ಕರಾವಳಿ

ಬಾಣಂತಿಯರು ಅನುಸರಿಸಬೇಕಾದ ಆಹಾರ ಕ್ರಮದ ಮೂಲತತ್ವಗಳು

Pinterest LinkedIn Tumblr

ನಿಮ್ಮ ಎದೆಹಾಲಿನಲ್ಲಿ ಮಗುವಿನ ಬೆಳವಣಿಗೆಗೆ ಮತ್ತು ಉತ್ತಮ ಆರೋಗ್ಯ ಪಡೆಯಲು ಅವಶ್ಯವಿರುವ ಎಲ್ಲಾ ಪ್ರಮುಖ ಪೌಷ್ಟಿಕಾಂಶಗಳು ಇರುವುದರಿಂದ ನಿಮ್ಮ ಮಗುವಿಗೆ ಉತ್ತಮ ರೀತಿಯಲ್ಲಿ ಎದೆಹಾಲನ್ನು ನೀಡುವುದು ಪ್ರಮುಖವಾಗುತ್ತದೆ.

ಈ ಸಮಯದಲ್ಲಿ ನಿಮಗೆ ಆರೋಗ್ಯಕರ ಜೀವನ ಶೈಲಿ, ಸಮತೋಲನ ಆಹಾರ ಕ್ರಮ, ನಿಮಗೆ ತುಂಬಾ ಮುಖ್ಯವಾದದ್ದು. ನಿಮ್ಮ ಜೀವನದಲ್ಲಿ ಈಗ ಹೊಸ ಖುಷಿಯ ಬುಟ್ಟಿಯನ್ನು ಹೊತ್ತು ನಿಮ್ಮ ಮಗುವು ಬಂದಿದೆ, ಉತ್ತಮ ತಾಯಿಯಾಗಿ ಈಗ ನೀವು ನಿಮ್ಮ ಮಗುವಿನ ರಕ್ಷಣೆ ಮತ್ತು ಪೋಷಣೆಯನ್ನು ಮಾಡುವುದು ಮುಖ್ಯ.

ಎದೆಹಾಲುಣಿಸುವಾಗ ತಿಳಿದಿರಬೇಕಾದ ಆಹಾರ ಕ್ರಮದ ಮೂಲತತ್ವಗಳು

1..ಆರೋಗ್ಯಕರ ಆಹಾರ ಕ್ರಮದ ಪ್ರಮುಖ ತತ್ವ ಎಂದರೆ, ಸಮತೋಲನ ಕಾಪಾಡಿಕೊಳ್ಳುವುದು. ಎಲ್ಲಾ ಬಗೆಯ ಆಹಾರ ಪದಾರ್ಥಗಳನ್ನು ಒಳಗೊಂಡ ಆರೋಗ್ಯಕರ ಆಹಾರವನ್ನು ಸೇವನೆಯನ್ನು ನೀವು ಮಾಡಬೇಕು.
2.ಧಾನ್ಯಗಳು – ದ್ವಿದಳ ಧಾನ್ಯಗಳು ತಮ್ಮಲ್ಲಿ ಅತಿ ಹೆಚ್ಚು ಪೌಷ್ಟಿಕಾಂಶಗಳನ್ನು ಮತ್ತು ಫೈಬರ್ ಗಳನ್ನು ಒಳಗೊಂಡಿರುತ್ತವೆ.
3.ಹಣ್ಣು ಮತ್ತು ತರಕಾರಿಗಳು – ನೀವು ಇವುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಗಾಢ ಬಣ್ಣದ ಪದಾರ್ಥಗಳನ್ನು ಆಯ್ದುಕೊಳ್ಳುವುದರಿಂದ ಹೆಚ್ಚಿನ ವಿಟಮಿನ್ಸ್ ಮತ್ತು ಆಂಟಿಆಕ್ಸಿಡೆಂಟ್ಸ್ ಗಳನ್ನು ನಿಮ್ಮ ದೇಹಕ್ಕೆ 4.ಸುಲಭವಾಗಿ ಒದಗಿಸಬಹುದು. ಆದಷ್ಟು ಹಸಿ ತರಕಾರಿ ಮತ್ತು ಹಣ್ಣುಗಳನ್ನು ತೊಳೆದು ತಿನ್ನಿರಿ. ಅದರಲ್ಲಿ ನಿಮಗೆ ಹೆಚ್ಚು ಪೌಷ್ಟಿಕಾಂಶಗಳು ಸಿಗುತ್ತವೆ.
5.ಪ್ರೊಟೀನ್ – ಮಾಂಸ, ಮೀನು, ಮೊಟ್ಟೆ, ಬೀನ್ಸ್ ಇವುಗಳನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಅವಶ್ಯವಿರುವ ಪ್ರೊಟೀನ್ ಗಳನ್ನು ಒದಗಿಸುತ್ತದೆ. ಒಮೇಗಾ ೩ ಇರುವ ಮೀನುಗಳನ್ನು ಆಯ್ದುಕೊಳ್ಳುವುದು ಇನ್ನು ಒಳ್ಳೆಯದು.
6.ವಿಟಮಿನ್ ಮತ್ತು ಖನಿಜಾಂಶಗಳು – ಕಡಿಮೆ ಕೊಬ್ಬಿನ ಹಾಲು, ಮೊಸರು ತಮ್ಮಲ್ಲಿ ಅಧಿಕ ವಿಟಮಿನ್ ಮತ್ತು ಖನಿಜಾಂಶಗಳನ್ನು ಇರಿಸಿಕೊಂಡಿದೆ.

