ಮಗುವಿನ ಬರುವಿಕೆಯ ದಾರಿಯನ್ನು ನಿರೀಕ್ಷಿಸುತ್ತಿರುವ ತಾಯಂದಿರೇ, ಮಗು ಜನಿಸಿದಾಗ ಅದರಲ್ಲಾಗುವ ಬದಲಾವಣೆಗಳ್ಳನ್ನು ತಿಳಿದುಕೊಳ್ಳುವ ಕುತೂಹಲವೇ? ಗರ್ಭಾವಸ್ಥೆ, ಹೆರಿಗೆಯ ಸಮಯ, ಬಾಣಂತನದ ಸಮಯ, ಹೀಗೆ ಹೆಚ್ಚಿನ ವಿಷಯಗಳ ಬಗ್ಗೆ ಈಗಿನ ಕಾಲದ ಹೆಣ್ಣು ಮಕ್ಕಳಿಗೆ ತಿಳಿದಿರುವುದು ಕಡಿಮೆ. ಮನೆಯೊಳಗೊಂದು ಮಗುವಿದ್ದರೆ, ಹೇಗೆ ಮನೆ ತುಂಬಾ ನಗುವಿರುತ್ತದೆಯೋ, ಅದೇ ರೀತಿ ಆಯಾಸದಾಯಕವೂ ಹೌದು. ನವಜಾತ ಶಿಸುಗಳ ಬಗ್ಗೆ, ನಿಮಗೆ ತಿಳಿಯದ ಹಲವಾರು ವಿಷಯಗಳ್ಳನ್ನು ಮಕ್ಕಳ ತಜ್ಞರು ಏನೆಂದು ವಿವರಿಸುತ್ತಾರೆ, ತಿಳಿಯೋಣ ಬನ್ನಿ.
1. ನೋಡುವುದ್ದಕ್ಕೆ ವಿಚಿತ್ರವಾಗಿ ಕಾಣಿಸುತ್ತವೆ
ಮಕ್ಕಳೆಂದರೆ ಮುದ್ದು, ಆದರೆ ನೀವು ಗಮನಿಸಿರಬಹುದು, ನವಜಾತ ಶಿಶುಗಳು ನೋಡಲು, ಅಷ್ಟೇನು ಮುದ್ದು ಮುದ್ದಾಗಿ ಕಾಣುವುದಿಲ್ಲ. ಯಾಕೆಂದರೆ ತಾಯಿಯ ಗರ್ಭಾಶಯದೊಳಗೆ ೯ ತಿಂಗಳು ಬೆಚ್ಚಗೆ ಮುದುಡಿ ಕುಳಿತಿದ್ದ ಕಂದಮ್ಮ, ಹೊರಗಿನ ವಾತಾವರಣದೊಂದಿಗೆ ಹೊಂದಿಕೊಳ್ಳಲು, ಸಮಯದ ಅಗತ್ಯವಿರುವುದರಿಂದ ಬೀಟ್ರೂಟ್ ನಂತೆ ಕೆಂಪಗೆ ಕಾಣುತ್ತವೆ ಹಾಗೂ ಇದು ಸಹಜವು ಹೌದು. ಗರ್ಭಿಣಿಯರಿಗೊಂದು ಸಣ್ಣ ಕಿವಿ ಮಾತು, ಮಗುವು ಜನಿಸಿದ ಕೂಡಲೇ ಅದನ್ನು ನೋಡಿ ನಿರಾಸೆ ಹೊಂದುವ ಅಗತ್ಯವಿಲ್ಲ. ಯಾಕೆ ಮಗು ಮುದ್ದಾಗಿ ಕಾಣುವುದಿಲ್ಲವೆಂದು ಚಿಂತಿಸಬೇಡಿ. ದಿನ ಕಳೆದಂತೆ ಮಕ್ಕಳು, ದೈಹಿಕ ಬೆಳವಣಿಗೆಯನ್ನು ಹೊಂದಿ, ಮುದ್ದು ಮುದ್ದಾಗಿ ಕಾಣಿಸುತ್ತವೆ.
2. ಮಗುವಿನ ಮೊಡವೆಗಳು
ನವಜಾತ ಮಕ್ಕಳ್ಳಲ್ಲಿ ಮೊಡವೆಗಳು ಸಹಜ. ಆದರೆ ಮೊಡವೆಗಳ್ಳನ್ನು ಹೋಗಿಸುವುದಕ್ಕೆ, ಅದರ ಮೇಲೆ ಲೇಪನ ಮಾಡುವುದು, ಕೀಳುವುದ್ದನ್ನು ಮಾಡಬಾರದು. ಹೀಗೆ ಮಾಡಿದರೆ ಮೊಡವೆಗಳು ಜಾಸ್ತಿಯಾಗಿ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಹಾಗಾಗಿ ಮೊಡವೆಗಳನ್ನು ಸಹಜವಾಗಿ ವಾಸಿಯಗಲು ಬಿಟ್ಟುಬಿಡಿ.
