ಕರಾವಳಿ

“ಆಳ್ವಾಸ್ ನುಡಿಸಿರಿ”ಯಲ್ಲಿ ಕಣ್ಮನ ಸೆಳೆದ ಸಾಂಸ್ಕೃತಿಕ ಮೆರವಣಿಗೆ : ಶ್ರೀಲಂಕಾ, ಭೂತಾನ್ ದೇಶಗಳ ತಂಡ ವಿಶೇಷ ಆಕರ್ಷಣೆ

Pinterest LinkedIn Tumblr

ಆಕರ್ಷಕ ಮೆರವಣಿಗೆಯ 60ಕ್ಕೂ ಹೆಚ್ಚು ಚಿತ್ರಗಳನ್ನು ಇಲ್ಲಿ ಕಾಣ ಬಹುದು.

ಮಂಗಳೂರು : ಮೂಡಬಿದ್ರೆಯ ರತ್ನಾಕರವರ್ಣಿ ವೇದಿಕೆಯಲ್ಲಿ ಆಯೋಜಿಸಲಾದ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ “ಆಳ್ವಾಸ್ ನುಡಿಸಿರಿ”ಯನ್ನು ಕನ್ನಡದ ಖ್ಯಾತ ವಿಮರ್ಶಕ, ವಿದ್ವಾಂಸ ಸಿ.ಎನ್. ರಾಮಚಂದ್ರನ್ ಅವರು ಶುಕ್ರವಾರ ಉದ್ಘಾಟಿಸಿದರು.

ಆಳ್ವಾಸ್ ನುಡಿಸಿರಿಯ ಉದ್ಘಾಟನೆಯ ಪೂರ್ವಭಾವಿ‌ಯಾಗಿ ಸಾಂಸ್ಕೃತಿಕ ಮೆರವಣಿಗೆಯನ್ನು ಆಯೋಜಿಸಲಾಗಿದ್ದು, ಮೆರವಣಿಗೆಯನ್ನು ಮೂಲ್ಕಿಯ ಫಾ. ಎಫ್.ಎಕ್ಸ್.ಗೋಮ್ಸ್ ಉದ್ಘಾಟಿಸಿದರು.

ಮೆರವಣಿಗೆಯು ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನದ ವೈಭವಕ್ಕೆ ಹಿಡಿದ ಕನ್ನಡಿಯಂತಿತ್ತು. ಮೆರವಣಿಗೆಯಲ್ಲಿ ಸುಮಾರು 79 ಸಾಂಸ್ಕೃತಿಕ ತಂಡಗಳು ಭಾಗವಹಿಸಿದ್ದು ಸಮ್ಮೇಳನದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಎತ್ತಿಹಿಡಿದವು.

ಮೆರವಣಿಗೆಯಲ್ಲಿ ಕರ್ನಾಟಕ ಮಾತ್ರವಲ್ಲದೇ ಕೇ‌ರಳ, ರಾಜಸ್ಥಾನ, ಭಾರತದ ವಿವಿಧ ಜನಪದೀಯ ಶೈಲಿಗಳ ತಂಡಗಳು ಇದ್ದವು. ಜೊತೆಗೆ ಭೂತಾನ್, ಶ್ರೀಲಂಕಾ ದೇಶಗಳ ಸಾಂಸ್ಕೃತಿಕ ತಂಡಗಳು ಕೂಡ ನುಡಿಸಿರಿಯ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

Comments are closed.