ಕರಾವಳಿ

ಕರಾವಳಿಯಾದ್ಯಂತ ಭರ್ಜರಿಯಾಗಿ ತೆರೆಕಂಡ ಶ್ರೀಮಂತಿಕೆಯ ತುಳುಚಿತ್ರ `ಅಂಬರ್ ಕ್ಯಾಟರರ್ಸ್’ – ಮಂಗಳೂರು-ಉಡುಪಿಗಳಲ್ಲಿ ಹೌಸ್‌ಫುಲ್ ಪ್ರದರ್ಶನ

Pinterest LinkedIn Tumblr

ಮಂಗಳೂರು, ನವೆಂಬರ್.24: ಕರಾವಳಿ ಜನತೆಯ ನಿರೀಕ್ಷಿತ ಕಡಂದಲೆ ಸುರೇಶ್ ಎಸ್.ಭಂಡಾರಿ ನಿರ್ಮಾಪಕತ್ವದ ನಾಗೇಶ್ವರ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಿದ್ಧಗೊಂಡ ಹಾಸ್ಯ ರಸಪ್ರಧಾನ `ಅಂಬರ್ ಕ್ಯಾಟರರ್ಸ್’ ತುಳು ಸಿನೆಮಾ ಇಂದು ಪೂರ್ವಾಹ್ನ ಮಂಗಳೂರುನ ಜ್ಯೋತಿ ಟಾಕೀಸ್ ಮತ್ತು ಉಡುಪಿಯ ಕಲ್ಪನಾ ಥಿಯೇಟರ್ ಸೇರಿದಂತೆ ಕರಾವಳಿಯಾದ್ಯಂತ ಭರ್ಜರಿಯಾಗಿ ತೆರೆಕಂಡಿತು.

ಸ್ಥಾನೀಯ ರಿಕ್ಷಾ ಚಾಲಕರು ದೀಪ ಪ್ರಜ್ವಲಿಸಿ `ಅಂಬರ್ ಕ್ಯಾಟರರ್ಸ್’ ತುಳು ಸಿನೆಮಾಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಅತಿಥಿಗಳಾಗಿ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ, ಕರಾಟೆಪಟು ವಸಂತ್ ಶೆಟ್ಟಿ, ಜ್ಯೋತಿ ಟಾಕೀಸ್‌ನ ಕೆ.ಪ್ರಶಾಂತ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಕೂಳೂರು ಮಾಧವ ಭಂಡಾರಿ, ಮೇಘಾ ಸೌರಭ್ ಭಂಡಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಚಿತ್ರವನ್ನು ವೀಕ್ಷಿಸಿ ಬಾರೀ ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರತಂಡವನ್ನು ಅಭಿನಂದಿಸಿ ಚಿತ್ರದ ಯಶಸ್ಸಿಗೆ ಶುಭಾರೈಸಿದರು.

ಈ ಸಂದರ್ಭದಲ್ಲಿ ಚಿತ್ರ ನಿರ್ದೇಶಕ ಜೈಪ್ರಸಾದ್ ಬಜಾಲ್, ಕಾರ್ಕಳ ಶೇಖರ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

ನಟರಾಜ್ ಸುರತ್ಕಲ್, ಇನ್‌ಒಕ್ಸ್ ಮಣಿಪಾಲ್, ಅಮರಶ್ರೀ ಮೂಡಬಿದ್ರೆ, ರಾಧಿಕಾ ಮತ್ತು ಪ್ಲಾನೆಟ್ ಕಾರ್ಕಳ, ಅರುಣಾ ಪುತ್ತೂರು, ಭಾರತ್ ಬೆಳ್ತಂಗಡಿ, ಸಂತೋಷ್ ಸುಳ್ಯ, ಹಾಗೂ ಮಂಗಳೂರುನ ಪಿವಿ‌ಆರ್, ಬಿಗ್ ಸಿನೆಮಾಸ್, ಸಿನಿಪೊಲಿಸ್ ಇತ್ಯಾದಿ ಚಿತ್ರಮಂದಿರಗಳಲ್ಲೂ ಭರ್ಜರಿಯಾಗಿ ಪ್ರದರ್ಶಿಸಲ್ಪಟ್ಟು ಸಿನೆಮಾಪ್ರಿಯರ ಮನಾಕರ್ಷಿಸಿತು.