3. ಬೆಚ್ಚಗಿರಲು ಹಾತೊರೆಯುತ್ತವೆ
ಇದನ್ನು ಕೇಳಲು ನಿಮಗೆ ವಿಚಿತ್ರವೆನಿಸಬಹುದು. ಆದರೆ ನವಜಾತ ಶಿಶುವು, ಆದಷ್ಟು ಬೆಚ್ಚಗಿರಲು ಇಷ್ಟಪಡುತ್ತದೆ. ಯಾಕೆಂದರೆ ತಾಯಿಯ ಗರ್ಭದೊಳಗಿನಿಂದ, ಹೊರಗೆ ಬಂದಾಗ ,ಭೂಮಿಯ ತಣ್ಣನೆಯ ವಾತವರಣಕ್ಕೆ ಹೊಂದಿಕೊಳ್ಳಲು ಸಮಯದ ಅವಶ್ಯಕತೆ ಇರುವುದರಿಂದ, ಮಕ್ಕಳ್ಳನ್ನು ದಪ್ಪನೆಯ ಬಟ್ಟೆಯಿಂದ ಸುತ್ತಿ ಬೆಚ್ಚಗಿಡ ಬೇಕು.
4. ಪ್ರತಿ ದಿನ, ಸ್ನಾನದ ಅಗತ್ಯವಿಲ್ಲ
ಹೌದು, ನಾವು ಯೋಚಿಸುತ್ತಿರಬಹುದು, ಮಗುವಿಗೆ ಸ್ನಾನ ಮಾಡಿಸದಿದ್ದರೆ ಅದರ ಶುಚಿತ್ವವನ್ನು ಹೀಗೆ ಕಾಪಾಡುವುದೆಂದು? ಚಿಂತಿಸಬೇಡಿ, ನಾವಜಾತ ಶಿಶುಗಳ ತ್ವಚೆ ಸೂಕ್ಷ್ಮವಾಗಿರುವುದರಿಂದ, ಸ್ವಲ್ಪ ಉಜ್ಜಿದರು ಗಾಯಗಳಾಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಮಕ್ಕಳಿಗೆ ಕೇವಲ ಒದ್ದೆ ಬಟ್ಟೆಯಿಂದ ಮೈಯನ್ನು ಒರಸಿದರೆ ಸಾಕು.
5. ತೊಟ್ಟಿಲೊಳಗೆ ಮಲಗಿಸಲು ಆತುರ ಪಡಬೇಡಿ
ಗರ್ಭಶಯದೊಳಗಿನ ಪುಟ್ಟ ಸ್ಥಳದೊಳಗೆ ಬೆಚ್ಚಗೆ ಮಲಗಿದ್ದ ನಿಮ್ಮ ಕಂದಮ್ಮಗಳನ್ನು , ಒಂದೇ ಬಾರಿಗೆ ಅಗಲ ಹಾಸಿಗೆಯ ತೊಟ್ಟಿಲೊಳಗೆ ಹಾಕದಿರಿ. ತಾಯಿಯೊಂದಿಗೆ ಮಲಗಿಸಿ ಅಥವಾ ಎಳೆ ಮಕ್ಕಳ ಪುಟಾಣಿ ತೊಟ್ಟಿಲೊಳಗೆ ಮಲಗಿಸಿ. ಹೀಗೆ ಹುಟ್ಟಿದ ಕೆಲವು ದಿನಗಳು ಮಾಡಿದ್ದಲ್ಲಿ , ಮಗುವು ಹೊರಗಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ ನಂತರ ನೀವು ಮಗುವನ್ನು ತೊಟ್ಟಿಲೊಳಗೆ ಮಲಗಿಸಬಹುದು.
6. ಸಹಜ ನೈಸರ್ಗಿಕ ಕ್ರಿಯೆ
ಏನು ತಿಳಿಯದ ಕಂದಮ್ಮಗಳು, ದಿನದಲ್ಲಿ ಹಲವು ಬಾರಿ ವಾಂತಿ, ಮಲ ಮೂತ್ರ ವಿಸರ್ಜಿಸುತ್ತವೆ. ಇದಕ್ಕೆ ಹೊಂದಿಕೊಳ್ಳಲು ತಾಯಿಗೆ ಸ್ವಲ್ಪ ಸಮಯ ಬೇಕು. ಆದರೆ ಒಂದು ಬಾರಿ ಇದಕ್ಕೆ ಹೊಂದಿಕೊಂಡರೆ, ಸಹಜವಾಗಿ ಮುಜುಗರವೆನಿಸುವುದಿಲ್ಲ.
