ಕರಾವಳಿ

ನಮ್ಮಿಂದ ನಾವೇ ಕೇಳುವ ವಿಚಿತ್ರ ಪ್ರಶ್ನೆಗೆ ಅಚ್ಚರಿಯ ಉತ್ತರಗಳು

Pinterest LinkedIn Tumblr

ನಾವು ತಜ್ಞರಿಗೆ ಸತ್ಯಕಥೆಗಳನ್ನ ಮತ್ತು ದೇಹದ ಬಗೆಗಿನ ವಿಚಿತ್ರ ಸಂಗತಿಗಳ ಬಗ್ಗೆ ಕೇಳಿದೆವು. ಅವರು ಹೇಳಿದ ಕೆಲವೊಂದು ವಿಷಯಗಳು ನಿಮಗೆ ಅಚ್ಚರಿ ಮೂಡಿಸುತ್ತವೆ.

ವಯಸ್ಸಾದಂತೆ ಪದಗಳು ದೊಡ್ಡದಾಗುತ್ತವೆ?
ಇದು ವಾಸ್ತವದಲ್ಲಿ ನಿಜ. ಅಷ್ಟು ವರ್ಷಗಳ ಬಳಕೆಯ ನಂತರ ವಯಸ್ಸಾದಂತೆ ನಮ್ಮ ಟೆಂಡಾನ್ಸ್ ಮತ್ತು ಅಸ್ತಿಬಂಧಕಗಳು (ಲಿಗಾಮೆಂಟ್ಸ್) ದುರ್ಬಲಗೊಳ್ಳುತ್ತವೆ. ಇದು ನಮ್ಮ ಕಾಲಿನ ಮುಂಭಾಗದಲ್ಲಿ ಇರುವ ಉಬ್ಬಿದ ಪ್ರದೇಶವು ಸಪಾಟವಾಗುತ್ತಾ ಹೋಗುತ್ತದೆ. ಆಗ ಪಾದಗಳು ಮತ್ತಷ್ಟು ಅಗಲವಾಗುತ್ತಾ ಮತ್ತು ಉದ್ದವಾಗುತ್ತ ಹೋಗುತ್ತವೆ. ಆದರೆ ಇದು ಎಲ್ಲರಲ್ಲೂ ಆಗುವುದಿಲ್ಲ. ಸ್ಥೂಲಕಾಯತೆ ಇದ್ದವರಲ್ಲಿ ಅಥವಾ ಮಧುಮೇಹ ಇದ್ದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ.

ರೋಲರ್ ಕೋಸ್ಟರ್ ಅಲ್ಲಿ ಕೂತಾಗ ಹೊಟ್ಟೆ ಬಾಯಿಗೆ ಬರುವಂತೆ ಆಗುವುದು ಏಕೆ?
ನಿಮ್ಮ ಆಂತರಿಕ ಭಾಗಗಳು ಸ್ಥಳಾಂತರ ಆಗುತ್ತಿವೆ! ರೋಲರ್ ಕೋಸ್ಟರ್ ಮೇಲಿನ ತುತ್ತತುದಿಯಲ್ಲಿ ಒಂದು ಕ್ಷಣ ನಿಂತು ಥಟ್ಟನೆ ಕೆಳಗೆ ಇಳಿಯಲು ಶುರು ಮಾಡಿದಾಗ, ನಿಮ್ಮ ಹಿಂಭಾಗವನ್ನು ನಿಮ್ಮ ಸೀಟ್ ಬೆಲ್ಟ್ ಹಿಡಿದಿಟ್ಟಿರುತ್ತದೆ, ಆದರೆ ಒಳಗೆ ಸಡಿಲವಾಗಿ ಜೋಡಣೆಗೊಂಡಿರುವ ಅಂಗಗಳಾದ ಹೊಟ್ಟೆ, ಕರುಳು – ಇವೆಲ್ಲವೂ ಗಾಳಿಯಲ್ಲೇ ತೇಲುತ್ತಿರುತ್ತವೆ. ಆದರೆ ಗಾಬರಿ ಆಗಬೇಡಿ, ಇದರಿಂದ ದೇಹಕ್ಕೆ ಯಾವುದೇ ತೊಂದರೆಯಿಲ್ಲ.

