ಕರಾವಳಿ

ಅಕ್ರಮ ಜಾನುವಾರು ಸಾಗಾಟ: ಮೂವರು ಆರೋಪಿಗಳಿಗೆ ಶೋಧ: ಎಸ್ಪಿ ಸಂಜೀವ ಪಾಟೀಲ್

Pinterest LinkedIn Tumblr

ಉಡುಪಿ: ಅ.17ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಂಡ್ಲೂರಿನಲ್ಲಿ ನಡೆದ ಅಕ್ರಮ ಜಾನುವಾರು ಸಾಗಾಟ ಹಾಗೂ ಪೊಲೀಸ್ ಪೇದೆ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ತಂತೆ ಉಡುಪಿಯ ಪೊಲೀಸರು ಓರ್ವವನ್ನು ಎರೆಸ್ಟ್ ಮಾಡಿದ್ದು ಉಳಿದ ಆರೊಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಗುಲ್ವಾಡಿಯ ನಿವಾಸಿ ಮೊಐದೀನ್ ಅಲಿಯಾಸ್ ಮೊಐದೀನ್ ಬ್ಯಾರಿ (43) ಎರೆಸ್ಟ್ ಮಾಡಲಾಗಿದ್ದು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿದಿಸಿದೆ.

ಕಂಡ್ಲೂರಿನಲ್ಲಿ ಪಿಕ ಅಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಗಾಟ ಮಾಡಿದ್ದು ಇದನ್ನು ತಡೆಯಲು ಯತ್ನಿಸಿದ್ದ ಪೇದೆ ಪ್ರಕಾಶ್ ನಾಗಣ್ನ ರನ್ನು ಗುದ್ದಿ ವಾಹನದಿಂದ ಆರೋಪಿಗಳು ಪರಾರಿಯಾಗಿದ್ದರು. ಬಳಿಕ ಗುಲ್ವಾಡಿ ಸೇತುವೆ ಬಳಿ ವಾಹನ ಅಡ್ಡಕಟ್ಟಲಾಗಿತ್ತು. ಆದ್ರೆ ಆರೋಪಿಗಳು ಪರಾರಿಯಾಗಿದ್ದರು.ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತ ಆರೋಪಿ ನೀಡಿರುವ ಮಾಹಿತಿಯಂತೆ ಮತ್ತೆ ಮೂವರು ಆರೋಪಿಗಳಿದ್ದು ಅವರು ಹೊರ ಜಿಲ್ಲೆಯವರು. ಆರೋಪಿಯನ್ನು ಪೊಲೀಸ್ ಕಸ್ಟಡಿ ಪಡೆದ ಬಳಿಕ ಎಲ್ಲಾ ತನಿಖೆ ನಡೆಸಿ ಉಳಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಉಡುಪಿ ಜಿಲ್ಲಾ ಎಸ್ಪಿ ಡಾ. ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

Comments are closed.