ಕರಾವಳಿ

ಮುಂಬೈ: ಖ್ಯಾತ ಸೆಲೆಬ್ರಿಟಿಗಳಿರುವ ಕಟ್ಟಡದಲ್ಲಿ ಬೆಂಕಿ ಅವಘಡ – 8 ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ

Pinterest LinkedIn Tumblr

( ಸಾಂದರ್ಭಿಕ ಚಿತ್ರ )

ಮುಂಬೈ, ಅಕ್ಟೋಬರ್.24: ಮುಂಬೈಯ ಪಶ್ಚಿಮ ಬಾಂದ್ರದಲ್ಲಿರುವ ಬಹುತೇಕ ಸೆಲೆಬ್ರಿಟಿಗಳು ವಾಸವಾಗಿರುವ 16 ಅಂತಸ್ತಿನ ಕಟ್ಟಡ ‘ಲ ಮೆರ್’ ನಲ್ಲಿ ಮಂಗಳವಾರ ಬೆಂಕಿ ಅನಾಹುತ ಸಂಭವಿಸಿದೆ. ಆದರೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ನಟಿ ಐಶ್ವರ್ಯ ರೈ ಈ ಹಿಂದೆ ಇದೇ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಈಗ ಸಚಿನ್ ತೆಂಡೂಲ್ಕರ್ ಅವರ ಪತ್ನಿ ಮನೆಯವರು ಈ ಕಟ್ಟಡದ 10ನೇ ಮಹಡಿಯಲ್ಲಿ ವಾಸಿಸುತ್ತಿದ್ದರೆ.

ಐಶ್ವರ್ಯ ರೈಯ ತಂದೆ ತಾಯಿ 12ನೇ ಮಹಡಿಯಲ್ಲಿ ವಾಸವಾಗಿದ್ದಾರೆ. ಖ್ಯಾತ ಜಾಹೀರಾತು ಸಿನೆಮಾ ನಿರ್ದೇಶಕ ಪ್ರಹ್ಲಾದ್ ಕಕ್ಕರ್ ಎರಡನೇ ಮಹಡಿಯಲ್ಲಿ ವಾಸವಾಗಿದ್ದಾರೆ.

ಅಗ್ನಿಶಾಮಕ ದಳದ ಎಂಟು ವಾಹನ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು ಎಂದು ಮೂಲಗಳು ತಿಳಿಸಿವೆ.

Comments are closed.