ಗಂಡಸರಿಗಿಂತ ಹೆಚ್ಚು ಹೆಂಗಸರು ಏಕೆ ಯಾವಾಗಲೂ ಜಾಸ್ತಿ ಚಳಿ ಎನ್ನುತ್ತಾರೆ?
ಗಂಡಸರ ದೇಹದಲ್ಲಿ ಹೆಂಗಸರ ದೇಹಕ್ಕಿಂತ ಹೆಚ್ಚು ಕೊಬ್ಬಿನಂಶ ಇದ್ದು, ಇದು ಶಾಖವನ್ನು ಶೇಖರಿಸಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ನಮ್ಮ ಕೈಗಳು ಮತ್ತು ಕಾಲುಗಳಿಗೆ ಚಳಿ ಆದಾಗ, ನಮ್ಮ ಇಡೀ ದೇಹವು ಚಳಿಯನ್ನು ಅನುಭವಿಸುತ್ತದೆ. ಇದಲ್ಲದೆ ಹೆಂಗಸರ ಸಹಿಷ್ಣುತೆ ಗಂಡಸರಿಗಿಂತ ಕಡಿಮೆ. ಹೆಂಗಸರ ಕೈಗಳಲ್ಲಿನ ರಕ್ತನಾಳಗಳು ಬೇಗ ಹೆಪ್ಪುಗಟ್ಟುತ್ತವೆ. ಇದೆ ಕಾರಣಕ್ಕೆ ಅವರು ಚಳಿಯಲ್ಲಿ ಬೇಗ ಬಿಳಿಚಿಕೊಳ್ಳುವುದು.

ರಾತ್ರಿ ಕೇವಲ ಮೂತ್ರವಿಸರ್ಜನೆಗೆ ಮಾತ್ರ ಎಚ್ಚರವಾಗುತ್ತದೆ ಹೊರತು ಬೇರೆ ಯಾವುದಕ್ಕೂ ಎಚ್ಚರಗೊಳ್ಳಲ್ಲ ಏಕೆ?
ಇದಕ್ಕೆ ಉತ್ತರ ಜೀವಶಾಸ್ತ್ರದಲ್ಲಿ ಇದೆ. ಬುದ್ದಿವಂತ ನರಕೋಶಗಳು ನಮ್ಮ ಕರುಳಿನ ಚಲನೆಯನ್ನು ನಿಯಂತ್ರಿಸುತ್ತವೆ. ಈ ನರಕೋಶಗಳನ್ನು ನಿಯಂತ್ರಿಸುವುದು ನಮ್ಮ ದೇಹದ ಗಡಿಯಾರವಾದ ಸಿಕಾರ್ಡಿಯನ್ ರಿಧಂ. ಈ ಗಡಿಯಾರವೇ ನೀವು ರಾತ್ರಿ ಕಟ್ಟಲು ಆದೊಡನೆ ನಿದ್ದೆ ತರಿಸುವುದು ಮತ್ತು ಬೆಳಗ್ಗೆ ಬೆಳಕು ಬಂದೊಡನೆ ಎಚ್ಚರಗೊಳಿಸುವುದು. ಹೀಗಾಗಿ ರಾತ್ರಿ ಮಲಗಿದ ಹೊತ್ತಿನಲ್ಲಿ ನಿಮಗೆ ಎದ್ದು ಮಲವಿಸರ್ಜನೆ ಮಾಡುವಂತೆ ಅನಿಸುವುದಿಲ್ಲ. ಆದರೆ ಮೂತ್ರನಾಳವು ಆ ರೀತಿ ನಿಯಂತ್ರಣದಲ್ಲಿ ಇಲ್ಲ. ಹೀಗಾಗಿ ಅದು ತುಂಬಿಕೊಂಡೊಡನೆ ನೀವು ಮೂತ್ರವನ್ನು ವಿಸರ್ಜಿಸಲೇ ಬೇಕು.

ನಮಗೆ ಬೆರಳಚ್ಚು ಏಕಿರುತ್ತದೆ?
ಬಹಳಷ್ಟು ತಜ್ಞರು ನಮಗೆ ಬೆರಳಚ್ಚು ಅಥವಾ ಬೆರಳಿನ ಗುರುತು ಇರುವುದು ಯಾವುದೇ ವಸ್ತುವನ್ನು ಜಾರದಂತೆ ಹಿಡಿಯಲು ಸುಲಭವಾಗಲಿ ಎಂದು ಅಂದುಕೊಂಡಿರುವವರು. ಆದರೆ ಸಂಶೋಧನಾಕಾರರು ಈ ಗುರುತಗಳು ಸಪಾಟವಾದ, ಮೃದುವಾದ ವಸ್ತುಗಳನ್ನು ಹಿಡಿಯಲು ಇನ್ನಷ್ಟು ಕಷ್ಟ ಮಾಡುತ್ತವೆ ಎಂಬುದನ್ನು ಕಂಡು ಹಿಡಿದಿದ್ದಾರೆ. ಅವರು ಈ ಗುರುತುಗಳು ಇರುವುದು ನಮ್ಮ ಕೈ ಮೇಲಿನ ನೀರನ್ನು ಸರಿಯಾಗಿ ಒರೆಸಿಕೊಳ್ಳಲು ಅಥವಾ ನಮ್ಮ ಚರ್ಮ ಸುಲಭವಾಗಿ ಹಿಗ್ಗಲು ಇವುಗಳು ಇದ್ದು, ಇವುಗಳು ನಿಮ್ಮ ಕೈಗೆ ಹಾನಿಯುಂಟಾಗುವುದನ್ನು ಮತ್ತು ಕೈ ಮೇಲೆ ಗುಳ್ಳೆಗಳು ಉಂಟಾಗುವುದನ್ನು ತಡೆಯುತ್ತವೆ ಎನ್ನುತ್ತಾರೆ. ಇನ್ನೂ ಕೆಲವು ವಿಜ್ಞಾನಿಗಳು ಇವು ನಮ್ಮ ಸ್ಪರ್ಶದ ಕ್ಷಮತೆ ಹೆಚ್ಚಿಸಲು ಇರುವುದು ಎನ್ನುತ್ತಾರೆ.

