ಮನೋರಂಜನೆ

ತನ್ನ ಸೊಸೆಯನ್ನೇ ಮರೆತ ನಟ ಜಗ್ಗೇಶ್ ! ಅಭಿಮಾನಿ ನೆನಪಿಸಿದ್ದೇನು..?

Pinterest LinkedIn Tumblr

ಬೆಂಗಳೂರು: ನವರಸನಾಯಕ ಜಗ್ಗೇಶ್ ಪುತ್ರ ಗುರುರಾಜ್ ವಿದೇಶೀ ಯುವತಿಯನ್ನು ವಿವಾಹವಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಸಂಸಾರದ ಹೆಣ್ಣುಮಕ್ಕಳ ಬಗ್ಗೆ ಹೇಳುವಾಗ ಸೊಸೆಯನ್ನೇ ಮರೆತ ಜಗ್ಗೇಶ್ ಗೆ ಅಭಿಮಾನಿಗಳೇ ನೆನಪಿಸಿದ್ದಾರೆ.

ವಿಷಯ ಇಷ್ಟೇ. ಜಗ್ಗೇಶ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಮಗ ಮತ್ತು ಪತ್ನಿ ಪರಿಮಳಾ ಇರುವ ಫೋಟೋವೊಂದನ್ನು ಪ್ರಕಟಿಸಿ, ನಮ್ಮ ಮನೆಯಲ್ಲಿ ನಾವು ನಾಲ್ವರು ಗಂಡು ಮಕ್ಕಳು. ಇಬ್ಬರು ಪುತ್ರರು ಮತ್ತು ಮೊಮ್ಮಗ ಅರ್ಜುನ್. ಇವಳೊಬ್ಬಳೇ ಹೆಣ್ಣುಮಗಳು. ಹಾಗಾಗಿ ಈ ಜೀವಕ್ಕೆ ಬೆಲೆ ಜಾಸ್ತಿ ಎಂದು ಜಗ್ಗೇಶ್ ಬರೆದುಕೊಂಡಿದ್ದರು.

ಇದನ್ನು ನೋಡಿದ ಅಭಿಮಾನಿಯೊಬ್ಬರು ಮನೆಗೆ ಸೊಸೆ ಬಂದಿಲ್ಲವೇ? ಸೊಸೆಯ ಬಗ್ಗೆ ಹೇಳಿ ಅಣ್ಣಾ ಎಂದು ಮನೆಯ ಇನ್ನೊಬ್ಬ ಮಹಿಳಾ ಸದಸ್ಯರ ಬಗ್ಗೆ ನೆನಪಿಸಿದ್ದಾರೆ. ತಕ್ಷಣ ತಿದ್ದಿಕೊಂಡ ಜಗ್ಗೇಶ್, ನಾನು ಹುಡುಕಿದ್ದರೂ ಇಂತಹಾ ಹೆಣ್ಣು ಸಿಗುತ್ತಿರಲಿಲ್ಲ. ನಮಗೆ ಮಗಳು, ನನ್ನ ಮಗನಿಗೆ ಶ್ರೇಷ್ಠ ಹೆಂಡತಿ ಈಕೆ ಎಂದು ಹೊಗಳಿದ್ದಾರೆ.

Comments are closed.