ಕರಾವಳಿ

ಸಿಂಡಿಕೇಟ್ ಬ್ಯಾಂಕಿನ ಗ್ರಾಹಕರ ಗಮನಕ್ಕೆ….

Pinterest LinkedIn Tumblr

ಉಡುಪಿ: ಕೇಂದ್ರ ಸರ್ಕಾರದ ಆದೇಶದಂತೆ ಎಲ್ಲ ಗ್ರಾಹಕರು ತಮ್ಮ ಆಧಾರ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕಾಗಿದೆ ಎಂದು ಲೀಡ್ ಬ್ಯಾಂಕ್ ಮೆನೇಜರ್ ಫ್ರಾನ್ಸಿಸ್ ಬೊರ್ಜಿಯಾ ತಿಳಿಸಿದ್ದಾರೆ.

ದಿನಾಂಕ 31ರೊಳಗೆ ತಮ್ಮ ಸಿಂಡಿಕೇಟ್ ಶಾಖೆಗಳಿಗೆ ಭೇಟಿ ನೀಡಿ ಆಧಾರ ಸಂಖ್ಯೆಯ ಜೋಡಣೆ ಹಾಗೂ ದೃಢೀಕರಣ ಮಾಡಿಕೊಳ್ಳಿ ಎಂದು ಅವರು ವಿನಂತಿಸಿದ್ದಾರೆ. 1 ನೇ ಜನವರಿ ೨೦೧೮ ರಿಂದ ಆಧಾರ ಸಂಖ್ಯೆ ಜೋಡಣೆ ಮಾಡದ ಮತ್ತು ದೃಢೀಕರಣಗೊಳ್ಳದ ಬ್ಯಾಂಕ ಖಾತೆಗಳು ಸ್ಥಗಿತಗೊಳ್ಳಲಿವೆ.

ಎಟಿ‌ಎಮ್ ನಿಂದ, ಬ್ಯಾಂಕಿನ ವೆಬ್ ಸೈಟ್ ಮುಖಾಂತರ, ಇಂಟರ್‌ನೆಟ್ ಮುಖಾಂತರ, ಶಾಖೆಗಳ ಮುಖಾಂತರ, ಮೊಬೈಲ್ ಬ್ಯಾಂಕಿಗ್ ಆಪ್, ಹಾಗೂ ಶಾಖೆಗಳ ಮುಖಾಂತರ ಆಧಾರ ಜೋಡನೆ ಮಾಡಿಕೊಳ್ಳಬಹುದು. ಬ್ಯಾಂಕಿನ ವೆಬ್ ಸೈಟ್ ಹಾಗೂ ಶಾಖೆಗಳ ಮುಖಾಂತರ ಆಧಾರ ದೃಢೀಕರಣದ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

Comments are closed.