ಕರಾವಳಿ

ರಾಜ್ಯದಲ್ಲಿ ಮದ್ಯ ನಿಷೇಧದ ಬಗ್ಗೆ ಸರಕಾರದ ಮುಂದೆ ಯಾವುದೇ ಪ್ರಸ್ತಾಪ ಇಲ್ಲ: ಸಿಎಂ ಸಿದ್ದರಾಮಯ್ಯ

Pinterest LinkedIn Tumblr

ಉಡುಪಿ: ರಾಜ್ಯದಲ್ಲಿ ಮದ್ಯಪಾನ ನಿಷೇಧದ ಬಗ್ಗೆ ಚರ್ಚೆ ಆಗುತ್ತಿದೆ. ಆದ್ರೆ ಸಿಎಂ ಸಿದ್ದರಾಮಯ್ಯ ಸರಕಾರದ ಮುಂದೆ ಇಂತಹ ಯಾವುದೇ ಪ್ರಸ್ತಾವ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಉಡುಪಿಗೆ ಆಸ್ಪತ್ರೆ ಉದ್ಘಾಟನೆಗಾಗಿ ಬಂದಂತಹ ಸಂದರ್ಬದಲ್ಲಿ ಸಿಎಂ ಸಿದ್ದರಾಮಯ್ಯ ಈ ವಿಷಯ ಸ್ಪಷ್ಟಪಡಿಸಿದ್ದಾರೆ. ವೈದ್ಯರ ಮುಷ್ಕರದಿಂದ ಸರಕಾರಕ್ಕೂ , ವೈದ್ಯರಿಗೂ ಜಯವಾಗಿಲ್ಲ ಕೆ.ಪಿ.ಎಂ ಇ ತಿದ್ದುಪಡಿ ಮಸೂದೆ ನಾಳೆ ನಡೆಯುವ ಬೆಳಗಾವಿ ಅಧಿವೇಶನದಲ್ಲಿ ಜಾರಿಯಾಗಲಿದೆ. ಮಸೂದೆ ಜಾರಿಯಾದ್ರೆ ಇದು ರಾಜ್ಯದ ಜನತೆಯ ಗೆಲುವಾಗುತ್ತದೆ ಎಂದರು.

ಇನ್ನು ಪ್ರತೀ ಬಾರಿ ಉಡುಪಿಗೆ ಬಂದಾಗಲೂ ಕೃಷ್ಣ ಮಠಕ್ಕೆ ಭೇಟಿ ನೀಡದ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ ನನಗೆ ಈ ಬಾರಿ ಆಹ್ವಾನ ಬಂದಿಲ್ಲ ..ನಾನು ಹೋಗುತ್ತಿಲ್ಲ. ಮಠಕ್ಕೆ ಯಾರು ಬೇಕಾದರೂ ಹೋಗಬಹುದು. ನಾನು ಉದ್ದೇಶ ಪೂರ್ವಕವಾಗಿ ಹೋಗುತ್ತಿಲ್ಲ. ಪೇಜಾವರ ಶ್ರೀಗಳ ಜೊತೆ ಮನಸ್ತಾಪ ಇಲ್ಲ. ರಾಜ್ಯದ ಆರೂವರೆ ಕೋಟಿ ಜನರ ಜೊತೆನೂ ನಾನು ಚೆನ್ನಾಗಿದ್ದೇನೆ. ಬಿಜೆಪಿಯವರು ಈ ಬಗ್ಗೆ ಅಪಪ್ರಚಾರ ಮಾಡಲಿ ಅದು ಅವರಿಗೇ ನೆಗೆಟಿವ್ ಆಗುತ್ತೆ ಅಂದ್ರು.

ಲಿಂಗಾಯತ ಸಮಾವೇಶಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಡಿ.೩೧ರ ಗಡುವಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದ್ರು. ಇಂದಿರಾ ಕ್ಯಾಂಟೀನ್ ಕಳಪೆ ಗುಣಮಟ್ಟದ ಅಕ್ಕಿ ಪೂರೈಕೆಯ ಆರೋಪ ಸರಿಯಲ್ಲ. ಗ್ರಾಹಕರಿಂದ ಯಾವುದೇ ದೂರು ಬಂದಿಲ್ಲ ಎಂದರು.

 

Comments are closed.