ಕರಾವಳಿ

ನಾಲಿಗೆಯಿಂದ ದೇಹದಲ್ಲಿನ ಗಂಭೀರ ಅಸ್ವಸ್ಥತೆಯ ಕಂಡುಹಿಡಿಯಲು ಸಾಧ್ಯ.. ಹೇಗೆ ಗೋತ್ತೆ..?

Pinterest LinkedIn Tumblr

ನಾಲಿಗೆಯು ದೇಹದ ಒಂದು ತುಂಬಾ ಮುಖ್ಯವಾದ ಭಾಗವಾಗಿದ್ದು, ಅದನ್ನು ನಾವು ಶುಚಿಯಾಗಿ ಇಡುವುದು ತುಂಬಾನೇ ಮುಖ್ಯ. ಆರೋಗ್ಯಕರ ನಾಲಿಗೆಯ ಬಣ್ಣವು ಪಿಂಕ್ ಇರುತ್ತದೆ, ಆದರೆ ಅದು ಬಿಳಿಯ ಬಣ್ಣಕ್ಕೆ ತಿರುಗಿದಾಗ ಅದು ಬ್ಯಾಕ್ಟೀರಿಯಾ, ಸತ್ತ ಕೋಶಗಳು ಅಥವಾ ತಿಂದುಳಿದ ಪದಾರ್ಥಗಳನ್ನು ಕೂಡಿದೆ ಎಂದರ್ಥ. ಇದು ಮೇಲ್ನೋಟಕ್ಕೆ ಅಂತಹ ಗಂಭೀರ ಸಮಸ್ಯೆ ಎಂದು ಅನಿಸದಿದ್ದರು, ಇದು ದೇಹದಲ್ಲಿನ ಯಾವುದಾದರು ಗಂಭೀರ ಅಸ್ವಸ್ಥತೆಯ ಲಕ್ಷಣ ಆಗಿರಬಹುದು. ಹೀಗಾಗಿ ನಾವು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಇವುಗಳನ್ನು ಹೋಗಲಾಡಿಸಬೇಕು.

ಬಿಳಿ ನಾಲಿಗೆ ಉಂಟಾಗಲು ಕಾರಣಗಳೇನು
ನಾಲಿಗೆಯು ಬಿಳಿಯ ಬಣ್ಣ ಹೊಂದಲು ಕೆಲವೊಂದು ಕಾರಣಗಳಿವೆ. ನೀವು ಇವುಗಳನ್ನು ಅರಿತು ಇವುಗಳನ್ನು ದೂರವಿರಿಸಬೇಕು. ಅವುಗಳು ಯಾವುದೆಂದರೆ :

ಸೋಂಕು ಅಥವಾ ಅನಾರೋಗ್ಯ
ಇರಿಸು ಮುರಿಸು ಉಂಟು ಮಾಡುವ ಪ್ರಾಕೃತಿಕ ಅಂಶಗಳು
ಕೆಲವು ಔಷಧಿಗಳಿಗೆ ದೇಹದ ಪ್ರತಿಕ್ರಿಯೆ
ನಿರ್ಜಲೀಕರಣ
ಕಳಪೆ ಮೌಖಿಕ ನೈರ್ಮಲ್ಯ
ಮದ್ಯಪಾನ
ತಂಬಾಕು ಸೇವನೆ
ನಾಲಿಗೆ ಉರಿಯೂತ
ಯೀಸ್ಟ್ ಸೋಂಕು
ಕೆಲವು ಖಾರವಾದ ಆಹಾರ

ಇದಕ್ಕೆ ಸಂಬಂಧಿಸಿದ ಅಸ್ವಸ್ಥತೆಗಳು
ಲುಕೊಪ್ಲಾಕಿಯಾ : ನೀವು ಅತಿಯಾಗಿ ತಂಬಾಕು ಸೇದಿದರೆ, ಅಥವಾ ಮದ್ಯಪಾನ ಮಾಡಿದರೆ ನಿಮಗೆ ಲುಕೊಪ್ಲಾಕಿಯಾ ಉಂಟಾಗುತ್ತದೆ. ಈ ಅಸ್ವಸ್ಥತೆಯು ನಿಮ್ಮ ವಸಡುಗಳ ಮೇಲೆ , ಕೆನ್ನೆಯ ಒಳಭಾಗದಲ್ಲಿ, ನಾಲಿಗೆಯ ಮೇಲೆ ಬಿಳಿ ಪ್ಯಾಚ್ ಆಗುವಂತೆ ಮಾಡುತ್ತದೆ. ಇವು ಸಾಮಾನ್ಯವಾಗಿ ತೊಂದರೆ ಉಂಟು ಮಾಡುವಂತವು ಅಲ್ಲ, ಆದರೆ ಇದು ಓರಲ್ ಕ್ಯಾನ್ಸರಿನ ಒಂದು ಲಕ್ಷಣವೂ ಹೌದು.

