ಮನೋರಂಜನೆ

ಮಗಳನ್ನು ಟ್ರೋಲ್ ಮಾಡಿದ್ದಕ್ಕೆ ಖಡಕ್ ಉತ್ತರ ನೀಡಿದ ಅಭಿಷೇಕ್ ಬಚ್ಚನ್!

Pinterest LinkedIn Tumblr

ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಐಶ್ವರ್ಯ ರೈಗೆ ಒಳ್ಳೆಯ ಗಂಡ ಹಾಗೂ ಆರಾಧ್ಯಗೆ ಒಳ್ಳೆಯ ತಂದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇತ್ತೀಚಿಗೆ ಟ್ವಿಟ್ಟರ್ ನಲ್ಲಿ ಆರಾಧ್ಯನನ್ನು ಟ್ರೋಲ್ ಮಾಡಿದ್ದಕ್ಕೆ ಅಭಿಷೇಕ್ ಬಚ್ಚನ್ ಖಡಕ್ ಉತ್ತರ ನೀಡಿದ್ದಾರೆ.

ಇತ್ತೀಚಿಗೆ ನಟಿ ಐಶ್ವರ್ಯ ಪಾಲ್ಗೊಂಡ ಎಲ್ಲಾ ಕಾರ್ಯಕ್ರಮದಲ್ಲಿ ಆರಾಧ್ಯ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಆ ಕಾರ್ಯಕ್ರಮದ ಫೋಟೋಗಳನ್ನು ಐಶ್ವರ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಇದನ್ನು ನೋಡಿ ಶೆರಿನ್ ಬ್ಯಾಟ್ಡಿ ಎಂಬಾಕೆ, ಅಭಿಷೇಕ್ ನಿಮ್ಮ ಮಗಳು ಶಾಲೆಗೆ ಹೋಗುತ್ತಿದ್ದಾಳಾ ಎಂದು ಪ್ರಶ್ನಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಅಭಿಷೇಕ್ ನಿಮ್ಮ ಮಗಳು ಸ್ಕೂಲ್ ಗೆ ಹೋಗ್ತಿಲ್ವ? ತಾಯಿಯ ಜೊತೆ ಟ್ರೀಪ್ ಗೆ ಹೋಗಲು ಶಾಲೆ ಅವರು ಹೇಗೆ ಅನುಮತಿ ನೀಡುತ್ತಾರೆ ಎಂದು ನನಗೆ ಆಶ್ಚರ್ಯವಾಗುತ್ತಿದೆ, ಯಾವಾಗ ನೊಡಿದ್ದರು ತನ್ನ ಅಹಂಕಾರದ ತಾಯಿ ಜೊತೆ ಕೈ-ಕೈ ಹಿಡಿದು ತಿರುಗುತ್ತಿರುತ್ತಾಳೆ. ಆಕೆಯ ಬಾಲ್ಯ ಸಾಮಾನ್ಯವಾಗಿಲ್ಲ ಎಂದು ಶೆರಿನ್ ಬ್ಯಾಟ್ಡಿ ಟ್ವೀಟ್ ಮಾಡಿದ್ದರು.

ಶೆರಿನ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಅಭಿಷೇಕ್ ಬಚ್ಚನ್ “ಮೇಡಂ, ನನಗೆ ತಿಳಿದ ಹಾಗೆ ವಾರಾಂತ್ಯದಲ್ಲಿ ಹಲವು ಶಾಲೆಗಳು ಮುಚ್ಚಿರುತ್ತದೆ. ಅವಳು ವಾರದ ದಿನಗಳಲ್ಲಿ ಮಾತ್ರ ಶಾಲೆಗೆ ಹೋಗುತ್ತಾಳೆ. ಬಹುಶಃ ನಿಮ್ಮ ಟ್ವೀಟ್ ನಲ್ಲಿ ನೀವು ನಿಮ್ಮ ಕಾಗುಣಿತವನ್ನು ಪರಿಗಣಿಸಬೇಕು” ಎಂದು ಟ್ವೀಟ್ ಮಾಡಿ ಉತ್ತರ ನೀಡಿದ್ದಾರೆ. ಅಭಿಷೇಕ್ ಆ ಟ್ವೀಟ್ ಗೆ ಪ್ರತಿಕ್ರಿಯೆ ನೀಡುತ್ತಿದ್ದಂತೆ ಶೆರಿನ್ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.

Comments are closed.