ಮಂಗಳೂರು / ಉಳ್ಳಾಲ, ನವೆಂಬರ್.7 : ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಕೆ.ಸಿ ರೋಡಿನ ಕೋಟೆಕಾರು ವ್ಯವಸಾಯ ಸಂಘದ ಶಾಖೆಯಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ ಮೂವರ ಶವ ಪತ್ತೆಯಾಗಿದೆ.
ಮೃತರನ್ನು ಉಮೇಶ್,ಸಂತೋಷ್, ಸೋಮನಾಥ್ ಎಂದು ಗುರುತಿಸಲಾಗಿದೆ. ಮೃತರಲ್ಲಿ ಇಬ್ಬರು ಶಾಖೆಯ ಕಾವಲು ಸಿಬ್ಬಂದಿಗಳು ಎನ್ನಲಾಗಿದೆ. ಇನ್ನೋರ್ವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಘಟನೆ ನಿನ್ನೆ ರಾತ್ರಿ ನಡೆದಿರಬೇಕೆಂದು ಶಂಕಿಸಲಾಗಿದ್ದು, ಇಂದು ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದೆ. ಈ ಅಸಹಜ ಸಾವಿನ ಕಾರಣ ನಿಗೂಢವಾಗಿದ್ದು, ಈ ಬಗ್ಗೆ ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.