ಕರಾವಳಿ

ವೈದ್ಯರ ಮುಷ್ಕರ ಹಿನ್ನೆಲೆ : ಚಿಕಿತ್ಸೆ ಸಿಗದೆ ಪುತ್ತೂರಿನ ವಿದ್ಯಾರ್ಥಿನಿ ಮೃತ್ಯು

Pinterest LinkedIn Tumblr

ಮಂಗಳೂರು: ವೈದ್ಯರ ಮುಷ್ಕರದಿಂದ ಸೂಕ್ತ ಸಮಯದಲ್ಲಿ ಸೂಕ್ತ ರೀತಿಯ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಮಂಗಳೂರಲ್ಲಿ ಯುವತಿ ಯೋರ್ವಳು ಸಾವನ್ನಪ್ಪಿದ್ದಾಳೆ. ಈ ಮೂಲಕ ಸರಣಿ ಸಾವಿನ ಸಂಖ್ಯೆ ಮುಂದುವರಿದಿದೆ.

ಕಬಕ ವಿದ್ಯಾಪುರ ನಿವಾಸಿ ಪುತ್ತೂರು ವಿವೇಕಾನಂದ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿಯಾಗಿದ್ದ ಪೂಜಾ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಳು. ವಾರಕ್ಕೆರೆಡು ಬಾರಿ ಪುತ್ತೂರಿನ ಸಿಟಿ ಆಸ್ಪತ್ರೆಯಲ್ಲಿ ಆಕೆಗೆ ಡಯಾಲಿಸಿಸ್ ನಡೆಯುತ್ತಿತ್ತು.

ಆದ್ರೆ ಮಂಗಳವಾರ ಪೂಜಾಗೆ ನೋವು ಉಲ್ಬಣಗೊಂಡಿದ್ದರಿಂದ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ಪುತ್ತೂರು ಸಿಟಿ ಆಸ್ಪತ್ರೆಗೆ ಸೇರಿಸಿದಾಗ ರಕ್ತದಲ್ಲಿ ಸಮಸ್ಯೆ ಇದೆ ತಿಳಿಯಿತು. ವೈದ್ಯರು ಡಯಾಲಿಸಿಸ್ ಮಾಡಿಸುವಂತೆ ಸಲಹೆ ನೀಡಿದ್ದರು.

ಮಂಗಳೂರು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ತೆರಳಿದಾಗ ವೈದ್ಯರು ಲಭ್ಯವಿರಲಿಲ್ಲ. ಗುರುವಾರ ರಾತ್ರಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಪೂಜಾ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಈಗಾಗಲೇ ವೈದ್ಯರ ಮುಷ್ಕರದ ಹಿನ್ನಲೆ ವಿಜಯಪುರದಲ್ಲಿ ಲಕ್ಷ್ಮೀಬಾಯಿ ಸೊನ್ನ ಅವರಿಗೆ ಆರೋಗ್ಯದಲ್ಲಿ ಏರುಪೇರಾದ ನಂತರ ತುರ್ತು ಚಿಕಿತ್ಸೆ ದೊರೆಯದೆ ಮೃತಪಟ್ಟಿದ್ದಾರೆ. ಇನ್ನು ಚಿಕ್ಕಬಳ್ಳಾಪುರದಲ್ಲಿ ನಾಲ್ಕು ತಿಂಗಳ ಮಗು ತೀವ್ರ ಜ್ವರದಿಂದ ಸಾವನ್ನಪ್ಪಿದೆ. ಶಿವಮೊಗ್ಗದಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ವೀರಯ್ಯ ಅವರಿಗೆ ತುರ್ತು ಚಿಕಿತ್ಸೆ ದೊರೆಯದೆ ಮೃತಪಟ್ಟಿದ್ದಾರೆ. ಇದೀಗ ಸೂಕ್ತ ಚಿಕಿತ್ಸೆ ದೊರೆಯದೆ ವಿದ್ಯಾರ್ಥಿನಿ ಪೂಜಾ ಮೃತಪಟ್ಟಿದ್ದಾಳೆ.

Comments are closed.