ಕರಾವಳಿ

ಬಹರೈನ್‌ಗೆ ಹೊರಟಿದ್ದ ವಿಮಾನಯಾನಿ ಬಳಿ ಲಕ್ಷಾಂತರ ರೂ.ಮೌಲ್ಯದ ಗಾಂಜಾ ಪತ್ತೆ : ಆರೋಪಿ ಪೊಲೀಸ್ ವಶ

Pinterest LinkedIn Tumblr

(ಕಡತ ಚಿತ್ರ)

ಮಂಗಳೂರು, ಅಕ್ಟೋಬರ್ .20: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಹರೈನ್‌ಗೆ ತೆರಳಬೇಕಿದ್ದ ಪ್ರಯಾಣಿಕರೊಬ್ಬರ ಬಳಿ ಪರಿಶೀಲನೆ ವೇಳೆ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಯಾಣಿಕನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಬಡಾಜೆ ಮಂಜೇಶ್ವರದ ಅಭಿಲಾಷ್ ಪ್ರದೀಷ್ ಸುವರ್ಣ (20) ಎಂದು ಗುರುತಿಸಲಾಗಿದೆ.

ಅಭಿಲಾಷ್ ಇಂದು ಬೆಳಗ್ಗೆ 7:20ಕ್ಕೆ ಏರ್ ಇಂಡಿಯಾ 889 ವಿಮಾನದಲ್ಲಿ ದುಬೈಗೆ ಯಾನ ಬೆಳಸಲಿದ್ದ. ಅದಕ್ಕೂ ಮೊದಲು ಪ್ರಯಾಣಿಕರನ್ನು ಏರ್ ಇಂಡಿಯಾ ಪರಿಶೀಲಿಸಿದಾಗ ಅಭಿಲಾಷ್ ಬ್ಯಾಗಿನಲ್ಲಿ ಗಾಂಜಾ ಪತ್ತೆಯಾಗಿದ್ದು, ಆರೋಪಿಯಿಂದ ಸುಮಾರು ಒಂದು ಲಕ್ಷ ರೂ. ಮೌಲ್ಯದ 4 ಕೆ.ಜಿ. ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಕೇರಳ- ಕೋಟಕಲ್‌ನ ವ್ಯಕ್ತಿಯೋರ್ವ ಬಹರೈನ್‌ಗೆ ಸಾಗಿಸಲು ತನ್ನ ಬಳಿ ಗಾಂಜಾ ನೀಡಿರುವುದಾಗಿ ಆರೋಪಿ ತನಿಖೆಯ ವೇಳೆ ಬಾಯಿ ಬಿಟ್ಟಿರುವುದಾಗಿ ಅಧಿಕಾರಿಗಳ ಮೂಲಗಳಿಂದ ತಿಳಿಸಿದು ಬಂದಿದೆ. ಆರೋಪಿಯನ್ನು ಮುಂದಿನ ತನಿಖೆಗೆ ಬಜ್ಪೆ ಠಾಣಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

Comments are closed.