
ಪಡುಬಿದ್ರಿ, ಅಕ್ಟೋಬರ್.20: ಹಿರಿಯ ಪತ್ರಕರ್ತ ಜಯಂತ್ ಪಡುಬಿದ್ರಿ ಅಲ್ಪಕಾಲದ ಅಸೌಖ್ಯದಿಂದಾಗಿ ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ.
ಕಡಂದಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ‘ಏಂಜೆಲ್ ಹಾರ್ಡ್’ ಎಂಬ ಬಣ್ಣದ ಕಾರ್ಖಾನೆ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿದ್ದ ಜಯಂತ್ ಪಡುಬಿದ್ರಿ ಆ ಬಳಿಕ ಪಡುಬಿದ್ರಿಯ ಕೊಜೆಂಟ್ರಿಕ್ಸ್ ಕಂಪನಿ ಸ್ಥಗಿತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಕರಾವಳಿಯ ಪರಿಸರಪರ ಹೋರಾಟಗಾರರಾಗಿದ್ದು ವಿವಿಧ ಪತ್ರಿಕೆಗಳಲ್ಲಿ ದುಡಿದಿದ್ದ ಜಯಂತ್ ಪಡುಬಿದ್ರಿ ತುಳು ಭಾಷೆ, ಸಂಸ್ಕೃತಿ, ವಿಜ್ಞಾನ ಎಲ್ಲ ವಿಷಯದಲ್ಲೂ ಆಸಕ್ತಿ ಹೊಂದಿದ್ದರು. ಆಕರ್ಷಕ ಶೈಲಿಯ ಬರಹಗಾರರಾಗಿದ್ದ ಜಯಂತ್ ಕೆಲಕಾಲದಿಂದ ಅಸೌಖ್ಯಕ್ಕೆ ಈಡಾಗಿದ್ದರು ಎನ್ನಲಾಗಿದೆ.
Senior journalist Jayanth Padubidri passes away
Mangaluru, Oct 20: Senior journalist Jayanth Padubidri passed away on Friday, October 20. He was suffering from health ailments since a while.
Jayanth Padubidiri (58), who started his career with ‘Udayavani’, later worked for ‘Jana Vahini’ and ‘Jaya Kirana’ newspapers. He was a well known writer and a coloumist.
He was spearheading the campaign against Angel Hard Factory and Cogentrics Company for their shut down.
He had a keen interest in Tulu language, culture, science and was known for his creative writings.
Jayanth was a bachelor.
Comments are closed.