ಎದೆಹಾಲುಣಿಸುವಾಗ ಏನನ್ನು ಸೇವಿಸಬೇಕು?
ಬಾಣಂತಿಯರು ಮಸಾಲೆಯುಕ್ತ ಮತ್ತು ಜಂಕ್ ಫುಡ್ ಗಳನ್ನು ಸೇವಿಸದಿರುವಂತೆ ಎಚ್ಚರಿಕೆಯನ್ನು ನೀಡಲಾಗುತ್ತದೆ, ಏಕೆಂದರೆ ಇದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಬಾಣಂತಿಯು ತನ್ನ ನೋವಿನಿಂದ ಬೇಗ ಗುಣವಾಗಲು ಮತ್ತು ಎದೆಹಾಲನ್ನು ಹೆಚ್ಚಿಸಿಕೊಳ್ಳಲು ಹಾಗು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲವು ಆರೋಗ್ಯಕರ ಪದಾರ್ಥಗಳನ್ನು ನಿಸರ್ಗವು ನಮಗೆ ಒದಗಿಸಿದೆ. ಅದರಲ್ಲಿ ನೀವು ಸೇವಿಸಲೇಬೇಕಾದ ಕೆಲವು ಆಹಾರ ಪದಾರ್ಥಗಳನ್ನು ಇಲ್ಲಿ ನೀಡಲಾಗಿದೆ.

೧.ಹಸಿರು ಸೊಪ್ಪು ಮತ್ತು ತರಕಾರಿಗಳು
ಪಾಲಕ್, ಬ್ರಕೋಲಿ ಇತ್ಯಾದಿ ಸೊಪ್ಪುಗಳು ವಿಟಮಿನ್ A, C ಮತ್ತು ಕಬ್ಬಿಣಾಂಶದ ಮನೆಯಾಗಿದೆ. ಎದೆಹಾಲುಣಿಸುವ ತಾಯಿಯಂದಿರಿಗೆ ಇವುಗಳು ಅತ್ಯುತ್ತಮ ಆಹಾರ ಪದಾರ್ಥಗಳಾಗಿವೆ. ಮತ್ತು ಮಗುವಿನ ಬೆಳವಣಿಗೆಗೆ ಕೂಡ ಉತ್ತಮವಾಗಿ ಸಹಾಯ ಮಾಡುತ್ತವೆ.

೨.ಋತುವಿನ ಹಣ್ಣುಗಳು
ಹಣ್ಣುಗಳು ವಿಟಮಿನ್, ಖನಿಜಾಂಶಗಳು ಮತ್ತು ಆಂಟಿಆಕ್ಸಿಡೆಂಟ್ಸ್ ಗಳ ಮೂಲಗಳಾಗಿವೆ. C-ಸೆಕ್ಷನ್ ಗೆ ಒಳಗಾಗಿರುವವರು ಇವುಗಳನ್ನು ಸೇವಿಸಲೇ ಬೇಕು. ಬಾಳೆಹಣ್ಣು ಮತ್ತು ಸೇಬಿನಂತಹ ಹಣ್ಣುಗಳು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡಿದರೆ, ಕಿತ್ತಳೆ ಮತ್ತು ಟಮೋಟ ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ನೆರವಾಗುತ್ತದೆ.

೩.ಮೊಟ್ಟೆ ಮತ್ತು ದ್ರವಗಳು
ನಿಮ್ಮ ದೇಹಕ್ಕೆ ಅಗತ್ಯವಿರುವ ಪ್ರೊಟೀನ್ ಗಳನ್ನು ಸಂಪೂರ್ಣವಾಗಿ ಮೊಟ್ಟೆ ಒದಗಿಸುತ್ತದೆ. ಮತ್ತು ವಿಟಮಿನ್ D ಯ ಕೊರತೆಯನ್ನು ಇದು ನೀಗಿಸುತ್ತದೆ. ನಿಮ್ಮ ಮಗುವಿನ ಮೂಳೆಗಳ ಬೆಳವಣಿಗೆ ಮತ್ತು ಗಟ್ಟಿ ಮಾಡಲು ಇವುಗಳು ಸಹಾಯ ಮಾಡುತ್ತವೆ.

ನಿಮ್ಮ ಮಗುವಿಗೆ ಅಗತ್ಯವಿರುವ ಹಾಲನ್ನು ನಿಮ್ಮ ದೇಹ ಉತ್ಪತ್ತಿ ಮಾಡಲು, ನಿಮ್ಮ ದೇಹವು ನೀರಿನಂಶದಿಂದ ಕೂಡಿರಬೇಕು. ನಿಮ್ಮ ದೇಹದಲ್ಲಿ ನೀರಿನಾಂಶ ಕಡಿಮೆ ಆದರೆ, ಅದು ನಿಮ್ಮ ಸ್ತನದಲ್ಲಿ ಹಾಲನ್ನು ಕೂಡ ಕಡಿಮೆ ಮಾಡುತ್ತದೆ. ಇದರಿಂದ ಆಯಾಸ ಮತ್ತು ದಣಿವಾಗುತ್ತದೆ.

