ಕರಾವಳಿ

ಕೋಟೇಶ್ವರದಲ್ಲಿ ಚರಂಡಿಗೆ ಆಸ್ಪತ್ರೆಯ ತ್ಯಾಜ್ಯ ನೀರು: ಸೊಳ್ಳೆ ಕಾಟ, ಸಾಂಕ್ರಾಮಿಕ ರೋಗ ಭೀತಿಯಲ್ಲಿ ಜನರು!

Pinterest LinkedIn Tumblr

ಕುಂದಾಪುರ: ಈ ಗ್ರಾಮದಲ್ಲಿ ಇಲ್ಲವಾದದ್ದು ಏನು ಇಲ್ಲ. ಶಿಕ್ಷಣ ಕ್ಷೇತ್ರದಿಂದ ಹಿಡಿದು ವಾಣಿಜ್ಯ ಕ್ಷೇತ್ರ, ಧಾರ್ಮಿಕ ಕ್ಷೇತ್ರದಿಂದ ಹಿಡಿದು ಸಾಂಸ್ಕ್ರತಿಕ ಹಾಗೂ ಸಮಾ‌ಇಕ ಕ್ಷೇತ್ರದಲ್ಲೂ ಈ ಗ್ರಾಮ ತುಂಬಾ ಫೇಮಸ್. ಆದರೇ ಈ ಗ್ರಾಮದಲ್ಲಿ ಹತ್ತಾರು ವರ್ಷಗಳಿಂದ ಜನರನ್ನ ಕಾಡುತ್ತಿರುವ ಜಟಿಲ ಸಮಸ್ಯೆಯೊಂದು ಇನ್ನೂ ನಿವಾರಣೆಯಾಗಿಲ್ಲ. ಜನರನ್ನು ಹಿಂಸೆಗೀಡು ಮಾಡಿದ ಆ ಸಮಸ್ಯೆಯಾದರೂ ಏನು? ಅದಕ್ಕೆ ಪರಿಹಾರ ಕಂಡುಕೊಳ್ಳಲು ವಿಫಲರಾದವರು ಯಾರು ಎಂಬುದಕ್ಕೆ ಈ ಸ್ಟೋರಿ ನೋಡಿ.

ಕೋಟೇಶ್ವರ ಗ್ರಾಮ ಇಡೀ ತಾಲೂಕಿನಲ್ಲಿಯೇ ಮುಂದುವರಿಯುತ್ತಿರುವ ಗ್ರಾಮೀಣ ಭಾಗಗಳಲ್ಲಿ ಕೋಟೇಶ್ವರವೂ ಒಂದು. ಸದ್ಯ ಕೋಟೇಶ್ವರವನ್ನು ನಗರ ಎನ್ನೋ ಬದಲು ನಗರ ಅಂತಾನೂ ಹೇಳ್ಬಹುದು. ಯಾಕೇಂದ್ರೆ ನಗರ ಪ್ರದೇಶವನ್ನೂ ಮೀರಿಸುವಷ್ಟರ ಮಟ್ಟಿಗೆ ವಿವಿಧ ಕ್ಷೇತ್ರಗಳಲ್ಲಿ ಕೋಟೇಶ್ವರ ಬೆಳೆದು ನಿಂತಿದ್ದು ಮಾತ್ರವಲ್ಲದೇ ಇನ್ನಷ್ಟು ಅಭಿವ್ರದ್ಧಿಯತ್ತ ದಾಪುಗಾಲಿಡುತ್ತಿದೆ. ಆದರೇ ಇಷ್ಟು ಮುಂದುವರೆದ ಈ ಭಾಗದಲ್ಲಿ ಕಾಡುತ್ತಿರುವ ಜಟಿಲ ಸಮಸ್ಯೆಯೊಂದಿದೆ. ಅದುವೇ ತ್ಯಾಜ್ಯ ನೀರು ಚರಂಡಿಗೆ ಸೇರುವುದು. ಯಸ್…ಖಾಸಗಿ ಆಸ್ಪತ್ರೆಯೊಂದರ ತ್ಯಾಜ್ಯವನ್ನು ಚರಂಡಿಗೆ ಬಿಡುತ್ತಿರುವುದು ಜನರನ್ನು ಹೈರಾಣಾಗಿಸಿ ಬಿಟ್ಟಿದೆ. ತ್ಯಾಜ್ಯ ನೀರು ದುರ್ನಾತದಿಂದ ಕೂಡಿದ್ದು ಸ್ಥಳೀಯ ಮನೆಮಂದಿ ಮೂಗುಮುಚ್ಚಿ ಕೂರಬೇಕಾದ ಅನಿವಾರ್ಯತೆ ಒಂದೆಡೆಯಾದರೇ ಇನ್ನೊಂದೆಡೆ ಸೊಳ್ಳೆ ಕಾಟದಿಂದ ಜನರು ಹೈರಾಣಾಗಿದ್ದಲ್ಲದೆ ಸಾಂಕ್ರಾಮಿಕ ರೋಗ ಭೀತಿಯಲ್ಲಿದ್ದಾರೆ. ಸುಮಾರು ೨೦ ವರ್ಷಗಳಿಂದ ಈ ಸಮಸ್ಯೆಯನ್ನು ಜನರು ಅನುಭವಿಸುತ್ತಲೇ ಇದ್ದಾರೆ. ಈ ಬಗ್ಗೆ ಗ್ರಾಮಪಂಚಾಯತಿಗೂ ಮನವಿ ನೀಡಿದ್ದು ಈ ಹಿಂದೆ ಈ ಬಗ್ಗೆ ಸ್ಥಳ ತನಿಖೆ ನಡೆದಿತ್ತು. ಆಸ್ಪತ್ರೆ ಪರವಾನಗಿ ನವೀಕರಣಕ್ಕೂ ಆಕ್ಷೇಪ ವ್ಯಕ್ತವಾಗಿತ್ತು ಎಂದು ಸ್ಥಳೀಯರಾದ ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು ಹೇಳಿದ್ದಾರೆ.

