ಕರಾವಳಿ

ಬಜ್ಜೋಡಿಯಲ್ಲಿ ಗಾಂಜಾ ಸೇವನೆಯಲ್ಲಿ ತೊಡಗಿದ್ದ ಏಳು ಯುವಕರು ಪೊಲೀಸ್ ಬಲೆಗೆ..

Pinterest LinkedIn Tumblr

ಮಂಗಳೂರು: ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯೊಂದರಲ್ಲಿ ನಗರದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಏಳು ಮಂದಿ ಯುವಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಜ್ಜೋಡಿ ಎರಡನೇ ಅಡ್ಡ ರಸ್ತೆಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪಿಗಳಾದ ಬಿಕರ್ನಕಟ್ಟೆಯ ಅಜೇಯ್ ಸೆಬಾಸ್ಟಿಯನ್ ಲೋಬೊ (24),ಪಡೀಲ್ ಅಳಪೆಯ ದೇವರಾಜ್ (21), ಮೂಡುಶೆಡ್ಡೆಯ ಅಕ್ಷಯ್ ಸಾಲಿಯಾನ್ (21),ಉರ್ವ ಹ್ಯೊಗೆಬೈಲಿನ ಆಲ್ವಿನ್ ಕ್ಲಿಂಟನ್ (24), ಪಡೀಲ್ ನ ಆದಿತ್ಯ (18), ಎಂ.ಜಿ. ರಸ್ತೆಯ ಅಮೋಘ್ ಹೆಗ್ಡೆ (27) ಹಾಗೂ ಬಜ್ಜೋಡಿಯ ಜೋಯೆಲ್ ಫರ್ನಾಂಡಿಸ್ (27) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಸುನೀಲ್ ನಾಯಕ್ ಹಾಗೂ ಅವರ ತಂಡ ಬಜ್ಜೋಡಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದಾಗ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಕಂಕನಾಡಿ ನಗರ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್, ಕಾನೂನು ಸುವ್ಯವಸ್ಥೆಯ ಡಿಸಿಪಿಯ ಹನುಮಂತಯ್ಯ, ಅಪರಾಧ ಮತ್ತು ಸಂಚಾರಿ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

Comments are closed.