ಕರಾವಳಿ

ಸಚಿವ ರೈ ವಿರುದ್ಧ ಲೋಕಾಯುಕ್ತಕ್ಕೆ ದೂರು : ಹರಿಕೃಷ್ಣರಿಗೆ ಎಚ್ಚರಿಕೆ ನೀಡಿದ ನ್ಯಾಯಮೂರ್ತಿ

Pinterest LinkedIn Tumblr

ಮ0ಗಳೂರು:ಕರ್ನಾಟಕ ಲೋಕಾಯುಕ್ತ ಮಂಗಳೂರು ಮತ್ತು ದ.ಕ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ನಗರದ ಪುರಭವನದಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ದೂರುಗಳ ವಿಚಾರಣೆ ಮತ್ತು ವಿಲೇವಾರಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವಿರುದ್ಧ ಹರಿಕೃಷ್ಣ ಬಂಟ್ವಾಳ್ ಭೂ ಕಬಳಿಕೆ ಸಂಬಂಧ ದೂರು ನೀಡಿದ್ದಾರೆ.

              ಹರಿಕೃಷ್ಣ ಬಂಟ್ವಾಳ                                           ರಮಾನಾಥ ರೈ               

ಇತ್ತೀಚೆಗೆ ಬಿಜೆಪಿ ಸೇರಿರುವ ಹರಿಕೃಷ್ಣ ಬಂಟ್ವಾಳ ಅವರು .ರಮಾನಾಥ ರೈ ವಿರುದ್ಧ ಭೂ ಕಬಳಿಕೆ ಸಂಬಂಧ ನೀಡಿರುವ ದೂರನ್ನು ಪರಿಶೀಲನೆ ಮಾಡಿದ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿಯವರು ‘ಈ ಆರೋಪ ರಾಜಕೀಯ ಉದ್ದೇಶದಿಂದ ಕೂಡಿದೆ ಅಲ್ಲವೇ? ಹಾಗೇನಾದರೂ ಆದರೆ ನಿಮ್ಮ ಮೇಲೆಯೇ ಸೂಕ್ತ ಕ್ರಮ ಕೈಗೊಳ್ಳುತ್ತೇನೆ’ ಎಂದು ಹರಿಕೃಷ್ಣ ಬಂಟ್ವಾಳ ಅವರಿಗೆ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.

ಲೋಕಾಯುಕ್ತರಿಗೆ ದೂರು ನೀಡುವ ಮೊದಲು ನೀವೇಕೆ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದೀರಿ ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ, ಮೊದಲು ಜನತಾ ನ್ಯಾಯಾಲಯದಲ್ಲಿಯೇ ಪ್ರಕರಣವನ್ನು ಇಟ್ಟಿದ್ದು ಹೌದು. ಆದರೆ, ನಿನ್ನೆಯಷ್ಟೇ ಲೋಕಾಯುಕ್ತರಿಗೆ ದೂರು ನೀಡುವುದು ಸರಿ ಎನಿಸಿತು. ಅದಕ್ಕೇ ನೀಡಿದ್ದೇನೆ ಎಂದು ಹರಿಕೃಷ್ಣ ಬಂಟ್ವಾಳ ಸಮರ್ಥನೆ ನೀಡಿದ್ದು, ದೂರನ್ನು ಪರಿಶೀಲಿಸಿ, ತನಿಖೆ ನಡೆಸಲಾಗುವುದು ಎಂದು ಲೋಕಾಯುಕ್ತರು ಹೇಳಿದ್ದಾರೆ.

ಇದೇ ವೇಳೆ ಸರ್ಕಾರದ ಆಡಳಿತ ವ್ಯವಸ್ಥೆಯನ್ನು ಉತ್ತಮಗೊಳಿಸುವುದರ ಜೊತೆಗೆ ದುರಾಡಳಿತವನ್ನು ಕೊನೆಗೊಳಿಸಿ ಸಾರ್ವಜನಿಕರಿಗೆ ತ್ವರಿತ ಪರಿಹಾರವನ್ನು ಒದಗಿಸಿ ಕೊಡುವುದು ಲೋಕಾಯುಕ್ತದ ಮುಖ್ಯ ಉದ್ದೇಶ ಎಂದು ಲೋಕಾಯುಕ್ತ ನ್ಯಾ.ವಿಶ್ವನಾಥ ಶೆಟ್ಟಿ ಹೇಳಿದರು. ಇದೇ ಸಂದರ್ಭದಲ್ಲಿ ಭ್ರಷ್ಟಾಚಾರ, ಜನ ಸೇವೆಯಲ್ಲಿ ಲೋಪವಾದ ಪ್ರಕರಣಗಳಲ್ಲಿ ಅಧಿಕಾರಿಗಳನ್ನು ಲೋಕಾಯುಕ್ತ ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು.

Comments are closed.