ಗಲ್ಫ್

ದ್ವೀಪದ ನಾಟಕ ಪ್ರೇಮಿಗಳಿಗೆ “ಅಮ್ಮ ಕಲಾವಿದರು ಬಹರೈನ್ ” ಇವರಿಂದ ತುಳು ಸಾಮಾಜಿಕ ಹಾಸ್ಯ ನಾಟಕ “ಪಿರ ಬನ್ನಗ… ? “

Pinterest LinkedIn Tumblr

ಬಹರೈನ್; ಇಲ್ಲಿನ “ಅಮ್ಮ ಕಲಾವಿದರು ” ಸ್ಥಳೀಯ ಇಂಡಿಯನ್ ಕ್ಲಬ್ಬಿನ ಆಶ್ರಯದಲ್ಲಿ “ಪಿರ ಬನ್ನಗ … ? ” ಎನ್ನುವಂತಹ ತುಳು ಸಾಮಾಜಿಕ ಹಾಸ್ಯ ನಾಟಕವೊಂದನ್ನು ಇದೆ ಬರುವ ನವೆಂಬರ್ ತಿಂಗಳ ೩ ನೇ ತಾರೀಖಿನ ಶುಕ್ರವಾರದಂದು ಸಂಜೆ ಘಂಟೆ ೬ ಕ್ಕೆ ಮನಾಮದ ಇಂಡಿಯನ್ ಕ್ಲಬ್ಬಿನ ಸಭಾಂಗಣದಲ್ಲಿ ಪ್ರದರ್ಶಿಸಲಿದ್ದಾರೆ .

ದ್ವೀಪದ ಸಾಂಸ್ಕ್ರತಿಕ ರಂಗದಲ್ಲಿ ಶ್ರೀಯುತ ಮೋಹನ್ ದಾಸ್ ರೈ ಎರಂಬು ರವರ ದಕ್ಷ ಸಂಘಟನೆಯಲ್ಲಿ “ಅಮ್ಮ ಕಲಾವಿದರು ” ಇದಾಗಲೇ ಅನೇಕ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನೀಡಿ ಚಿರಪರಿಚಿತವಾಗಿದ್ದು ಬರುವ ತಿಂಗಳು ಪ್ರದರ್ಶಿಸಲ್ಪಡುವ ಈ ತುಳು ನಾಟಕವು ದ್ವೀಪದ ನಾಟಕ ಪ್ರೇಮಿಗಳನ್ನು ರಂಜಿಸುವುದರಲ್ಲಿ ಯಾವುದೇ ಸಂಶಯವಿಲ್ಲ .

ನಾಡಿನ ಖ್ಯಾತ ನಾಟಕ ಕರ್ತ ಶ್ರೀ ದಿನಕರ ಭಂಡಾರಿ ಕಣಂಜಾರು ರವರು ಈ ನಾಟಕವನ್ನು ರಚಿಸಿದ್ದು ದ್ವೀಪದ ಖ್ಯಾತ ನಿರ್ದೇಶಕ ರೀಯುತ ಮೋಹನ್ ದಾಸ್ ರೈ ಎರಂಬುರವರು ಈ ನಾಟಕವನ್ನು ನಿರ್ದೇಶಿಸಲಿದ್ದಾರೆ . ಈ ನಾಟಕದಲ್ಲಿ ಬರುವಂತಹ ವಿಶೇಷವಾದಂತಹ ತಬರನ ಪಾತ್ರವನ್ನು ನಿರ್ವಹಿಸಲು ನಾಡಿನ ಖ್ಯಾತ ಯುವ ಕಲಾವಿದ ಪ್ರಜ್ವಲ್ ಶೆಟ್ಟಿ ಬಂಬ್ರಾಣರವರು ದ್ವೀಪಕ್ಕೆ ಆಗಮಿಸಿ ದ್ವೀಪದ ಕಲಾ ಪ್ರೇಮಿಗಳನ್ನು ನಕ್ಕು ನಗಿಸಲಿದ್ದಾರೆ . ಈ ನಾಟಕಕ್ಕೆ ಯಕ್ಷಿತ್ ಶೆಟ್ಟಿ ಹಾಗು ದಿವ್ಯರಾಜ್ ರೈ ಯವರು ಸಂಗೀತವನ್ನು ನೀಡಲಿದ್ದಾರೆ . ನಿರ್ದೇಶಕ ಮೋಹನ್ ದಾಸ್ ರೈ ಎರಂಬು ಸೇರಿದಂತೆ ದ್ವೀಪದ ಪ್ರಭುದ್ದ ಕಲಾವಿದರುಗಳು ಈ ನಾಟಕದಲ್ಲಿ ಅಭಿನಯಿಸಿ ಎಲ್ಲರನ್ನೂ ರಂಜಿಸಲಿದ್ದಾರೆ .

ಈ ನಾಟಕಕ್ಕೆ ಪ್ರವೇಶ ಉಚಿತವಾಗಿದ್ದು ನಾಟಕದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಶ್ರೀ ಮೋಹನ್ ದಾಸ್ ರೈ ಎರಂಬುರವರನ್ನು ದೂರವಾಣಿ ಸಂಖ್ಯೆ 34496342 ಮುಖೇನ ಸಂಪರ್ಕಿಸಬಹುದು .

ವರದಿ- ಕಮಲಾಕ್ಷ ಅಮೀನ್

Comments are closed.