7. ಉಗುರುಗಳು ಮಕ್ಕಳಿಗೆ ಹಾನಿಕಾರಕ
ನಿದ್ರೆಯಲ್ಲಿ ನಿಮ್ಮ ಮಗುವು, ತನ್ನ ಉಗುರುನಿಂದಲೇ ಎಲ್ಲಾ ಕಡೆ ಗಾಯ ಮಾಡಿಕೊಂಡಿರುವುದನ್ನು ನೋಡಿ, ನಿಮ್ಮ ಹೃದಯ ಕಿವುಚಿದಂತಾಯಿತೇ? ಚಿಂತಸಬೇಡಿ, ನಿಮ್ಮ ಮಗುವಿನ ಉಗುರುಗಳ್ಳನ್ನು, ಮಗುವಿನ ಉಗುರು ಕ್ಲಿಪ್ಪರ್ಗಳಿಂದ ಕತ್ತರಿಸಿ ಅಥವಾ ಮಗುವಿಗೆ ಕೈಗವಸನ್ನು ಹಾಕಿರಿ.
8. ಕಿತ್ತಳೆ ಬಣ್ಣದ ಮುದ್ದು ಕಂದಮ್ಮಗಳು
ನಿಮ್ಮ ಕಂದಮ್ಮನನ್ನು ಆಸ್ಪತ್ರೆಯಿಂದ ಮನೆಗೆ ಮೊದಲ ಬಾರಿ ಕರೆತಂದಾಗ, ಮಗುವಿನ ಮೈಯೆಲ್ಲಾ ಕಿತ್ತಳೆ ಬಣ್ಣವಾಗಿದೆ ಎಂದು ಭಯ ಪಡಬೇಡಿ. ಇದು ಸರ್ವೇಸಾಮಾನ್ಯ. ನವಜಾತ ಶಿಶುಗಳ್ಳಲ್ಲಿ, ಅಲ್ಪ ಮಟ್ಟದ ಕಾಮಾಲೆ ಇರುತ್ತದೆ ಹಾಗೂ ಇದು ಹುಟ್ಟಿದ ೩೬ ಗಂಟೆಯೊಳಗೆ ತಾನಾಗಿಯೇ ವಾಸಿಯಾಗುತ್ತದೆ.
9.ಮಕ್ಕಳ್ಳಲ್ಲಿ ಕೂದಲುದುರುವಿಕೆ
ಹುಟ್ಟಿದ ಸ್ವಲ್ಪ ದಿನಗಳ ನಂತರ ಮಗುವಿನ ಕೂದಲೆಲ್ಲಾ ಉದುರಿ, ಹೊಸ ಕೂದಲು ಬೆಳೆಯಲು ಪ್ರಾರಂಭವಾಗುತ್ತದೆ. ಯಾಕೆ ಹೀಗಾಗುತ್ತದೆಂದರೆ ಮಗುವಿನ ಕುತ್ತಿಗೆಯ ಹಾಗೂ ಬುರುಡೆಯ ಮೂಳೆ ಹಾಗು ಮಾಂಸ ಖಂಡಗಳು ನಿಧಾನವಾಗಿ ಕೂಡಿಕೊಂಡು ಗಟ್ಟಿಯಾಗುತ್ತಾ ಹೋಗುವುದರಿಂದ, ಮಕ್ಕಳ ನೆತ್ತಿಯ ಮೇಲಿನ ಕೂದಲು ಉದುರುವುದು ಸಹಜ.
10. ಹೊರಗಿನ ಪ್ರಪಂಚವನ್ನು ಪರಿಚಯಿಸಿ
ಪೋಷಕರು ನವಜಾತ ಶಿಶುಗಳ್ಳನ್ನು ಹೊರಗೆ ಕರೆದುಕೊಂಡು ಹೋಗುವುದು ತುಂಬಾ ಕಡಿಮೆ. ಹೀಗೆ ಮಾಡಿದರೆ, ಎಲ್ಲಿ ತಮ್ಮ ಮಗುವಿಗೆ ರೋಗಾಣುಗಳು ಸೋಂಕಿ, ಖಾಯಿಲೆ ಬೀಳುತ್ತವೆ ಎಂಬ ಭಯವಿರುತ್ತದೆ. ಆದರೆ ಇದು ನಿಮ್ಮ ತಪ್ಪು ಕಲ್ಪನೆಯಷ್ಟೇ. ಮಗುವನ್ನು ಹೊರಗಿನ ವಾತಾವರಣಕ್ಕೆ ಕರೆದುಕೊಂಡು ಹೋದರೆ, ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಿ, ಅದರ ದೈಹಿಕ ಹಾಗು ಮಾನಸಿಕ ಬೆಳವಣಿಗೆಗೆ ಸಹಾಯವಾಗುತ್ತದೆ.
ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ, ದಯವಿಟ್ಟು ನಿಮ್ಮ ಬಂಧು-ಮಿತ್ರರೊಂದಿಗೆ ಹಂಚಿಕೊಳ್ಳಿ.

Comments are closed.