
ಮಂಗಳೂರು, ಡಿಸೆಂಬರ್.1: ಮೀಲಾದುನ್ನಬಿ ಪ್ರಯುಕ್ತ ಕರಾವಳಿಯಾದ್ಯಂತ ಬೆಳಗ್ಗೆಯಿಂದಲೇ ಮೀಲಾದುನ್ನಬಿ ಸಂಭ್ರಮಾಚರಣೆ ಆರಂಭಗೊಂಡಿದೆ. ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫ(ಸ.)ರವರ ಜನ್ಮದಿನದ ಪ್ರಯುಕ್ತ ಕರಾವಳಿಯಾದ್ಯಂತ ಇಂದು ಬೆಳಿಗ್ಗೆ ನಗರದಲ್ಲಿ ಮೀಲಾದ್ ರ್‍ಯಾಲಿ ನಡೆಯಿತು.

ನಗರದ ಬಂದರ್ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ವಿವಿಧ ಮದ್ರಸಗಳ ವಿದ್ಯಾರ್ಥಿಗಳು ಶುಕ್ರವಾರ ಬೆಳಿಗ್ಗೆ ಮೀಲಾದ್ ರ್‍ಯಾಲಿ ನಡೆಸಿದರು.. ಅಲ್ ಮದ್ರಸುತುಲ್ ಅಝ್ಹರಿಯಾ, ಮದೀನಾ ದರ್ವೇಶ್ ಮಸ್ಜಿದ್ ಮೊದಲಾದ ಮದ್ರಸ ವಿದ್ಯಾರ್ಥಿಗಳು ದಫ್ನೊಂದಿಗೆ ನಡೆದ ಆಕರ್ಷಕ ರ್‍ಯಾಲಿ ಗಮನ ಸೆಳೆಯಿತು.

ಸಂಜೆ ಮತ್ತೊಂದು ರ್‍ಯಾಲಿ :
ಮೀಲಾದುನ್ನೆಬಿ ಪ್ರಯುಕ್ತ ಇಂದು ಸಂಜೆ 4:15ಕ್ಕೆ ನಗರದ ಕೇಂದ್ರ ಜುಮಾ ಮಸೀದಿಯಿಂದ ಬಾವುಟಗುಡ್ಡೆಯ ಈದ್ಗಾ ಮಸೀದಿಯವರೆಗೆ ಮೀಲಾದ್ ರ್ಯಾಲಿ ನಡೆಯಲಿದೆ ಎಂದು ಮಂಗಳೂರು ಸೋಶಿಯಲ್ ಸರ್ವಿಸ್ ಸೆಂಟರ್ ಪ್ರಕಟನೆಯಲ್ಲಿ ತಿಳಿಸಿದೆ.
Comments are closed.