ಉಸಿರು ಹಿಡಿದಿಟ್ಟುಕೊಳ್ಳುವುದು ಬಿಕ್ಕಳಿಕೆ ನಿಲ್ಲಿಸುತ್ತದೆಯೇ?
ಬಿಕ್ಕಳಿಕೆಗೆ ಇರುವ ಶೀಘ್ರ ಪರಿಹಾರಗಳಲ್ಲಿ ಹೆಚ್ಚಾಗಿ ನಾವು ಕೇಳಿಸಿಕೊಳ್ಳುವುದು ಇದು. ಬಿಕ್ಕಳಿಕೆ ಉಂಟಾಗುವುದು ನಮ್ಮ ಡಯಾಫ್ರಮ್ ಅಲ್ಲಿ ಸೆಡೆತ ಕಾಣಿಸಿಕೊಂಡಾಗ. ನಾವು ಉಸಿರು ಹಿಡಿದಿಟ್ಟುಕೊಂಡು ಇಂಗಾಲ ಡೈಆಕ್ಸೈಡ್ ಅನ್ನು ಒಳಗೆ ಇಟ್ಟುಕೊಂಡರೆ ಈ ಸೆಡೆತ ಉಂಟಾಗುವುದಿಲ್ಲ ಎಂದು ನಾವು ತಿಳಿದಿರುವುದು.

ನಮ್ಮ ಹೊಟ್ಟೆ ಶಬ್ದ ಮಾಡುವುದು ಏಕೆ?
ಇದು ನಮ್ಮ ಜೀರ್ಣಪ್ರಕ್ರಿಯೆಗೆ ಬೇಕಿರುವ ರಾಸಾಯನಿಕಗಳು ಉತ್ಪತ್ತಿಯಾಗುವುದು ಇರಬಹದು ಮತ್ತು ನಮ್ಮ ಹೊಟ್ಟೆಯ ಸ್ನಾಯುಗಳು ಆಹಾರವನ್ನು ನುಂಗಲು ತಯಾರಾಗಲು ಸಂಕೋಚನಗಳನ್ನು ಅನುಭವಿಸುತ್ತಿರಬಹುದು. ಕೆಲವೊಮ್ಮೆ ಇದು ಯಾವುದೊ ಗಂಭೀರ ಸಮಸ್ಯೆಯ ಲಕ್ಷಣವೂ ಆಗಿರಬಹುದು. ಇದನ್ನು ತಪ್ಪಿಸಲಿಕ್ಕೆ ನೀವು ಸ್ವಲ್ಪ ಸ್ವಲ್ಪ ಆಹಾರವನ್ನೇ ಹೆಚ್ಚು ಬಾರಿ ಸೇವಿಸಿ.

ಬೇರೆ ಭಾಗದ ಬೆವರಿಗಿಂತ ಕಂಕುಳದ ಬೆವರ ಹೆಚ್ಚು ವಾಸನೆ ಬರಲು ಕಾರಣವೇನು?
ನಮ್ಮ ದೇಹದಲ್ಲಿ ಎರಡು ರೀತಿಯ ಬೆವರಿನ ಗ್ರಂಥಿಗಳು ಇರುತ್ತವೆ. ನಮ್ಮ ಕಾಲು ಮತ್ತು ಕೈಗಳ ಮೇಲಿರುವ ಬಹುತೇಕ ಗ್ರಂಥಿಗಳು ನೀರು ಮತ್ತು ಉಪ್ಪಿನ ಮಿಶ್ರಣವನ್ನು ಹೊರಹಾಕುತ್ತವೆ. ಆದರೆ ನಿಮ್ಮ ಕಂಕುಳದಲ್ಲಿ ಇರುವ ಗ್ರಂಥಿಗಳು ಎಣ್ಣೆ ಪದಾರ್ಥಗಳನ್ನು ಹೊರಹಾಕುತ್ತವೆ. ಇದನ್ನು ಬ್ಯಾಕ್ಟೀರಿಯಾಗಳು ಇಷ್ಟಪಡುತ್ತವೆ. ವಾಸ್ತವದಲ್ಲಿ ಈ ಬ್ಯಾಕ್ಟೀರಿಯಾಗಳು ಎಣ್ಣೆ ಪದಾರ್ಥಗಳನ್ನ ತಿನ್ನುವುದೇ ಈ ದುರ್ವಾಸನೆಯನ್ನು ಹುಟ್ಟುಹಾಕುವುದು.

Comments are closed.