ಗಲ್ಫ್

ದುಬೈಯಲ್ಲಿ ಗಾನ ಕೋಗಿಲೆಗಳ ಕಲರವ ! ಮನಕ್ಕೆ ಮುದ ನೀಡಿದ ‘ಸಂಗೀತ ಸಂಗಮ -2017’

Pinterest LinkedIn Tumblr

 

Photo: Ashok Belman

ದುಬೈ: ಕನಸಿನ ನಗರಿ ದುಬೈಯಲ್ಲಿ ಶುಕ್ರವಾರ ರಾತ್ರಿ ಕೇಳಿ ಬಂದ ಕನ್ನಡ ಗಾನ ಕೋಗಿಲೆಗಳ ಕಲರವ ಸಂಗೀತ ಪ್ರೇಮಿಗಳ ಮೈಮನಸ್ಸನ್ನು ಪುಳಕಗೊಳಿಸಿತು.

ಸಂಗೀತ ಪ್ರೇಮಿಗಳ ಮನಕ್ಕೆ ಮುದ ನೀಡಿದ್ದು, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಶ್ರೀಲಲಿತಾ ಈವೆಂಟ್ಸ್ ಹಾಗೂ ವೆಂಚುರಾ ರಿಸೋರ್ಸಸ್ ದುಬೈಯ ಶೇಖ್ ರಾಶಿದ್ ಸಭಾಂಗಣದ ಇಂಡಿಯನ್ ಹೈಸ್ಕೂಲ್ನಲ್ಲಿ ಆಯೋಜಿಸಿದ್ದ ಕನ್ನಡ ಕೋಗಿಲೆಗಳ ‘ಸಂಗೀತ ಸಂಗಮ’ ಕಾರ್ಯಕ್ರಮ.

 

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಇನ್ನೊಂದೆಡೆ ಕನ್ನಡದ ಹೆಸರಾಂತ ಗಾಯಕ, ಕಲಾವಿದರಿಂದ ಹರಿದು ಬಂದ ಸಂಗೀತ ರಸಗಂಗೆ ಸಂಗೀತ ಪ್ರಿಯರಿಗೆ ಸಂಗೀತ ರಸದೌತಣ ನೀಡಿತು.

ಕಾರ್ಯಕ್ರಮದಲ್ಲಿ ಮುಖ್ಯ ಆಕರ್ಷಣೆಯಾಗಿದ್ದ ಕನ್ನಡದ ಹೆಸರಾಂತ ಚಲನಚಿತ್ರ ಗಾಯಕ ‘ಮಾಧುರ್ಯ ಸ್ವರ ಸಾರ್ವಭೌಮ’ ರಾಜೇಶ್ ಕೃಷ್ಣನ್ ಅವರು ಹಾಡಲಿಕ್ಕೆ ವೇದಿಕೆ ಬರುತ್ತಿದ್ದಂತೆ ಜನ ಚಪ್ಪಾಳೆ ಮೂಲಕ ಅವರಿಗೆ ಸಾಥ್ ನೀಡಿದರು.

ರಾಜೇಶ್ ಕೃಷ್ಣನ್ ಅವರ ಸುಮಧುರವಾದ ಕಂಠದಿಂದ ಹೊರಹೊಮ್ಮಿದ ಹಾಡನ್ನು ಕೇಳಿ ಸಂಗೀತ ಪ್ರಿಯರು ಪುಳಕಿತರಾದರು.

ಜೊತೆಗೆ ‘ಕನ್ನಡದ ಗಾರುಡಿಗ’- ಹೇಮಂತ್, ‘ಮಲೆನಾಡ ಕೋಗಿಲೆಗಳು’ ಎಂದೇ ಪ್ರಸಿದ್ಧರಾದ -ಮಾನಸ ಹೊಳ್ಳ ಮತ್ತು ಪ್ರಾರ್ಥನಾ ಹಾಗೂ ಸರಿಗಮಪ little champs (season 10 ) ವಿಜೇತೆ -ಸುಪ್ರಿಯಾ, ದುಬೈ ನ ಖ್ಯಾತ ಉದ್ಯಮಿ ಹಾಗು ‘ಮಾರ್ಚ್ 22 ‘ ಸಿನೆಮಾ ನಿರ್ಮಾಪಕರಾಗಿರುವ ಗಲ್ಫ್’ನ ಚಿರಪರಿಚಿತ ಗಾಯಕ ಹರೀಶ್ ಶೆರಿಗಾರ್ ಅವರು ತಮ್ಮ ಸುಶ್ರಾವ್ಯವಾದ ಹಾಡಿನ ಮೂಲಕ ರಸದೌತಣವನ್ನು ನೀಡಿ ರಂಜಿಸಿದರು.

”Comedy ಕಿಲಾಡಿಗಳು’ ಎಂಬ ಹಾಸ್ಯ ಕಾರ್ಯಕ್ರಮದಲ್ಲಿ 2ನೇ ಸ್ಥಾನವನ್ನು ಮುಡಿಗೇರಿಸಿಕೊಂಡ ‘ಮಾತಿನ ಮಲ್ಲಿ’ ಕುಮಾರಿ ನಯನ ಅವರೊಂದಿಗೆ, GG ಎಂದೇ ಪ್ರಸಿದ್ಧರಾದ ಗೋವಿಂದೇಗೌಡ ಹಾಗು ಸ್ತ್ರೀ ಪಾತ್ರದಲ್ಲಿ ಜನಮನ ರಂಜಿಸಿದ ಆನೇಪಟಾಕಿ ಅನೀಷ, ಅರುಣ್ ಮುತುಗದುರ್ ಅವರ ಹಾಸ್ಯ ಜುಗಲ್ಬಂಧಿ ನಗೆಗಡಲಲ್ಲಿ ತೇಲುವಂತೆ ಮಾಡಿತು.

ಕಲಾವಿದರಾದ ಸಂದೀಪ ಕೊಳಲು ಹಾಗು ಸ್ಯಾಕ್ಸೋಫೋನ್, ಅಭಿಷೇಕ್ Rythm Pad, , ಪ್ರಾರ್ಥನ Baas Guitar, ಪ್ರದ್ಯುಮ್ನ ತಬಲ, ಕಾರ್ತಿಕ್ Lead Guitar ಹಾಗು ದೀಪಕ್ Key Board ಸಂಗೀತಕ್ಕೆ ಇನ್ನಷ್ಟು ಮೆರುಗು ನೀಡಿತು.

ಭರತನಾಟ್ಯ ಪ್ರವೀಣೆಯರಾದ ನಾಟ್ಯಮಯೂರಿ ಶಾಲಿನಿ ಹಾಗು ನಾಟ್ಯಮಯೂರಿ ಮಾಲಿನಿ ಸಹೋದರಿಯರ ಅದ್ಬುತ ನೃತ್ಯ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಜೊತೆಗೆ ದುಬೈನ RIVA ಡಾನ್ಸ್ & ಮ್ಯೂಸಿಕ್ ಇನ್ಸ್ಟಿಟ್ಯೂಟನ ಮಕ್ಕಳು ತಮ್ಮ ನವೀನ ನೃತ್ಯದ ಮೂಲಕ ಎಲ್ಲರನ್ನು ರಂಜಿಸಿದರು. ರವಿಸಂತು ಹಾಗು ನಾಗೇಶ್ ವಿಜಾಪುರ ಅವರ ಕಾರ್ಯಕ್ರಮ ನಿರೂಪಣೆಯು ಗಮನ ಸೆಳೆಯಿತು.

Comments are closed.