ಇದರ ಜೊತೆಗೆ ನೀವು ಕ್ಯಾರಟ್, ಮಾಂಸ, ಮೀನು, ಧಾನ್ಯಗಳು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುವುದು ನಿಮಗೆ ಮತ್ತು ನಿಮ್ಮ ಮಗುವಿಗೆ ಒಳ್ಳೆಯದು.

ನಿಮ್ಮ ಪ್ರಸವ ಪೂರ್ವ ತೂಕವನ್ನು ಮರಳಿ ಪಡೆಯುವುದು ಹೇಗೆ?
ಎದೆಹಾಲುಣಿಸುವುದರಿಂದ ನಿಮ್ಮ ದೇಹದಲ್ಲಿ ಹೆಚ್ಚಿನ ಶಕ್ತಿಯು ಕರಗುತ್ತದೆ, ಆದರೂ ನಿಮ್ಮ ಮೊದಲಿನ ತೂಕವನ್ನು ಹೊಂದಲು ನಿಮಗೆ ಹೆಚ್ಚಿನ ಸಮಯದ ಅವಶ್ಯಕತೆ ಬೇಕು. ಆದರೆ ಇಲ್ಲಿ ಕೆಳಗೆ ನೀಡಿರುವ ಕೆಲವು ಸಲಹೆಗಳಿಂದ ನೀವು ಸ್ವಲ್ಪ ಬೇಗನೆ ತೂಕವನ್ನು ಮರು ಪಡೆಯಬಹುದು.

೧.ಹಬೆಯಲ್ಲಿ ಬೇಯಿಸಿದ, ಬೆಂಕಿಯಲ್ಲಿ ಸುಟ್ಟ ಮಾಂಸ ಮತ್ತು ಮೀನು
೨.ಹಸಿರು ತರಕಾರಿಗಳು ದಿನಕ್ಕೆ ೫ ಬಾರಿ
೩.ಹಣ್ಣುಗಳು ದಿನಕ್ಕೆ ೨ ಬಾರಿ
೪.ಕಡಿಮೆ ಕೊಬ್ಬಿನಾಂಶ ಇರುವ ಹಾಲಿನ ಉತ್ಪನ್ನಗಳು
೫.ಧ್ಯಾನ ಮತ್ತು ಸ್ವಲ್ಪ ದೂರ ನಡಿಗೆ.

ಏನನ್ನು ಸೇವಿಸಬಾರದು?
ಇಲ್ಲಿ ನೀಡಿರುವ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಿಮ್ಮ ಮಗುವಿನ ಮೇಲೆ ಋಣಾತ್ಮಕ ಪರಿಣಾಮವನ್ನು ಕಾಣಬೇಕಾಗುತ್ತದೆ.

೧.ಹೆಚ್ಚು ಕೊಬ್ಬು ಇರುವ ಮತ್ತು ಮಸಾಲೆಯುಕ್ತ ಹಾಗು ಜಿಡ್ಡಿನ ಆಹಾರ ಪದಾರ್ಥಗಳು ಉದಾಹರಣೆಗೆ ಚಿಪ್ಸ್, ಗೋಬಿ, ಇತ್ಯಾದಿಗಳು.
೨.ಸಕ್ಕರೆ ಅಂಶವುಳ್ಳ ಪದಾರ್ಥಗಳು ಉದಾಹರಣೆಗೆ, ಹಣ್ಣಿನ ಜ್ಯೂಸು, ಕೂಲ್ ಡ್ರಿಂಕ್ಸ್, ಕೇಕ್ಸ್, ಮತ್ತು ಸಿಹಿ ಬಿಸ್ಕತ್ ಗಳು.
೩.ಮಸಾಲೆ ಅದರಲ್ಲೂ ಹೆಚ್ಚಿನ ಮೆಣಸಿನಕಾಯಿ ಇರುವಂತಹ ಆಹಾರ ಪದಾರ್ಥಗಳನ್ನು.
೪.ತರಕಾರಿಗಳಾದ ಕೋಸು, ಹೂಕೋಸು, ಮತ್ತು ಬ್ರಕೋಲಿ.
೫.ಕಾಫಿ ಮಗುವಿನ ನಿದಿರೆಯನ್ನು ಹಾಳುಮಾಡಬಹುದು.

ನಿಮ್ಮ ಮಗುವು ಎದೆಹಾಲುಣಿಸಿದ ನಂತರ ದದ್ದುಗಳನ್ನು ಬೆಳೆಸಿಕೊಂಡರೆ ನೀವು ಕೂಡಲೇ ವೈದ್ಯರ ಬಳಿ ಕರೆದುಕೊಂಡು ಹೋಗುವುದು ಸೂಕ್ತ.

Comments are closed.