ಕೋಟೇಶ್ವರ ನಗರದಲ್ಲಿರುವ ಪ್ರಮುಖ ಖಾಸಗಿ ಆಸ್ಪತ್ರೆಯಿದು. ಆಸ್ಪತ್ರೆಯ ತ್ಯಾಜ್ಯ ಹಾಗೂ ಕಲುಷಿತ ನೀರನ್ನು ಚರಂಡಿಗೆ ಬಿಡುತ್ತಿದ್ದು, ಈ ತ್ಯಾಜ್ಯಯುಕ್ತ ನೀರು ಚರಂಡಿ ಮೂಲಕ ಹೊಳೆತೋಡು ಎನ್ನುವ ಕಾಲುವೆಯಲ್ಲಿ ಹರಿದು ಮಾರ್ಕೋಡು, ನೇರಂಬಳ್ಳಿ, ಕೋಣಿಯಿಂದ ಹೊಳೆಗೆ ಸೇರುತ್ತೆ. ಮಾರ್ಗ ಮದ್ಯೆ ಮಾರ್ಕೋಡು ಪ್ರದೇಶದ ಮುನ್ನೂರಕ್ಕೂ ಅಧಿಕ ಎಕ್ರೆ ಕೃಷಿಭೂಮಿಗಳಿಗೆ ಸಮಸ್ಯೆಯಾಗುವುದು ಮಾತ್ರವಲ್ಲದೇ ಬಾವಿಗಳ ನೀರು ಕಲುಷಿತಗೊಂಡಿದೆ. ನೀರನ್ನು ಕುಡಿಯಲು ಅಸಹ್ಯವಾಗುವಷ್ಟು ನೀರು ಕೆಟ್ಟಿದೆ. ಕ್ರಷಿಕರ ಉಪಯೋಗಕ್ಕಾಗಿ ಶಾಸಕರ ನೆರವಿನಲ್ಲಿ ನಿರ್ಮಿಸಿದ ಮಾರ್ಕೋಡು ಪ್ರದೇಶದಲ್ಲಿರುವ ಕಿಂಡಿ ಅಣೆಕಟ್ಟು ಹಲಗೆ ಅಳವಡಿಸಲು ಈ ನೀರಿನಲ್ಲಿ ಇಳಿದ ಹಲವರಿಗೆ ಚರ್ಮ ರೋಗಗಳು ಬಂದಿದ್ದು ನೀರಿಗೆ ಇಳಿಯಲು ಹಿಂದೇಟು ಹಾಕುತ್ತಿದ್ದಾರಂತೆ. ಕೂಡಲೇ ಆಸ್ಪತ್ರೆಯವರು ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಜನರಿಗೆ ಸಮಸ್ಯೆಯಾಗೋದನ್ನು ತಪ್ಪಿಸಬೇಕು. ಇಲ್ಲವಾದಲ್ಲಿ ಉಘ್ರ ಹೋರಾಟವನ್ನು ಮಾಡ್ತೇವೆ ಅಂತಾರೆ ಗ್ರಾಮ ಪಂಚಾಯತಿ ಸದಸ್ಯ ಕೃಷ್ಣ ಗೊಲ್ಲ.

ಒಟ್ಟಿನಲ್ಲಿ ಸಾವಿರಾರು ಜನರಿಗೆ ನಿತ್ಯದ ತಲೆನೋವಾಗಿರುವ ಈ ಸಮಸ್ಯೆಯನ್ನು ಬಗೆಹರಿಸಬೇಕಿರುವ ಆಸ್ಪತ್ರೆಯವರು ಇನ್ನಾದರೂ ಈ ಬಗ್ಗೆ ಎಚ್ಚೆತ್ತುಕೊಳ್ಳುವರೇ ಕಾಡುನೋಡಬೇಕು ಅಷ್ಟೇ ಅಲ್ಲದೇ ಕಾನೂನು ಮೀರುವವರ ವಿರುದ್ಧ ಗ್ರಾಮಪಂಚಾಯತಿ ಎಂತಹ ದಿಟ್ಟ ಕ್ರಮ ಕೈಗೊಳ್ಳುತ್ತೋ ಎಂಬುದು ಪ್ರಶ್ನೆಯಾಗಿದೆ.

 

Comments are closed.