ಚಿತ್ರದ ನಾಯಕನಟ ಸೌರಭ್ ಸುರೇಶ್ ಭಂಡಾರಿ ಸ್ವಾಗತಿಸಿದರು. ಕರ್ನೂರು ಮೋಹನ್ ರೈ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಬೃಹತ್ ಕಟೌಟ್: ಮಂಗಳೂರುನ ಜ್ಯೋತಿ ಟಾಕೀಸ್‌ನ ಮುಂಭಾಗದಲ್ಲಿ ಗಣೆಶ್ ಆರ್ಟಿಸ್ಟ್ ರಚಿತ ಕೇಶವ ಸುವರ್ಣ ನಿರ್ಮಿಸಿದ ನಾಯಕನಟ ಸೌರಭ್ ಸುರೇಶ್ ಭಂಡಾರಿ ಅವರ ಭಾರೀ ಗಾತ್ರದ ಬೃಹತ್ ಕಟೌಟ್ ಅತ್ಯಾಕರ್ಷಕವಾಗಿ ಕಂಗೋಳಿಸುತ್ತಿದ್ದು, ಕರಾವಳಿಯಲ್ಲೇ ಇಷ್ಟೊಂದು ದೊಡ್ಡದಾದ ಕಟೌಟ್ ಇದೇ ಮೊದಲ ಬಾರಿ ಪ್ರದರ್ಶಿಸಲ್ಪಟ್ಟಿದೆ ಎಂದು ಚಿತ್ರಪ್ರಿಯರ ಅನಿಸಿಕೆಯಾಗಿತ್ತು.

ಗುರುವಾರ ಅತಿಥಿಗಳಿಗಾಗಿ ಪ್ರೀಮಿಯರ್ ಶೋ…. : ಮಾಧ್ಯಮ ಹಾಗೂ ಅತಿಥಿಗಳಿಂದ ಮೆಚ್ಚುಗೆ ಪಡೆದ ಚಿತ್ರ

ಮಾಧ್ಯಮ ಮಿತ್ರರು ಹಾಗೂ ಅತಿಥಿಗಳಿಗಾಗಿ ಗುರುವಾರ ಸಂಜೆ ನಗರದ ಸಿಟಿ ಸೆಂಟರ್ ನ ಸಿನಿ ಪೊಲೀಶ್ ಚಿತ್ರಮಂದಿರದಲ್ಲಿ `ಅಂಬರ್ ಕ್ಯಾಟರರ್ಸ್’ ತುಳು ಸಿನೆಮಾದ ಪ್ರೀಮಿಯರ್ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಪ್ರೀಮಿಯರ್ ಪ್ರದರ್ಶನವನ್ನು ಆರ್ ಎಸ್ ಎಸ್ ಪ್ರಾಂತೀಯ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಉದ್ಘಾಟಿಸಿದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ ಭಂಡಾರಿ, ಮಾಜಿ ಅಧ್ಯಕ್ಷ ಉಮಾನಾಥ್ ಕೋಟ್ಯಾನ್, ಮುಂಬಾಯಿಯ ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ರಾಮಕೃಷ್ಣ ಪೆಲತ್ತಾಡಿ, ಉದ್ಯಮಿ ಶ್ರೀಕರ್ ಪ್ರಭು, ಚಿತ್ರದ ನಿರ್ದೇಶಕ ಜೈಪ್ರಸಾದ್ ಬಜಾಲ್, ಚಿತ್ರದ ನಾಯಕ ನಟ ಸೌರಭ್ ಭಂಡಾರಿ, ನಾಯಕಿ ನಟಿ ಸಿಂಧು ಲೋಕನಾಥ್, ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ ಜಿಲ್ಲೆಯ ಖ್ಯಾತ ಕಲಾವಿದರಾದ ಅರ್ಜುನ್ ಕಾಪಿಕಾಡ್, ರೂಪೇಶ್ ಶೆಟ್ಟಿ, ನವೀನ್ ಪಡೀಲ್, ಭೋಜರಾಜ್ ವಾಮಂಜೂರು, ಸಾಯಿಕೃಷ್ಣ ಕುಡ್ಲ, ಚಿಕಾರ್ಕಳ ಶೇಖರ ಭಂಡಾರಿ ಸೇರಿದಂತೆ ಮುಂಬಾಯಿ ಮತ್ತು ಜಿಲ್ಲೆಯ ಉದ್ಯಮಿಗಳು ಈ ವೇಳೆ ಉಪಸ್ಥಿತರಿದ್ದರು.

Comments are closed.