ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಉದಯವಾಣಿ ಪತ್ರಿಕೆಯ ಉಪಸಂಪಾದಕ ಗಣೇಶ್ ಪ್ರಸಾದ್ ಪಾಂಡೇಲು ಅವಿರೋಧ ಆಯ್ಕೆಯಾಗಿದ್ದಾರೆ.
(ಗಣೇಶ್ ಪ್ರಸಾದ್ ಪಾಂಡೇಲು, ಸಂತೋಷ್ ಸರಳೇಬೆಟ್ಟು)
ಉಡುಪಿಯ ಬ್ರಹ್ಮಗಿರಿಯಲ್ಲಿನ ಐಎಂಎ ಭವನದಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ ಟಿವಿ ಉಡುಪಿ ವರದಿಗಾರ ಸಂತೋಷ್ ಸರಳೇಬೆಟ್ಟು, ಕೋಶಾಧಿಕಾರಿಯಾಗಿ ಸ್ಪಂದನ ವಾಹಿನಿ ವರದಿಗಾರ ದಿವಾಕರ ಭಂಡಾರಿ, ಉಪಾಧ್ಯಕ್ಷರಾಗಿ ಉದಯಕುಮಾರ್ ಹೆಬ್ರಿ, ಕೆ.ಸಿ. ರಾಜೇಶ್ ಕುಂದಾಪುರ, ರಾಮಚಂದ್ರ ಆಚಾರ್ ಪಡುಬಿದ್ರೆ, ಜೊತೆ ಕಾರ್ಯದರ್ಶಿಯಾಗಿ ಮೈಕಲ್ ರೋಡ್ರಿಗಸ್, ಕ್ರೀಡಾ ಕಾರ್ಯದರ್ಶಿ ಹರೀಶ್ ಪಾಲೆಚ್ಚಾರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉಡುಪಿಯ ನವ್ಯಜ್ಯೋತಿ ನೆಲ್ಲಿಜೆ, ಪುಂಡಲೀಕ ಮರಾಠೆ ಕಾಪು, ಗಣೇಶ್ ಸಾಬ್ರಕಟ್ಟೆ, ಮಝರ್ ಕುಂದಾಪುರ, ನಾಗರಾಜ್ ರಾಯಪ್ಪನ ಮಠ ಕುಂದಾಪುರ, ಕೆ.ಎಂ ಖಲೀಲ್ ಕಾರ್ಕಳ, ಮಹಮ್ಮದ್ ಶರೀಫ್ ಕಾರ್ಕಳ ಆಯ್ಕೆಯಾದರು.
ಉಡುಪಿ ಪತ್ರಕರ್ತರ ಸಂಘದ ನಿರ್ಗಮನ ಅಧ್ಯಕ್ಷ ಜಯಕರ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಿನೇಶ್ ಕಿಣಿ ಚುನಾವಣಾ ಅಧಿಕಾರಿಯಾಗಿ, ಶಶಿಧರ್ ಮಾಸ್ತಿಬೈಲು ಸಹಾಯಕ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.