ಓರಲ್ ಲಿಚೆನ್ ಪ್ಲೇನುಸ್ : ಈ ಅಸ್ವಸ್ಥತೆಯು ನಿಮ್ಮ ಪ್ರತಿರಕ್ಷಣಾ (ಇಮ್ಮ್ಯೂನಿಟಿ) ವ್ಯವಸ್ಥೆಗೆ ಸಂಬಂಧಪಟ್ಟಿದ್ದು, ಇದು ನಿಮ್ಮ ನಾಲಿಗೆಯ ಮೇಲೆ ಬಿಳಿ ಪ್ಯಾಚ್ ತರಿಸುತ್ತದೆ. ಇದರೊಂದಿಗೆ ವಸಡುಗಳಲ್ಲೂ ನಿಮಗೆ ನೋವು ಕಾಣಿಸಿಕೊಳ್ಳಬಹುದು.

ಓರಲ್ ಥ್ರಶ್ : ಇದು ಕ್ಯಾಂಡಿಡಾ ಎಂಬ ಯೀಸ್ಟ್ ಇಂದ ಉಂಟಾಗುವ ಒಂದು ಸೋಂಕು. ಇದು ಮಧುಮೇಹ ಇರುವವರಲ್ಲಿ ಮತ್ತು ದುರ್ಬಲಗೊಂಡ ಪ್ರತಿರಕ್ಷಣಾ ವ್ಯವಸ್ಥೆ ಇರುವವರಲ್ಲಿ ಕಾಣಿಸಿಕೊಳ್ಳುತ್ತದೆ.

ಸಿಫಿಲಿಸ್ : ಸಿಫಿಲಿಸ್ ಒಂದು ಲೈಂಗಿಕವಾಗಿ ಹರಡುವ ಕಾಯಿಲೆ ಆಗಿದ್ದು, ಇದು ನಿಮ್ಮ ಬಾಯಿಯಲ್ಲಿ ಹುಣ್ಣುಗಳನ್ನು ಹುಟ್ಟಿಸುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ಬಿಳಿ ಪ್ಯಾಚ್ ನಾಲಿಗೆಯ ಮೇಲೆ ಕಾಣಿಸಿಕೊಳ್ಳುತ್ತದೆ.

ಬಿಳಿ ನಾಲಿಗೆ ಹೋಗಲಾಡಿಸಲು ವಿಧಾನಗಳು
ಉಪ್ಪು
ವಿಧಾನ 1 : ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಚಮಚ ಉಪ್ಪನ್ನು ಬೆರೆಸಿ ಚೆನ್ನಾಗಿ ಕಲಿಸಿ. ಈ ಉಪ್ಪುನೀರಿನಲ್ಲಿ ನಿಮ್ಮ ಬಾಯಿಯನ್ನು ದಿನಕ್ಕೆ 2-3 ಬಾರಿ ಮುಕ್ಕಳಿಸಿ.
ವಿಧಾನ ೨ : ನಿಮ್ಮ ನಾಲಿಗೆಯ ಮೇಲೆ ಉಪ್ಪನ್ನು ಸಿಂಪಡಿಸಿಕೊಳ್ಳಿ. ನಂತರ ನಿಮ್ಮ ಬ್ರಷ್ ಇಂದ ನಾಲಿಗೆಯನ್ನು ಚೆನ್ನಾಗಿ ಉಜ್ಜಿ. ಬೆಚ್ಚಗಿನ ನೀರಿನಿಂದ ಬಾಯಿಯನ್ನು ತೊಳೆದುಕೊಳ್ಳಿ.

ಆಲೋವೆರಾ
ಅಲೋವೆರಾ (ಲೋಳೆಸರ) ಅನ್ನು ಹಿಂಡಿ ಅದರ ರಸ ತೆಗೆದುಕೊಳ್ಳಿ. ಒಂದು ಚಮಚದಷ್ಟು ರಸವನ್ನು ನಿಮ್ಮ ಬಾಯಿಗೆ ಹಾಕಿಕೊಂಡು ಬಾಯಿಯ ಎಲ್ಲಾ ಭಾಗಕ್ಕೂ ತಲಪುವಂತೆ ಸ್ವಿಶ್ ಮಾಡಿ. ಇನ್ನು ಒಂದು ಚಮಚದಷ್ಟು ರಸವನ್ನು ಹಾಗೆಯೇ ನುಂಗಿರಿ. ಇದನ್ನು ಎರಡು ವಾರಗಳ ಕಾಲ ದಿನಕ್ಕೆ 2-3 ಬಾರಿ ಮಾಡಿ.

Comments are closed.