ಕರಾವಳಿ

ಪಾದಗಳ ವ್ಯಾಯಾಮದಿಂದ ಹಲವು ಅನಾರೋಗ್ಯಗಳು ದೂರ

Pinterest LinkedIn Tumblr

ನಮ್ಮ ದೇಹದಲ್ಲಿ ಕಾಲಿನ ಪಾದಗಳು ಬಹಳ ಮುಖ್ಯವಾದ ಭಾಗ. ಅವಿಲ್ಲದೆ ನಾವು ಎಲ್ಲಿಗೂ ಹೋಗಲು ಸಾಧ್ಯವಿಲ್ಲ. ನಿಲ್ಲಲಾರೆವು. ಒಂದು ರೀತಿಯಲ್ಲಿ ಹೇಳಬೇಕೆಂದರೆ ಯಾವುದೇ ಕೆಲಸವನ್ನೂ ಮಾಡಲು ಸಾಧ್ಯವಿಲ್ಲ. ಕಾಲಿನ ಪಾದ ಎಂಬುದು ನಮ್ಮ ದೇಹಕ್ಕೆ ಬೇಸ್ ತರಹದ್ದು ಎಂದು ಆಯುರ್ವೇದ ಸಹ ಹೇಳುತ್ತದೆ. ಈ ಹಿನ್ನೆಲೆಯಲ್ಲಿ ನಾವು ನಿತ್ಯ ಪಾದಗಳಿಗೆ ಸಹ ಎಕ್ಸ್‌ರ್‌ಸೈಜ್ ಮಾಡಬೇಕು. ಆದರೆ ಬಹಳಷ್ಟು ಮಂದಿ ಕಾಲಿನ ತನಕ ವ್ಯಾಯಾಮ ಮಾಡುತ್ತಾರೆ. ಆದರೆ ಪಾದಗಳಿಗೂ ವ್ಯಾಯಾಮ ಮಾಡಿದರೆ ಅದರಿಂದ ಹಲವು ಅನಾರೋಗ್ಯಗಳು ದೂರವಾಗುತ್ತವೆ. ಇದರಿಂದ ಇತರೆ ಲಾಭಗಳು ಸಹ ನಮಗೆ ಉಂಟಾಗುತ್ತವೆ. ಈ ಹಿನ್ನೆಲೆಯಲ್ಲಿ ಪಾದಗಳಿಗೆ ಮಾಡುವ ವ್ಯಾಯಾಮ ಏನು ಎಂದು ಈಗ ತಿಳಿದುಕೊಳ್ಳೋಣ.

1. ಟೋ ಪ್ರೆಸ್ಸಿಂಗ್ (ಪಾದಗಳಿಂದ ಒತ್ತಡ ಉಂಟು ಮಾಡುವುದು)
ಈ ವ್ಯಾಯಾಮ ಮಾಡುವುದು ತುಂಬಾ ಸುಲಭ. ಪಾದಗಳನ್ನು ಸಂಪೂರ್ಣವಾಗಿ ನೆಲಕ್ಕೆ ತಾಗಿಸದೆ ಮುಂಬೆರಳಿನಿಂದ ನಿಂತು 3 ಸೆಕೆಂಡ್ ಕಾಲ ಹಾಗೆಯೇ ಇರಬೇಕು. ಆ ಬಳಿಕ ಸ್ವಲ್ಪ ಸಮಯ ಬಿಟ್ಟು ಮತ್ತೆ ಅದೇ ರೀತಿ ಮಾಡಬೇಕು. ಈ ರೀತಿ ನಿತ್ಯ ಕನಿಷ್ಠ 10 ಸಲ ಮಾಡಿದರೆ ಅದರಿಂದ ಮೊಣಕಾಲು ನೋವು ಕಡಿಮೆಯಾಗುತ್ತದೆ.

2. ಟೋ ವಾಕಿಂಗ್ (ಮುಂಬೆರಳ ಮೇಲೆ ನಡೆಯುವುದು)
ಇದು ಮೇಲೆ ತಿಳಿಸಿದ ವ್ಯಾಯಾಮವನ್ನು ಹೋಲುತ್ತದೆ. ಆದರೆ ಇದರಲ್ಲಿ ಪಾದಗಳ ಮುಂಬೆರಳುಗಳ ಮೇಲೆ ನಡೆಯಬೇಕಾಗುತ್ತದೆ. ಆ ರೀತಿ 20-30 ಸೆಕೆಂಡ್ ಕಾಲ ನಡೆದ ಮೇಲೆ ಕೆಲವು ಸೆಕೆಂಡ್ ಗ್ಯಾಪ್ ಕೊಟ್ಟು ಮತ್ತೆ 20-30 ಸೆಕೆಂಡ್ ಕಾಲ ಮುಂಬೆರಳಿನ ಮೇಲೆ ನಡೆಯಬೇಕು. ಈ ರೀತಿ ಕನಿಷ್ಠ 3 ರಿಂದ 5 ಸಲ ಮಾಡಿದರೆ ಅದರಿಂದ ಕಾಲುಗಳು ದೃಢವಾಗಿ ಬದಲಾಗುತ್ತವೆ. ಸ್ನಾಯುಗಳ ನೋವು ನಿವಾರಣೆಯಾಗುತ್ತದೆ.

