ಕರಾವಳಿ

ಉಡುಪಿಯಲ್ಲಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ, ಹಾಜಿ ಅಬ್ದುಲ್ಲಾ ಆಸ್ಪತ್ರೆ ಉದ್ಘಾಟಿಸಿದ ಸಿಎಂ ಸಿದ್ಧರಾಮಯ್ಯ

Pinterest LinkedIn Tumblr

ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ, ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡವನ್ನು ಸಿಎಂ ಸಿದ್ದರಾಮಯ್ಯ ಅವರು ಭಾನುವಾರ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಇದು ಸರಕಾರಿ ಆಸ್ಪತ್ರೆ ,ಸರಕಾರಿ ಅಸ್ಪತ್ರೆಯಾಗಿಯೇ ಇರುತ್ತೆ.  200 ಬೆಡ್ ಗಳ ಈ ಅಸ್ಪತ್ರೆ ಇಲ್ಲಿ ನೂರಕ್ಕೆ ನೂರು ಉಚಿತ ವ್ಯದಕೀಯ ಸೇವೆಯನ್ನು ನೀಡುತ್ತೆವೆ ಅನ್ನೊ ಒಪ್ಪಂದದ ಮೇಲೆ ಬಿ.ಆರ್ ಶೆಟ್ಟಿ ಅವರಿಗೆ ನೀಡಲಾಗಿದೆ.

ಬಿ.ಆರ್ ಶೆಟ್ಟಿ ಅವರು ಕೇವಲ ಹುಟ್ಟೂರ ಜನರಿಗೆ ಉತ್ಕೃಷ್ಟ ಮಟ್ಟದ ಸೇವೆ ನೀಡುವ ನಿಟ್ಟಿನಲ್ಲಿ ಇದಕ್ಕೆ ಒಪ್ಪಿಕೊಂಡಿರುವುದರಿಂದ ಅವರಿಗೆ ನಡೆಸಲು ಕೊಟ್ಟಿದ್ದೆವೆ ಎಂದು ಸ್ಪಷ್ಟನೆ ನೀಡಿದರು. ಇನ್ನೊಂದು ೪೦೦ ಹಾಸಿಗೆಗಳ ಸೂಪರ್ ಸ್ಪೆಶಲಿಟಿ ಅಸ್ಪತ್ರೆ ಕೂಡ ಶೀಘ್ರದಲ್ಲಿ ಸಂಪೂರ್ಣಗೊಳ್ಳಲಿದ್ದು ಅಲ್ಲೂ ಕೂಡ ಬಡವರಿಗೆ ನೂರಕ್ಕೆ ನೂರು ಉಚಿತ ಚಿಕಿತ್ಸೆ ಸಿಗಲಿದೆ ಎಂದರು.

ಇದೇ ಸಂಧರ್ಭದಲ್ಲಿ ಬಿಜೆಪಿಯನ್ನ ತರಾಟೆಗೆ ತೆಗೆದುಕೊಂಡ ಸಿ ಎಂ ಬಿಜೆಪಿ ಕೈಗೊಂಡಿರುವ ಪರಿವರ್ತನಾ ಯಾತ್ರೆ ಜನರ ಕಾಳಜಿಯನ್ನಿಟ್ಟುಕೊಂಡು ಹೊರಟಿದ್ದಲ್ಲ.ಅದು ಕೇವಲ ವೋಟನ್ನ ಪರಿವರ್ತನೆ ಮಾಡಲು ಹೊರಟಿದೆ. ಪರಿವರ್ತನೆ ಆಗಬೇಕಾಗಿದ್ದು ಮೊದಲು ಬಿಜೆಪಿಗರ ಕೆಟ್ಟ ಮನಸ್ಸು, ಜಾತೀಗಳ ಮದ್ಯೆ ವಿ‍‍‍ಷ ಬೀಜ ಬಿತ್ತುವಂತಹ ಕೆಟ್ಟ ಮನಸ್ಸುಗಳು ಪರಿವರ್ತನೆ ಆಗಬೇಕೆ ಹೊರತು ಯಾತ್ರೆ ಮಾಡಿದ್ರೆ ಪರಿವರ್ತನೆ ಆಗಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿ.ಆರ್.ಎಸ್. ಸ್ವಾಸ್ಥ್ಯಮತ್ತು ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ. ಬಿ.ಆರ್. ಶೆಟ್ಟಿ, ಉಪಾಧ್ಯಕ್ಷ ಡಾ. ಸಿ.ಆರ್ ಶೆಟ್ಟಿ, ಆರೋಗ್ಯ ಸಚಿವ ರಮೇಶ್ ಕುಮಾರ್, ಸಚಿವರಾದ ಪ್ರಮೋದ್ ಮಧ್ವರಾಜ್, ಕೆ.ಜೆ. ಜಾರ್ಜ್, ಯುಟಿ ಖಾದರ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ,ಶಾಸಕರಾದ ಕೆ. ಗೋಪಾಲ ಪೂಜಾರಿ, ವಿನಯ್ ಕುಮಾರ್ ಸೊರಕೆ, ಮುಖಂಡ ಎಂ.ಎ ಗಫೂರ್, ಉಡುಪಿ ನಗರ ಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಇದ್ದರು.

Comments are closed.