ಕರಾವಳಿ

ಹಿಂದೂ ಧರ್ಮ‌ ಲಿಂಗಾಯತ ಧರ್ಮ ಬೇರೆಯಲ್ಲ-ಚರ್ಚೆಗೆ ಸಿದ್ಧ: ಪೇಜಾವರ ಶ್ರೀ

Pinterest LinkedIn Tumblr

ಉಡುಪಿ: ಲಿಂಗಾಯತ ಧರ್ಮ ಪ್ರತ್ಯೇಕ ವಿಚಾರದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಮೌನ ಮುರಿದಿದ್ದಾರೆ.

ಈ ವಿಚಾರವಾಗಿ ಚರ್ಚೆಗೆ ಕರೆದರೆ ನಾನು ಸಿದ್ದ ,ಪರ್ಯಾಯ ಅವಧಿ‌ ಮುಗಿದ ನಂತರ ನಾನು ಚರ್ಚೆಗೆ ಹೋಗ್ತೇನೆ. ಹಿಂದೂ ಧರ್ಮ‌ ಲಿಂಗಾಯತ ಧರ್ಮ ಬೇರೆಯಲ್ಲ. ಎಲ್ಲರೂ‌ ಕೂಡ ಶಿವನ‌ ಭಕ್ತರು. ಶಿವ ಹಿಂದೂ ದೇವತೆ. ಯಾರು‌ ಹಿಂದು ದೇವತೆಯನ್ನು ಸ್ವೀಕಾರ ಮಾಡ್ತಾರೋ..ಅವರೆಲ್ಲ ಹಿಂದೂಗಳು. ನಮ್ಮಲ್ಲಿ‌ ಬೇಧ ಭಾವ ಬೇಡ, ಹಿಂದೂ ನಾವೆಲ್ಲಾ ಹಿಂದು‌ ಎನ್ನುವ ನೆಲೆಯಲ್ಲಿ‌ ಒಂದಾಗೋಣ ಎಂದು ಅವರು ಹೇಳಿದ್ದಾರೆ.

Comments are closed.