3. ಆಂಕಲ್ ಸರ್ಕಲ್ಸ್ (ಹಿಮ್ಮಡಿಗಳು)
ಕುರ್ಚಿ ಮೇಲೆ ಕುಳಿತು ಯಾವುದಾದರೂ ಒಂದು ಕಾಲನ್ನು ದೂರವಾಗಿ ಚಾಚಿ ಕೇವಲ ಪಾದವನ್ನು ಮಾತ್ರ ಆಂಟಿ ಕ್ಲಾಕ್ ವೈಸ್ ಡೈರೆಕ್ಷನ್‌ನಲ್ಲಿ ವೃತ್ತಾಕಾರವಾಗಿ ಸುತ್ತಬೇಕು. ಅಂದರೆ ಗಡಿಯಾರ ಮುಳ್ಳು ತಿರುಗುವ ದಿಕ್ಕಿಗೆ ವಿರುದ್ಧವಾದ ದಿಕ್ಕು ಎಂದರ್ಥ. ಆ ರೀತಿ 10 ಸೆಕೆಂಡ್ ಕಾಲ ಮಾಡಿದ ಮೇಲೆ, ಮತ್ತೊಂದು ಕಾಲಿಗೂ ಮಾಡಬೇಕು. ಈ ರೀತಿ ಕಾಲುಗಳನ್ನು ಬದಲಾಯಿಸುತ್ತಾ 5, 6 ಸಲ ಈ ಎಕ್ಸರ್‌ಸೈಜ್ ಮಾಡಬೇಕಾಗುತ್ತದೆ.

4. ರೆಸಿಸ್ಟೆಡ್ ಫ್ಲೆಕ್ಸಿಯನ್
ಚಿತ್ರದಲ್ಲಿ ತೋರಿಸಿದ ರೀತಿಯಲ್ಲಿ ಯಾವುದಾದರೂ ಒಂದು ಪೋಲ್‌ಗೆ ಒಂದು ಎಕ್ಸರ್‌ಸೈಜ್ ಬ್ಯಾಂಡ್ ಹಾಕಿ ಅದರಲ್ಲಿ ಪಾದವನ್ನು ಇಡಬೇಕು. ಆ ಬಳಿಕ ಪಾದವನ್ನು ಹಿಂದಕ್ಕೆ ಎಳೆಯಬೇಕು. ಈ ರೀತಿ 5 ರಿಂದ 8 ಸೆಕೆಂಡ್‌ಗಳ ಕಾಲ ಮಾಡಿದ ಮೇಲೆ ಪಾದ ಬದಲಾಯಿಸಬೇಕು. ಈ ರೀತಿ ನಿತ್ಯ 5, 6 ಸಲ ಮಾಡಿದರೆ ಸ್ನಾಯುಗಳು ದೃಢವಾಗಿ ಬದಲಾಗುತ್ತವೆ. ಕಾಲಿನ ನೋವುಗಳು ನಿವಾರಣೆಯಾಗುತ್ತವೆ.

5. ಟಾಪ್ ಪೆನ್ಸಿಲ್ ಪಿಕಲ್ಸ್
ನೆಲದ ಮೇಲೆ ನಿಂತು ಪಾದವನ್ನು ಮೇಲೆತ್ತಿ ಅದನ್ನು ಮುಂಬೆರಳಿನಿಂದ ನೆಲದ ಮೇಲೆ ಬಿದ್ದಿರುವ ಪೆನ್ಸಿಲನ್ನು ಎತ್ತಿಕೊಂಡು, ಆ ಬಳಿಕ ಪಾದವನ್ನು ಮೇಲೆತ್ತಿ ಇಡಬೇಕು. ಈ ರೀತಿ 10 ಸೆಕೆಂಡ್ ಕಾಲ ಇದ್ದ ಮೇಲೆ, ಮತ್ತೆ ಪೆನ್ಸಿಲನ್ನು ಕೆಳಗೆ ಹಾಕಿ ಇನ್ನೊಂದು ಪಾದದಿಂದ ಅದೇ ರೀತಿ ಮಾಡಬೇಕು. ಈ ವ್ಯಾಯಾಮವನ್ನು ನಿತ್ಯ 5 ಸಲ ಮಾಡಬೇಕಾಗುತ್ತದೆ. ಇದರಿಂದ ಕಾಲಿನ ನೋವುಗಳು ಕಡಿಮೆಯಾಗುತ್ತವೆ. ಪಾದಗಳು ಆರೋಗ್ಯವಾಗಿ ಇರುತ್ತವೆ.

Comments are closed.