ ಜಾನಪದ ಕ್ರೀಡೆ ಕಂಬಳವನ್ನು ಆಯೋಜಿಸಲಾಗುತ್ತಿದ್ದು, ಇದೀಗ ಈ ರೀತಿ ಅಯೋಜಿಸಲಾದ ಕಂಬಳವೊಂದರಲ್ಲಿ ಅವಘಡವೊಂದು ಸ್ವಲ್ಪದರಲ್ಲೇ ತಪ್ಪಿದ ಘಟನೆ ಬೆಳಕಿಗೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಾನುವಾರ ನಡೆದ ಕಂಬಳದಲ್ಲಿ ಕೋಣಗಳ ಮಧ್ಯೆ ಬಂದ ಬಾಲಕನೋರ್ವ ಕೂದಳೆಲೆಯ ಅಂತರದಲ್ಲಿ ಪಾರಾದ ಘಟನೆ ನಡೆದಿದ್ದು, ಈ ವೇಳೆ ಯಾವೂದೇ ರೀತಿಯ ಗಾಯವಾಗದೇ ಪವಾಡ ಸದೃಶವಾಗಿ ಪಾರಾದ ಬಾಲಕನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೋಣಗಳು ಕಂಬಳ ಓಟದ ಆರಂಭ ಸ್ಥಳದಿಂದ ಕರೆಯಲ್ಲಿ ಓಡಿ ಕಂಬಳ ಫಿನಿಶಿಂಗ್ ಪಾಯಿಂಟ್ ಮಂಜೊಟ್ಟಿಯತ್ತ ಬಂದಿವೆ. ಈ ಸಂದರ್ಭದಲ್ಲಿ ಅಲ್ಲೇ ನಿಂತು ಕಂಬಳ ವೀಕ್ಷಿಸುತ್ತಿದ್ದ ಪುಟ್ಟ ಬಾಲಕ ಆಕಸ್ಮಿಕವಾಗಿ ಓಟದ ಕೋಣಗಳ ಮುಂದೆ ಬಂದಿದ್ದಾನೆ. ಆದರೆ ಅದೃಷ್ಟವಶಾತ್ ಮಗು ಕೋಣಗಳ ಕಾಲಿನಡಿಗೆ ಸಿಕ್ಕಿ ಹಾಕಿಕೊಂಡಿಲ್ಲ. ಓಟದಲ್ಲಿ ನಿರತವಾಗಿದ್ದ ಕೋಣಗಳು ಮಗುವಿನ ಮೇಲೆ ಹಾದು ಹೋಗಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು .ಆದರೆ ಮಗು ಅದೃಷ್ಟವಶಾತ್ ಪಾರಾಗಿದೆ.

ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪರೈ ನೇತೃತ್ವದಲ್ಲಿ ಪುತ್ತೂರಿನ ಮಹಾಲಿಂಗೇಶ್ವರ ದೇವರಗದ್ದೆಯಲ್ಲಿ ಜನವರಿ 21ರಂದು ನಡೆದ 25ನೇ ವರ್ಷದ ಅದ್ಧೂರಿ ಕಂಬಳದಲ್ಲಿ ಈ ಘಟನೆ ನಡೆದಿದ್ದು, ಈ ದೃಶ್ಯವನ್ನು ಕಂಬಳ ವಿಕ್ಷಕರೊಬ್ಬರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಂಬಳ ವೀಕ್ಷಣೆಗೆ ಬರುವವರು ಮಕ್ಕಳನ್ನು ಜಾಗೃತೆಯಾಗಿ ನೋಡಿಕೊಳ್ಳ ಬೇಕೆಂಬ ಮಾತು ಕೇಳಿಬಂದಿದೆ.

Comments are closed.