ಉಡುಪಿ: ಚುನಾವಣೆಯಲ್ಲಿ ಗೆಲ್ಲಲು ಎಲ್ಲರೂ ಬೇಕು ಅಂತ ರಮಾನಾಥ್ ರೈ ಹೇಳಿದ್ದರೆ ನಮ್ಮ ಆಕ್ರೋಷ ಇರಲಿಲ್ಲ. ರೈ ತಾನೂ ಅಲ್ಪಸಂಖ್ಯಾತರ ಓಟಿನಿಂದ ಗೆದ್ದವನು ಎಂದು ಅಂದು ಸ್ಪಷ್ಟವಾಗಿ ಉಲ್ಲೇಖ ಮಾಡಿ ಹೇಳಿದ್ದರು. ರಮಾನಾಥ ರೈ ತಮ್ಮ ಹೇಳಿಕೆ ಮೊದಲು ವಾಪಾಸ್ ಪಡೆಯಲಿ ಎಂದು ವಿಪಕ್ಷ ಮುಖ್ಯ ಸಚೇತಕ ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ. ಉಡುಪಿಯಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

ನಾನು ಅಧಿಕೃತ ವಾಗಿಯೇ ಬಂಟ್ವಾಳದಲ್ಲಿ ಮಾತನಾಡಿದ್ದೇನೆ. ಆರು ಬಾರಿ ಒಂದು ಸಮುದಾಯದಿಂದ ಮಾತ್ರವೇ ಗೆದ್ದಿದ್ದೇನೆ ಅಂತ ರಮಾನಾಥ ರೈ ಹೇಳಿದ್ದು ಇದರಿಂದ ಬಂಟ್ವಾಳದ ಕ್ಷೇತ್ರದ ಹಿಂದೂಗಳಿಗೆ ಅಪಮಾನವಾಗಿದೆ. ರಮಾನಾಥ ರೈ ಮಾಡಿರುವ ಅಪಮಾನಕ್ಕೆ ಉತ್ತರ ಕೊಡಬೇಕಾಗಿದೆ. ಇನ್ನೂ ಹತ್ತು ಸಭೆಗಳಲ್ಲಿ ಇದನ್ನು ಉಲ್ಲೇಖ ಮಾಡುತ್ತೇನೆ ಎಂದು ತಮ್ಮ ಹೇಳಿಕೆ ಬಗ್ಗೆ ಸುನೀಲ್ ಕುಮಾರ್ ಸ್ಪಷ್ಟನೆ ನೀಡಿದ್ರು.
‘ಬಂಟ್ವಾಳದಲ್ಲಿ ರಾಮ ಮತ್ತು ಅಲ್ಲಾಹು ನಡುವಿನ ಚುನಾವಣ ಕದನ’ ಎಂದು ಈ ಹಿಂದೆ ಸುನೀಲ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
Comments are closed.